________________
ದಶಮಾಶ್ವಾಸಂ / ೪೮೫ ವ|| ಅಂತು ತಾಗಿದಾಗಳ್ ಚಂ|| ಕುದುರೆಯ ಬಣ್ಣದಿಂ ರಥದ ತೋರ್ಕೆಯಿಸಿದ ಚಿತ್ರಕೇತು ವೃಂ
ದದ ಕುಲುಪಿಂದುದಗ್ರ ರಥಚೋದಕ ಚಿಹ್ನದಿನಾತನೀತನಂ | ಬುದನಳಿದೂರ್ವರೋರ್ವರನೆ ಮಚ್ಚರದಿಂ ಗಸನ್ನೆಗೆಯ್ತಿದಿ
ರ್ಚಿದ ಪದದೂಳ ಪತಿಮಯಮಂಬಿನಿತಾಯ್ತು ಸಮಸ್ತ ದಿಕ್ತಟಂ | ೮೭ ಕ೦ll ಪರಶು ಶರ ನಿಕರದಿಂ ಕು
ಮರಿಗಡಿದವೊಲೊಡನೆ ಕಡಿಯ ರಥಿಗಳ ರಥದಿಂ | ಧರೆಗಿಳಿದು ವಿರಥರತಿರಥ ರರೆಬರ್ ಮೇಲ್ವಾಯ್ತು ರಥಿಗಳಂ ಸುರಿಗಿಳಿದರ್ || ತರಂ ಪಾಯಿಸಿ ನೋಯಿಸಿ. ಪಾರುವ ಕುದುರೆಗಳನರೆಬರೆರ್ದೆಯುರಿಯಚ್ಚರ್ | ಸಾರಥಿಯ ರಥಿಯ ತಲೆಗಳ ನೂರೊಂದಸ್ತದೊಳೆ ಪಾಟಿ ಜೀಜಟ್ಟಿನೆಗಂ ನೆತ್ತರ ಕಸ ಗಾಲಿಗ ಇತ್ತಂ ತಳರದ ಜಿಗಿಟ್ಟು ನಿಲೆ ಧರೆಗಿಳಿದಾ | ರ್ದ ಸರಿಯಿಸಿದರೇಂ ಮ
↑ತ್ತುದೂ ರಥಕಲ್ಪಮಲ್ಲಿ ಸೂತರ್ ಕೆಲಬರ್ | ವ|| ಅಂತುಭಯ ವರೂಥಿನಿಯ ವರೂಥಂಗಳ್ ಮಲ್ಲಾಮಲಿಯಾಗೆ ಕಾದುವಾಗಳ
ವ|| ಹಾಗೆ ತಾಗಿದಾಗ-೮೭. ಕುದುರೆಯ ಬಣ್ಣದಿಂದಲೂ ರಥಗಳ ತೋರಿಕೆ ಯಿಂದಲೂ ಎತ್ತಿ ಕಟ್ಟಿರುವ ಚಿತ್ರಖಚಿತವಾದ ಧ್ವಜಗಳ ಗುರುತಿನಿಂದಲೂ ಶ್ರೇಷ್ಠರಾದ ಸಾರಥಿಗಳ ಚಿಹ್ನೆಗಳಿಂದಲೂ ಪರಸ್ಪರ ಪರಿಚಯ ಮಾಡಿಕೊಂಡು (ಗುರುತು ಹಿಡಿದು) ಒಬ್ಬರನ್ನೊಬ್ಬರು ಮತ್ಸರದಿಂದ ಬಾಣದ ಗರಿಯ ಮೂಲಕ ಸನ್ನೆಮಾಡಿ ಎದುರಿಸಿದ ಸಂದರ್ಭದಲ್ಲಿ ಸಮಸ್ತವಾದ ದಿಕ್ತಟವೂ ಬಾಣಮಯವೆನ್ನುವ ಹಾಗಾಯಿತು. ೮೮. ಕೊಡಲಿಯಾಕಾರದ ಬಾಣಗಳ ಸಮೂಹದಿಂದ ಕಾಡಿನ ಮರಗಳನ್ನು ತರಿಯುವಂತೆ ತಕ್ಷಣವೇ ತರಿದುಹಾಕಲು ರಥದಲ್ಲಿದ್ದವರು ಭೂಮಿಗಿಳಿದು ರಥವಿಲ್ಲದ ಅನೇಕ ಅತಿರಥರ ಮೇಲೆ ಬಿದ್ದು ರಥದಲ್ಲಿದ್ದವರನ್ನು ಕತ್ತಿಯಿಂದ ಕತ್ತರಿಸಿದರು. ೮೯. ಕೆಲವರು ತೇರನ್ನು ಹರಿಯಿಸಿ ಹಾರುತ್ತಿರುವ ಕುದುರೆಗಳನ್ನು ನೋಯಿಸಿ ಸಾರಥಿಯ ಮತ್ತು ರಥದೊಳಗಿರುವವನ ತಲೆಗಳನ್ನು ಒಂದೇ ಬಾಣದಿಂದ ಹಾರಿ ಜೀರೆಂದು ಶಬ್ದ ಮಾಡುವ ಹಾಗೆ ಹೊಡೆದರು. ೯೦. ರಕ್ತದ ಕೆಸರಿನಲ್ಲಿ ಚಕ್ರಗಳು ಹೂತುಹೋಗಿ ಯಾವ ಕಡೆಯೂ ಚಲಿಸದೆ ಅಂಟಿಕೊಂಡು ನಿಲ್ಲಲು ಭೂಮಿಗಿಳಿದು ಆರ್ಭಟಮಾಡಿ ಕೆಲವರು ಸೂತರು ಎತ್ತಿ ಹರಿಯುವ ಹಾಗೆ ಮಾಡಿದರು. ಆ ಸಮಯದಲ್ಲಿ ಅಲ್ಲಿ ಅವರ ರಥಕಲ್ಪಕೌಶಲವು ಅದ್ಭುತವಾಗಿದ್ದಿತು. ವ|| ಹಾಗೆ ಎರಡುಸೈನ್ಯದ ತೇರುಗಳು ಪರಸ್ಪರ ಎದುರೆದುರಿಗೆ ಯುದ್ಧ