________________
೪೭೪ / ಪಂಪಭಾರತಂ
ಕಾಳ ನೀಳ ಜಳಧರಂಗಳ್ ಮೊಳಗುವಂತ ಮೊಗೆ ಗಗನತಳಂ ತಳಿರ್ತಂತೆ ಪೊಳೆದು ಮಿಳಿರ್ವ ಪಾಳಿ ಮಹಾಧ್ವಜಂಗಳುಂ ಗಗನಸಿಂಧು ಫೇನ ಪಟಳ ಶಂಖ ಸಂಕಾಶ ಪಾಂಡು ಛತ್ರಚಾಮರಂಗಳುಂ ಪಲವುಂ ರಾಜಚಿಹ್ನಂಗಳುಮಸೆಯ
ಚಂ
ಕನಕ ಗಿರೀಂದ್ರ ರುಂದ್ರ ಶಿಖರಸ್ಥಿತ ಬಾಳದಿನೇಶಬಿಂಬಮಂ ನೆನೆಯಿಸೆ ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದ ಭೀ 1 ಮನ ಮೊನೆಯಂ ವನೀಪಕರನಾರಯಲಟ್ಟಿ ಯುಗಾಂತವಾರ್ಧಿ ಭೋಂ ಕೆನೆ ತಳರ್ವಂದದಿಂ ತಳರಲಟ್ಟಿಪನ ಫಣೀಂದ್ರಕೇತನಂ ||
ಕಂ।।
ಸೆಕೋಲ್ ಸೆಕೋಲಿಂ ಪ
ತಲುಗಾವುದ ಬಲದ ಪವಣನನಿತಿನಿತಂದಾ | ನಡೆಯಂ ದೇವಾಸುರರೊಳ
ಮಳೆಯಂ ಕಂಡಿನಿತು ಬಲಮನಾನವನಿಪತೀ ||
೫೮
೫೯
ವl ಎಂದು ನಾಮುಂ ನಮ್ಮ ಬಲದ ನಾಯಕರನೆಡೆಯಂದೊಡ್ಡುವಮೆಂದು ದ್ರೋಣನ ಮೊನೆಗಲುವತ್ತು ಸಾಸಿರ ರಥಂಬೆರಸು ದೃಷ್ಟದ್ಯುಮ್ನನುಮನಶ್ವತ್ಥಾಮನ ಮೊನೆಗೆ ನಾಲ್ವತ್ತು ಸಾಸಿರ ರಥಂ ಬೆರಸು ಶಿಖಂಡಿಯುಮಂ ಕೃತವರ್ಮನ ಮೊನೆಗೊಂದಕ್ಕೊಹಿಣೀ ಬಲಂ ಬೆರಸು ಸಾತ್ಯಕಿಯುಮಂ ದುರ್ಯೋಧನನ ಮೊನೆಗೊಂದು ಕೋಟಿ ರಥಮುವೊಂದು ಲಕ್ಕ ಭದ್ರಹಸ್ತಿಯುಂ ಬೆರಸು ಭೀಮನುಮಂ ಬೃಹದ್ಬಳನ ಮೊನೆಗೆ ಮೂವತ್ತು ಸಾಸಿರ ರಥಂಬೆರಸಭಿಮನ್ಯುವುಮಂ ದುಶ್ಯಾಸನನ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ನಕುಲನುಮಂ
ಚಲಿಸುತ್ತಿರುವ ಧ್ವಜ ಮಹಾಧ್ವಜಗಳೂ ದೇವಗಂಗಾನದಿಯ ನೊರೆ ಮತ್ತು ಶಂಖಗಳಿಗೆ ಸಮಾನವಾದ ಬಿಳಿಯ ಬಣ್ಣದಿಂದ ಕೂಡಿದ ಛತ್ರಚಾಮರಗಳೂ ಇನ್ನೂ ಇತರ ರಾಜ್ಯಚಿಹ್ನೆಗಳೂ ಪ್ರಕಾಶಿಸುತ್ತಿರಲು-೫೮. ಮೇರುಪರ್ವತದ ವಿಶಾಲವಾದ ಶಿಖರದ ಮೇಲಿರುವ ಬಾಲಸೂರ್ಯನ ಬಿಂಬವನ್ನು ಜ್ಞಾಪಕಕ್ಕೆ ತರುತ್ತ ತನ್ನ ಸುವರ್ಣರಥದಲ್ಲಿದ್ದುಕೊಂಡು ವೈಭವದಿಂದ ಭೀಮನ ಯುದ್ಧರೀತಿಯನ್ನು ವಿಚಾರಮಾಡಿ ಬರಲು ಗೂಢಚಾರರನ್ನು ಕಳುಹಿಸಿ, ಪ್ರಳಯಕಾಲದ ಸಮುದ್ರವು ಇದ್ದಕ್ಕಿದ್ದ ಹಾಗೆ ಚಲಿಸುವಂತೆ ಚಲಿಸಲು ದುರ್ಯೋಧನನು (ಸಂದೇಶವನ್ನು) ಕಳುಹಿಸಿದನು. ೫೯, ಒಂದು ಪಕ್ಕದ ಅಂಚಿನಿಂದ ಇನ್ನೊಂದು ಪಕ್ಕದ ಅಂಚಿನವರೆಗಿರುವ ಹತ್ತಾರು ಗಾವುದ ವಿಸ್ತಾರವಾದ ಪ್ರದೇಶದಲ್ಲಿರುವ ಸೈನ್ಯದ ಪ್ರಮಾಣವನ್ನು ಅಷ್ಟಿಷ್ಟೆಂದು ನಾನು ಹೇಳಲಾರೆ, ರಾಜನೇ ದೇವಾಸುರರ ಯುದ್ಧದಲ್ಲಿಯೂ ಇಷ್ಟು ಸೈನ್ಯವನ್ನು ನಾನು ಕಂಡಿರಲಿಲ್ಲ. ವ|| ಎಂದು ನಾವೂ ನಮ್ಮ ಸೈನ್ಯದ ನಾಯಕರನ್ನು ವಿಚಾರಮಾಡಿ ಒಡೋಣ ಎಂದನು. ದ್ರೋಣನ ಸೈನ್ಯಕ್ಕೆ ಪ್ರತಿಯಾಗಿ ಅರವತ್ತು ಸಾವಿರ ರಥದೊಡನೆ ಕೂಡಿದ ದೃಷ್ಟದ್ಯುಮ್ನನನ್ನು ಗೊತ್ತುಮಾಡಿದನು. ಅಶ್ವತ್ಥಾಮನ ಸೈನ್ಯಕ್ಕೆ ನಲವತ್ತು ಸಾವಿರ ತೇರಿನಿಂದ ಕೂಡಿದ ಶಿಖಂಡಿಯನ್ನು ನೇಮಿಸಿದನು. ಕೃತವರ್ಮನ ಕಾಳಗಕ್ಕೆ ಒಂದಕ್ಕೋಹಿಣಿ ಸೈನ್ಯದಿಂದ