________________
ದಶಮಾಶ್ವಾಸಂ | ೪೬೫ ವll ಎಂದರಭಸ ರಣವ್ಯಸನಮನಾತೀಯಶಾಸನಾಯಂ ಮಾಡಿದಂ ಮತ್ತೋರ್ವ ನತ್ಯುಗ್ರ ಮಂಡಳಾಗ್ರಮನನುಗೆಯ್ದು ವೀರಗ್ರಹಗ್ರಸ್ತನಾಗಿಚಂಗಿ ಸಿಡಿಲೋಳೆ ತಳ್ಳು ಪೂರ್ವ ಸಿಡಿಲಂತಿರೆ ಬಾಳೋಳೆ ಬಾಳ್ ಪಳಂಚಿ ಮಾ
ರ್ಕಿಡಿವಿಡ ನೋಡಲಂಜಿ ದೆಸೆದೇವತೆಗಳ್ ಪೆಂಪಿಂಗೆ ತೋಳ ತೀನ್ || ಕಿಡೆ ನಲಿದೊಂದೆರಬುದುರೆಯಟ್ಟೆಯುಮೊಂದೆರಡಾನೆಯಟ್ಟೆಯುರಿ ತೊಡರ್ದೊಡನಾಡೆ ತಳಿಯದಿರ್ದೊಡ ಜೋಳಮನೆಂತು ನೀಗುವೆಂ || ೪೨
ವ|| ಎಂದು ನಿಜಭುಜವಿಜಯಮನಪ್ಪುಕೆಯ್ದು ನುಡಿದಂ ಮತ್ತೊರ್ವನಲ್ಲಿಯೆಮ|| ಸುರಲೋಕಂ ದೊರಕೊಳ್ಳುದೊಂದು ಪರಮ ಶ್ರೀಲಕ್ಷ್ಮಿ ಯುಂ ಬರ್ಪುದಾ
ದರದಿಂ ದೇವನಿಕಾಯದೊಳ್ ನೆರೆವುದೊಂದುತ್ತಾಹಮುಂ ತನ್ನ ಮ | ↑ರಿ ಭಾಗ್ಯಂ ನೆರಮಪ್ಪುದೊಂದೆ ರಣದೊಳ್ ಗೆಲಾಜಿಯಂ ತಳು ಸಂ ಗರದೊಳ್ ಜೋಳದ ಪಾಳೆಯಂ ನೆರಪಿದಂ ಗಂಡಂ ಪೆಣಂ ಗಂಡನೇ || ೪೩ ವ|| ಎಂದು ನುಡಿದಂಮll ತವ ಮಾಜಾಂತ ಬಲಂ ಕಲುಟಿದು ತನ್ನಾಳಂ ಕರಂ ಮಚ್ಚೆ ಗೆ
ಅವನಂ ಶ್ರೀವಧು ಪತ್ತುಗುಂ ಮಡಿದನಂ ದೇವಾಂಗನಾನೀಕಮು | ತೃವದಿಂದುಯುಮದಂತುಮಿಂಬು ಸುಭಟಂಗಿಂತಪ್ಪುದಂ ಕಂಡುಮಂ
ಜುವನೇಕಂಜುವನೆಂದು ಪರ್ಚಿ ನುಡಿದಂ ಮತ್ತೊರ್ವನಾಸ್ಥಾನದೊಳ್ ll೪೪ ನೇರ ಎದುರಾಗಿ ನುಗ್ಗಿದ ಆನೆಗಳ ಕೊಂಬುಗಳನ್ನು ಅವುಗಳ ಅಣಸು ಬಿದ್ದುಹೋಗುವಂತೆ ಎದುರಿಸಿದ ಶೂರರನ್ನೂ ಒಟ್ಟಿಗೆ ಧ್ವಂಸ ಮಾಡಿ ಎರಡು ಸೈನ್ಯಗಳೂ ನನ್ನನ್ನೇ ನೋಡುವಷ್ಟು ಸಮರ್ಥವಾದ ನನ್ನ ಪರಾಕ್ರಮವನ್ನೂ ನನ್ನ ವೀರವನ್ನೂ ಯುದ್ದದಲ್ಲಿ ನನ್ನ ಸ್ವಾಮಿಗೆ ತೋರಿಸುತ್ತೇನೆ ವll ಎಂದು ಅತ್ಯಂತ ರಭಸದಿಂದ ಕೂಡಿದ ತನ್ನ ಯುದ್ಧಾಸಕ್ತಿಯನ್ನು ತೋರ್ಪಡಿಸಿಕೊಂಡನು. ಮತ್ತೊಬ್ಬನು ಬಹಳ ಭಯಂಕರವಾದ ಕತ್ತಿ ಸಿದ್ಧಪಡಿಸಿಕೊಂಡು ಪರಾಕ್ರಮವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾದನು. ೪೨, ಸಿಡಿಲನ್ನು ಸಂಧಿಸಿ ಹೋರಾಡುವ ಸಿಡಿಲಿನಂತೆ ಕತ್ತಿಯಲ್ಲಿ ಕತ್ತಿಯು ಘಟ್ಟಿಸಿ ಎದುರು ಕಿಡಿಗಳನ್ನು ಚೆಲ್ಲುತ್ತಿರಲು ಅದನ್ನು ನೋಡಿ ದಿಗ್ಗೇವತೆಗಳೆಲ್ಲ ಹೆದರಿ ಹಿಮ್ಮೆಟ್ಟುತ್ತಿರಲು ತೋಳಿನ ನವೆಯು ತೀರುವ ಹಾಗೆ ಒಂದೆರಡು ಕುದುರೆಯ ಮುಂಡಗಳೂ ಒಂದೆರಡಾನೆಯ ಮುಂಡಗಳೂ ಕತ್ತಿಗೆ ಸಿಕ್ಕಿ ಜೊತೆಯಲ್ಲಿ ಕುಣಿಯುವಂತೆ ಸಂತೋಷದಿಂದ ಸಂಧಿಸಿ ಕಾದದಿದ್ದರೆ ಜೋಳದ ಋಣವನ್ನು ನಾನು ಹೇಗೆ ತೀರಿಸುತ್ತೇನೆ ? ವ|| ಎಂದು ತನ್ನ ತೋಳಿನ ಜಯವನ್ನು ಕ್ರಯಿಸಿ ಮಾತನಾಡಿದನು. ಅಲ್ಲಿಯೇ ಮತ್ತೊಬ್ಬನು ೪೩, ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ, ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಮತ್ತೊಂದ ಫಲ. ನನ್ನ ಉತ್ಸಾಹವೂ ಮೆಯ್ದಿರಿಯೂ ಹೆಚ್ಚುವುದು. ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಅನ್ನದ ಋಣವನ್ನು ತೀರಿಸಿದವನೇ ನಿಜವಾಗಿ ಶೂರ. ಬೇರೆಯವನು ಶೂರನೇ ವ|| ಎಂಬುದಾಗಿ ಹೇಳಿದನು. ೪೪. ಪ್ರತಿಭಟಿಸಿದ ಸೈನ್ಯವು ಸಂಪೂರ್ಣವಾಗಿ ನಾಶವಾಗುವಂತೆ