________________
ದಶಮಾಶ್ವಾಸಂ / ೪೬೭ ಚಂ|| ಜಳಧಿಯೊಳಾದ ಮುತ್ತುಗಳವೇಂ ಪೊಸತಾದುವ ನಿನ್ನ ತೋಳ ಬಾ
ಲೋಳೆ ಬಲಗರ್ವದಿಂ ತೆಗೆದುದರ ವಿರೋಧಿ ಮದೇಭ ಮಸ್ತಕ | ಸ್ಥಳ ಜಳರಾಶಿಯೊಳ್ ಬಳೆದ ನಿರ್ಮಳ ನಿರ್ವಣ ವೃತ್ತಮಕ್ರಿಕಾ
ವಳಿಯನ ತರ್ಪುದೆಂದು ನುಡಿದಳೊಳಾಳಿಸಿದಳ್ ನಿಜೇಶನಂ || ೪೬
ವ|| ಅಂತುಭಯ ಬಲಂಗಳೊಳಂ ವೀರಜನಜನಿತಾಳಾಪಂಗಳ್ ನಗುತಿ ವಿಕ್ರಮಾರ್ಜುನನನಂತನುಂ ತಾನುಂ ಜಲಕ್ಕನಿರೆ ಪಲ್ಲಂ ಸುಲಿದಗಣ್ಯ ಪುಣ್ಯ ತೀರ್ಥೋದಕಂಗಳಂ ಮಿಂದು ಮಂಗಳವಸದನಂಗೊಂಡು ಸಾಮಾನ್ಯಯಜ್ಞಂಗೆಯ್ದು ಪಲವುಂ ತಂದ ಪಕ್ಗಳೆಸೆಯ ನಾಂದೀಮುಖಮಂ ನಿರ್ವತಿ್ರಸಿ ಶುಭಲಕ್ಷಣಲಕ್ಷಿತನುಂ ಸನ್ನಾಹಕರ್ಮನಿರ್ಮಿತನುಂ ಹಸ್ತಾಯುಧ ಕುಶಳನುಂ ಭದ್ರಮನನುಮಪ್ಪ ವಿಜಯಗಜಮುಮನಕ್ಷಯರಥಾಶ್ವಕೇತನ ಶರಾಸನ ಶರಧಿ ವಿಚಿತ್ರ ತನುತ್ರ ವಿವಿಧಾಸ್ತಶಸ್ತಂಗಳುಮಂ ಗಂಧ ಧೂಪ ದೀಪಾದಿಗಳಿಂದರ್ಚಿಸಿ ಪೊಡವಟ್ಯಾಗಲ್ಕoll ಬೆಳಗುವ ಸೊಡರ್ಗಳ ಬೆಳಗುವ
ನಿಳಿಸಿ ತಬತ್ತಟಿಸಿ ಪೊಳೆಯ ತಮ್ಮಯ ಬೆಳಗ | ಗಳಿಸಿ ತಟತಟಿಸಿ ವಿದ್ಯು ದ್ವಿಳಸಿತಮನಿಸಿದುವು ನರನ ದಿವ್ಯಾಸ್ತಂಗಳ್ ||
೪೭
ಒಡೆಯನ ಬಾಹುಬಲದ ಆಧಿಕ್ಯವನ್ನು ನಂಬಿ ೪೬. ಸಮುದ್ರದಲ್ಲಿ ಹುಟ್ಟಿದ ಮುತ್ತುಗಳು ಮಹತ್ತಾದುವೇನು ? ನಿನ್ನ ತೋಳೆಂಬ ಕತ್ತಿಯಿಂದ ಬಲಪ್ರದರ್ಶನಮಾಡಿ ಉದ್ದಾರ ಮಾಡಿದ ಭಯಂಕರವಾದ ಶತ್ರುರಾಜರ ಮದ್ದಾನೆಯ ಕುಂಭಸ್ಥಳವೆಂಬ ಮುತ್ತುಗಳೇ ಅನರ್ಥ್ಯವಾದುವು. ಅವು ನಿರ್ಮಲವೂ ಊನವಿಲ್ಲದುದೂ ದುಂಡಾದುದೂ ಆಗಿವೆ. ಆ ಮುತ್ತಿನ ರಾಶಿಯನ್ನೇ ತಂದುಕೊಡಬೇಕು ಎಂದು ಪ್ರೀತಿಯಿಂದ ನುಡಿದು ತನ್ನ ಪತಿಯನ್ನು ಸಮಾಧಾನಪಡಿಸಿದಳು. ವ|| ಹಾಗೆ ಎರಡು ಸೈನ್ಯದಲ್ಲಿಯೂ ವೀರಾಲಾಪಗಳು ಮೊಳಗುತ್ತಿದ್ದುವು. ವಿಕ್ರಮಾರ್ಜುನನೂ ಕೃಷ್ಣನೂ ನಿರ್ಮಲವಾಗಿ ಹಲ್ಲನ್ನು ತೊಳೆದು ಅಸಂಖ್ಯಾತವಾದ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ ಮಂಗಳಾಭರಣಗಳನ್ನು ತೊಟ್ಟು ನಿತ್ಯಕರ್ಮಗಳನ್ನು ಮುಗಿಸಿದರು. ನಾನಾ ರೀತಿಯ ವಾದ್ಯಗಳು ಮೊಳಗುತ್ತಿರಲು ನಾಂದಿಮುಖವೆಂಬ ಪಿತೃಕಾರ್ಯವನ್ನು ಮುಗಿಸಿದರು. ಶುಭಲಕ್ಷಣಗಳಿಂದ ಕೂಡಿದುದೂ ಯುದ್ಧಕಾರ್ಯಕ್ಕೆ ಸಿದ್ದಮಾಡಲ್ಪಟ್ಟುದೂ ಕರಕೌಶಲ್ಯ ಉಳ್ಳುದೂ ಭದ್ರಜಾತಿಗೆ ಸೇರಿದುದೂ ಆದ ವಿಜಯಗಜವನ್ನೂ ನಾಶವಿಲ್ಲದ ತೇರು, ಕುದುರೆ, ಧ್ವಜ, ಬಿಲ್ಲು, ಬಾಣ, ಕವಚ, ವಿವಿಧ ಅಸ್ತ ಶಸ್ತ- ಮೊದಲಾದುವುಗಳನ್ನೂ ಗಂಧ,ಧೂಪ, ದೀಪ, ಮೊದಲಾದವುಗಳಿಂದ ಪೂಜಿಸಿ ನಮಸ್ಕರಿಸಿದರು. ೪೭. ಅರ್ಜುನನ ದಿವ್ಯಾಸ್ತಗಳು ಅಲ್ಲಿ ಕಾಂತಿಯುಕ್ತವಾಗಿ ಪ್ರಕಾಶಮಾನವಾಗಿದ್ದ ದೀಪದ ಬೆಳಕನ್ನು ಕೀಳುಮಾಡಿ ಥಳಥಳನೆ ಹೊಳೆಯಲು ತಮ್ಮ ಕಾಂತಿಯು ಅತ್ಯಧಿಕವಾಗಿ ಮಿಂಚಿನಿಂದ ಕೂಡಿದುವೋ ಎಂಬಂತೆ ಪ್ರಕಾಶಿಸಿದುವು.