________________
ಉಪೋದ್ಘಾತ | ೪೩ ಸತ್ತಂಗತ್ವಿನ್ನರಾರ್', 'ಏವುದೊ ಶುಚಿಯಿಲ್ಲದವನ ಗಂಡುಂ ತೊಂಡುಂ' 'ಏಂ ಮಹಪಾಳರೊಳಾದ ಕಾವ್ಯಗತಿಗಳ್ ಬಗೆಯ ಬಹುಪ್ರಕಾರವೋ' 'ಮೆಲ್ಲು ಬಲ್ಲನಚೆಗುಂ 'ಕಾಯ್ದ ಬೆನ್ನೀರ್ ಮನೆಸುಡದು' 'ತನ್ನಿಕ್ಕಿದ ತತ್ತಿಯನೆ ಪಾವು ನೊಣೆವಂತಕ್ಕುಂ' 'ಶೂರಂ ಭೇದೇನ ಯೋಜಯೇತ್? “ಎನಿತಾದೊಡಮೇಂ ಪ್ರಭು ಪೊಲ್ಲಕೆಯುಮೆ' 'ಭಾನುವೆ ಸಾಲದೆ ಪಗಲೆನಿತಾನುಂ ದೀವಿಗೆಗಳುರಿದೊಡೇಂ ನಂದಿದೊಡೇಂ' 'ಸೂಜಿಯ ಕೂರ್ಪು ಕುಂಬಳದೊಳಡಂಗುವಂತೆ' 'ನಷ್ಟಂ ನಷ್ಟಂ ಮೃತಂ ಮೃತಂ' 'ಆರ್ಗುಮೇಂ ಬಿದಿಯ ಕಟ್ಟಿದುದಂ ಕಳಿಯಲಾರ್ಗಮೇಂ ತೀರ್ದಪುದೇ' 'ಕಣ್ಮುರುಡಾದೊಡಮೇನೂ ಕುರುಡಾಗಲೆಲ್ಕು ನಿಮ್ಮ ಬುದ್ದಿಯುಂ' 'ಕೊಂದರ್ ಕೊಲೆ ಸಾವರ್' 'ಜಗದ್ವಾ ಪಾರಮೀಶ್ವರೇಜ್ಜೆ' ಇವುಗಳಲ್ಲಿ ಅನೇಕವು ಪ್ರತ್ಯೇಕವಾದ ನಾಣ್ಣುಡಿಯಾಗಿ ರಂಜಿಸುವುವು. ಇವುಗಳನ್ನು ಉಪಯೋಗಿಸಿರುವುದರಿಂದ ಕಾವ್ಯಕ್ಕೆ ಒಂದು ಆತ್ಮೀಯತೆಯುಂಟಾಗಿದೆ.
ಪಂಪನು 'ರೂಪಕರಾಜ್ಯದ ಚಕ್ರವರ್ತಿ.' ಅವನ ಉಪಮಾ ರೂಪಕೋತೇಕ್ಷೆಗಳು ಹಲವು ಕ್ಷೇತ್ರಗಳಿಂದ ಆಯ್ದುಕೊಂಡವು. ಅವುಗಳಲ್ಲಿ ಪ್ರತಿಯೊಂದರಲ್ಲಿಯೂ ಜೀವವಿದೆ, ಭಾರವಿದೆ, ಅರ್ಥಪುಷ್ಟಿಯಿದೆ ಮತ್ತು ವೈವಿಧ್ಯವಿದೆ. ಉಪಮಾನಗಳೆಲ್ಲವೂ ಬಹುಮಟ್ಟಿಗೆ ಮನುಷ್ಯನ ಸುತ್ತಮುತ್ತಲಿನ ಆವರಣದಿಂದ ಆರಿಸಿಕೊಂಡವು.ವಾಚಕನು ಪ್ರತಿಯೊಂದನ್ನೂ ಪ್ರತ್ಯಕ್ಷವಾಗಿ ಅನುಭವಿಸಿ ಉಪಮೇಯದ ಸ್ಪಷ್ಟಚಿತ್ರವನ್ನು ಕಾಣಬಹುದು. 'ಪಂದೆಯಂ ಪಾವಡರ್ದಂತೆ' 'ಪೊಳ್ಳುಮರನಂ ಕಿರ್ಚಳುರ್ವಂತೆ “ಉರಿಮುಟ್ಟಿದರಳೆಯಂತೆ' “ತಣಿಯುಂಡಮರ್ದ೦ ಗೋಮೂತ್ರದಿಂದ ಬಾಯೂಸಿದ ವೋಲ್' 'ಡೊಂಬರ ಕೋಡಗದಂತೆ' 'ಕೀಲೊಳ್ ಕಿಚ್ಚುಪುಟ್ಟಿ ಭೋರ್ಗರೆದುರಿವಂತೆ' 'ಆಡದಿರ್ದ ಮಡುವಂ ಪೋಲ್ಲಂ' 'ಬಾಳೆಯ ಬನಮಂ ಕಾಡಾನೆವೊಯ್ದಂತೆ' 'ದೇಗುಲಕೆ ಪೆರ್ಮರನಂ ಕಡಿವಂತೆ,' “ಕುರುಡಂ ಕಣ್ಣೆತ್ತವೊಲ್' 'ಕಯ್ಯಕೂಸನಿಕ್ಕಿದವೋಲ್' 'ಆನೆ ಮೆಟ್ಟಿದ ಕುಳುಂಪೆಯ ನೀರಂತೆ' 'ಪಣಿಯ ಬೇವಿನೆಣ್ಣೆಯೊಳ್ ತೊಯ್ದಕ್ಕಿದ ಬೆಳ್ಳುಳ್ಳಿಯ ಕಂಪಿನಂತೆ' 'ಕರಿಕಳಭ ಗರ್ಜನೆಗೇಳ ಮೃಗರಾಜನಂತೆ' 'ಕೃಶಾನುವ ನೆಲಿಲಳುರದಂತೆ' 'ಕಳಭಂ ವನಪಥಮಂ ಯೂಥಪತಿಗೆ ತೋರ್ಪಂತೆ' 'ಪುಳಿಯೊಳ್ ಕರ್ಚಿದ ಬಾಳ ಬಣ್ಣದಂತೆ', 'ಬಳೆಯಂ ಪೇರಾನೆ ಮೆಟ್ಟಿದಂತೆ' (ನೆಯ್ದಿಲ ಕಾವಂ ತುದಿಗೆಯ್ದೆ ಸೀಳ್ಯ ತೆರಿದಿಂ 'ಸಿಡಿಲೊಳ್ ಪೋರ್ವ ಸಿಡಿಲಂತೆ', 'ನೆಲನುಮಾಕಾಶಮುಮೊಂದೊಂದರೋಳ್ ತಾಗಿದಂತೆ' 'ತನ್ನ ಸಗ್ಗಮನೇಯುವುದನನುಕರಿಸುವಂತೆ' 'ಪರ್ದೆಗೆ ಸುರುಳು ಬೀಳ್ವ ಕಿರುವಕ್ಕಿಯವೋಲ್' “ಕಲ್ವಚೆಯೊಳ್ ಭೋರ್ಗರೆವ ತೊಜಯವೋಲ್' ಬಳ್ಳಳ ಬಳೆದುರಿವ ಕೇಸುರಿಯಂತೆ' 'ದೃಢಕಠಿಣ ಹೃದಯನಪ್ಪ ಹಿರಣ್ಯಾಕ್ಷನರಮಂ ಪೋಲ್ವಂತೆ', 'ಸುಟ್ಟುರೆಯೊಳಗಣ ತರಗೆಲೆಯಂತೆ' 'ಬಡಿಗೊಂಡು ಮಸಗಿ ಭೈತ್ರಮನೊಡೆವ ಮಹಾಮಕರದಂತೆ' 'ದಿನಕರನ ಬಣಿದಪ್ಪಿದ ಕಿರಣಂಗಳ್ ಕಲಿಯಂ ಕಂಡಳ್ಳಿ ತನ್ನ ಮಅಯಂ ಪೊಕ್ಕಂತೆ' 'ಆವುಗೆವುರಿಯಂತೆ' 'ಕೃಪೆಯಂ ಜವಂ ಬಿಸುಟಂತೆ' 'ದಳಂಗಳ್ ಕೋಲಾಟಮಾಡುವಂತೆ,