________________
ದಶಮಾಶ್ವಾಸಂ / ೪೮೩ ವlು ಅಂತೆರಡುಂ ಬಲದ ದಂಗಳ ಕೊಲಾಟಮಾಡುವಂತೆ ಕಿಟೆದಾನುಂ ಬೇಗಂ ತಟ್ಟುಪೊಟೊಂದು ಕೋಲ್ಕುಟ್ಟಿ ಪತ್ತೆಂಟು ಸಾಸಿರ ಕುದುರೆಯಟ್ಟೆಯುಮೆಂಟು ನೆತ್ತರ. ಕಡಲ್ ಕಡಲನಟ್ಟೆಯುಂ ಕಾದಿ ಬಸಮಣಿದು ಪಂಪಿಂಗಿ ನಿಂದಾಗಳ್ ಪ್ರಳಯದುರಿಯನುರುಳಿ ಮಾಡಿದಂತಾನುಂ ಬಡವಾಗ್ರಿಯನನುವಿಸಿದಂತಾನುಂ ಬಯಸಿಡಿಲ ಕಿಡಿಗಳ ಬಳಗಮನೊಳಗು ಮಾಡಿದಂತಾನುಂ ಗೊಂದಣಿಸಿ ಸಂದಣಿಸಿ ನಿಂದಣಿಯನೆರಡುಂ ಬಲದ ಕಡಿತಲೆಯ ನಾಯಕರ್ ಕೆಯೊಂದು ಬಳುಗಡದವಾಜುವಾತಿ ಸಲಗವಾಡಿ ಗೂಳಿಸೊರ್ಕಿ ಮಾರ್ಕೊಂಡು ಕಾದಕoll ಪುಸಿ ನಸುವಂಚನೆ ನೋರ್ವನು
ವಸಿದಗಲಿತು ತಕ್ಕುದಕ್ಕು ಪಗೆ ಕೆಯ್ಯಗೆ ಕ | ಯುಸುರಿ ನುಸುಳೆಂಬ ಕೇಣದ ಕುಸುರಿಯನಳದಿಳಿದು ಮಣಿದು ನಡೆದುಆದರೆಬರ್ 11* ೮೧ . ಬಳಸಿಡಿಲೆಜಪತಿರೆ ಬಂ ದೆಂಗಿದರಂ ತಳು ಬಾಳ ಕೀಚಿನೆಯಿಂ ತ ಇಜದ ದುಬ್ರಮೆಂಬಿವ . ನಡೆದಿವೆದಿರ್ ಪೆಣಬಣಂಬೆಗಳ ನೆಗೆವಿನೆಗಂ ||
೮೨
ನೆಲಕ್ಕೆ ಬೀಳಲು ಬಿಡದಂತೆ ಹದ್ದುಗಳು ಮೇಲಕ್ಕೆ ಹಾರಿ ಕುಡಿಯುತ್ತಿದ್ದುವು. ಒಂದೇ ಸಲ ಹೊಡೆದ ಹೊಡೆತದಿಂದ ಮೋಡಗಳ ಸಂದುಗಳೊಳಕ್ಕೆ ಹಾರಿ ಸಿಕ್ಕಿಕೊಂಡಿರುವ ತಲೆಗಳು ಜೇನಿನ ಗೂಡುಗಳನ್ನೇ ಹೋಲಿದುವು. ಕುದುರೆಯ ಸೈನ್ಯದಲ್ಲಿ ಕಾಳಗವು ಎಷ್ಟು ಆಶ್ಚರ್ಯಕರವಾಯಿತೋ? ವll ಹಾಗೆ ಎರಡು ಸೈನ್ಯದ ಸಾಮಾನ್ಯದಳಗಳೂ ಕೋಲಾಟವಾಡುವ ಹಾಗೆ ಸ್ವಲ್ಪ ಹೊತ್ತು ಥಟ್ ಪಟ್ ಎಂದು ಬಾಣಗಳಿಂದ ಹೊಡೆದಾಡಲು ಹತ್ತೆಂಟುಸಾವಿರ ಕುದುರೆಯ ಶರೀರಗಳು ನಾಶವಾದವು. ಏಳೆಂಟು ಸಮುದ್ರಗಳು ಸಮುದ್ರವನ್ನೂ ಮುಂದಕ್ಕೆ ನೂಕುವಂತೆ ಹರಿದುವು. ಅಶ್ವಾರೋಹಿಗಳು ಕಾದಿ ಶಕ್ತಿಗುಂದಿ ಹಿಂಜರಿದು ನಿಂದಾಗ ಎರಡು ಪಕ್ಷದ ಕತ್ತಿಯ ನಾಯಕರು ಪ್ರಳಯ ಕಾಲದ ಉರಿಯನ್ನು ಉಂಡಮಾಡಿದ ಹಾಗೂ ಬಡಬಾಗ್ನಿಯನ್ನು ಒಟ್ಟುಗೂಡಿಸಿದ ಹಾಗೂ ಬರಸಿಡಿಲಿನ ಕಿಡಿಗಳ ಸಮೂಹವನ್ನು ತನ್ನಲ್ಲಿ ಸೇರಿಕೊಂಡ ಹಾಗೂ ಗುಂಪಾಗಿ ಒಂದುಗೂಡಿ ನಿಂತ ಸೇನೆಯ ಸಾಲನ್ನು ವಹಿಸಿಕೊಂಡು ನರಿಯಂತೆ ಕೂಗಿ ಒಂದೇ ನೆಗೆತವನ್ನು ಹಾರಿ ಕತ್ತಿಗಳನ್ನು ಝಳಪಿಸಿ ಸೊಕ್ಕಿನಿಂದ ಪ್ರತಿಭಟಿಸಿ ಕಾದಿದರು. ೮೧. ಪುಸಿ, ನಸುವಂಚನೆ, ನೋರ್ವನುವಿಸಿದಗಲಿತು, ತಕ್ಕುದಕ್ಕು, ಪಗೆ, ಕಯ್ಯಗೆ, ಕಮ್ಯುಸುರಿ, ನುಸುಳು, ಎನ್ನುವ ಮಾತ್ಸರ್ಯದ ಸೂಕ್ಷ್ಮ ವಿವರವನ್ನು ತಿಳಿದು ದಕ್ಷತೆಯಿಂದ ಹೊಡೆದು ಕೆಲವರು ಉತ್ಸಾಹಶೂನ್ಯರಾಗದೆ ಹೊಯ್ದಾಡಿದರು. ೮೨. ಬರಸಿಡಿಲು ಮೇಲೆ ಬೀಳುವಂತೆ ಮೇಲೆ ಬಿದ್ದವರನ್ನು ಸಂಧಿಸಿ ಕತ್ತಿಯ ಕೆಳತುದಿಯಿಂದ ಚೂರುಚೂರಾಗಿ ತರಿದು ಉಬ್ಬರ (?) ವೆಂಬುದನ್ನು ತಿಳಿದು
* ಈ ಪದ್ಯದಲ್ಲಿ ಸುರಗಿಕಾಳಗದ ಹಲವು ಪರಿಭಾಷಾ ಶಬ್ದಗಳಿವೆ. ಅವುಗಳ ಅರ್ಥ ಸ್ಪಷ್ಟವಲ್ಲದುದರಿಂದ ಪದ್ಯದ ಅರ್ಥವೂ ಅಸ್ಪಷ್ಟ.