________________
೪೮೮ / ಪಂಪಭಾರತಂ
ಕoll
ಆನಿರೆಯೇನಿವುದು ಗಡ
ಮೀ ನಾಲ್ಕುಂ ಬಲಮಿದ ಪರಿಭವಮನಗಂ | ದೇನುಂ ಮಾಣದ ಭೀಮನ
ನೂನಬಲಂ ಬಂದು ತಾಗಿದಂ ಕುರುಬಲದೊಳ್ ||
eroll
ವ|| ಅಂತು ಕುರುಬಲದ ಕರಿಘಟೆಗಳಂ ನುಂಗುವಂತೆ ದಸದಸೆಗೆ ಮಿಳಿರ್ದು ಮಿಳ್ಳಿಸಿದ ಸಿಂಗದ ಪದವಿಗೆಯುಂ ಕುರುಬಲಕ್ಕೆ ಮತ್ತು ಪರೆವಂತೆ ಮೊರೆದು ಪರಿವ ತನ್ನ ಕಿಸುವೊನ್ನ ರಥಮುಂ ಭಯಂಕರಾಕಾರಮಾಗೆ ಪಗೆವರ ಗಂಟಲಿನೊತ್ತುವಂತ ಪೌಂಡ್ರವೆಂಬ ಶಂಖಮನೊತ್ತಿ ಮುಂದೊಡ್ಡಿದೊಡ್ಡೆಲ್ಲಮನಂಬಿನ ಬಂಬಲೊಳೆ ಪಡಲ್ವಡಿಸುತ್ತುಂ ಬರ್ಪ ಭೀಮಸೇನಂಗೆ ದುರ್ಯೊಧನನದಿರದಿದಿರಾಂತಾಗಳ್
62
ಎಂತಿದಿರಾಂತೆಯಂತ ಕಲಿಯಾಗೊಳಸೋರದಿರೆಂದು ಭೀಮನೋ ರಂತ ಕನಲ್ಲು ತಿಣ್ಣಮಿಸಿ ಪಾಯ್ದ ಸರಲ್ಗಳನೆಯಲೀಯದಾಂ | ತಾಂತು ನಿರಂತರಂ ತಳೆದು ಸೂತನನಾತನ ವಾಜಿಯಂ ಮಹೀ ಶಂ ತೆಗೆದಚ್ಚನಚ್ಚ ಬಿಸುನೆತ್ತರ ಸುಟ್ಟುರ ಸೂಸುವನ್ನೆಗಂ ||
೯೮
ಅಪ್ಪಳಿಸಿ ಹೊಡೆಯಲು ಬಿಸಿರಕ್ತದ ಜರಿಗಳು ಉಬ್ಬಿ ಹರಿದುವು. ದೊಡ್ಡ ಝರಿಗಳಿಂದ ಕೂಡಿದ ಕೆಂಪುಕಲ್ಲಿನ ಬೆಟ್ಟಗಳಂತೆ ಆನೆಗಳು ಕೆಳಗೆ ಬಿದ್ದು ನಾಶವಾಗಿ ರಾಶಿಯಾದುವು. ೯೭.ಈ ಚತುರಂಗಬಲವು ನಾನಿದ್ದರೂ ಯುದ್ಧ ಮಾಡುತ್ತದೆಯಲ್ಲವೇ? ಇದಲ್ಲವೇ ನನಗೆ ಅವಮಾನಕರ' ಎಂದು ಯಾವುದನ್ನೂ ಲಕ್ಷಿಸದೆ ಸ್ವಲ್ಪವೂ ಕಡಿಮೆ ಯಿಲ್ಲದ ಶಕ್ತಿಯುಳ್ಳ ಭೀಮನು ಕೌರವಸೈನ್ಯವನ್ನು ಬಂದು ತಾಗಿದನು. ವ| ಕೌರವಸೈನ್ಯದ ಆನೆಗಳ ಸಮೂಹವನ್ನು ನುಂಗುವ ಹಾಗೆ ದಿಕ್ಕುದಿಕ್ಕಿಗೂ ಕಂಪಿಸಿ ಚಲಿಸುತ್ತಿದ್ದ ಸಿಂಹಧ್ವಜವೂ ಕೌರವಸೈನ್ಯಕ್ಕೆ ಮೃತ್ಯುದೇವತೆಯೇ ಹಲ್ಲುಕಡಿಯುವಂತೆ ಶಬ್ದಮಾಡಿ ಕೊಂಡು ಬರುತ್ತಿದೆಯೋ ಎಂಬಂತೆ ಹರಿದು ಬರುತ್ತಿದ್ದ ತಾಮ್ರದ ತೇರೂ ಭಯಂಕರ ವಾಗಿರಲು ಶತ್ರುಗಳ ಗಂಟಲನ್ನು ಒತ್ತುವ ಹಾಗೆ ಪೌಂಡ್ರವೆಂಬ ಶಂಖವನ್ನು ಊದುತ್ತ, ಮುಂದೆ ಒಡ್ಡಿದ್ದ ಸೈನ್ಯವೆಲ್ಲವನ್ನೂ ಬಾಣಗಳ ಸಮೂಹದಿಂದ ಕೆಳಗೆ ಉರುಳಿಸುತ್ತ ಬರುತ್ತಿದ್ದ ಭೀಮಸೇನನಿಗೆ ಹೆದರದೆ ದುರ್ಯೋಧನನು ಪ್ರತಿಭಟಿಸಿದನು-೯೮. ಹೇಗೆ ಎದುರಿಸಿದೆಯೋ ಹಾಗೆಯೇ ಶೂರನೂ ಆಗು; ಹಿಂಜರಿಯಬೇಡ ಎಂದು ಭೀಮನು ಒಂದೇ ಸಮನಾಗಿ ಕೋಪಿಸಿಕೊಂಡು ಬಲವಾಗಿ ಬಾಣಪ್ರಯೋಗ ಮಾಡಲು (ಹಾಗೆ) ಹಾರಿಬರುತ್ತಿದ್ದ ಬಾಣಗಳು ತನ್ನಲ್ಲಿಗೆ ಬರಲು ಅವಕಾಶಕೊಡದೆ ದುರ್ಯೋಧನನು ಅದನ್ನು ಪ್ರತಿಭಟಿಸಿ ಒಂದೇ ಸಮನಾಗಿ ಕತ್ತರಿಸಿ (ಭೀಮನ) ಸಾರಥಿಯನ್ನೂ ಆತನ ಕುದುರೆಯನ್ನೂ ಬಾಣದಿಂದ ಹೊಡೆದು ಸ್ವಚ್ಛವಾದ ಬಿಸಿರಕ್ತದ ಪ್ರವಾಹವನ್ನು