________________
೪೫೪ | ಪಂಪಭಾರತಂ ಕoll ಅಣಿಯರಮೋದವಿದ ಮುಳಿಸಿನೂ
ಳಣಮುಜದವರೆಂದು ರಣದ ಜಯಿಸಲ್ ನಾರಾ ಯಣನೊಳಮುದಾತ್ತನಾರಾ ಯಣನೆಳಮಿಂಡೆತ್ತಿಕೊಂಡ ಗಂಡರುಮೊಳರೇ 10 ನಿನ್ನನೆ ನಚ್ಚಿದನನುವರ ಕೆನ್ನನೆ ಪೂಣಿಸಿದನೆನಗರyಂಡಮುಮೋ | ರನ್ನರೆ ದಲೆಂತು ಕಾದು ನನ್ನಯ ಮಕ್ಕಳೊಳಮೆನ್ನ ಮೊಮ್ಮಕ್ಕಳೊಳಂ | ಮಕ್ಕಳ ಮೊಮ್ಮಕ್ಕಳ ರಥ. ಮಯಿನೆಡೆಗೊಂಡೊಡವರನೋವದ ರಣದೊಳ್ | ಮಕ್ಕಳನಾಂ ಕೊಂದೊಡೆ ತ ೩ಕ್ಕಿದ ತತ್ತಿಯನಪಾವು ನೊಣವಂತಕ್ಕುಂ || ನರ ನಾರಾಯಣರಿರ್ವರ ಧುರದೊಳ್ ಮಾರ್ಕೊಳ್ಳರನ್ನನೊರ್ವಂ ಮೊಮ್ಮಂ | ಪರಮಗುರುವೊರ್ವನವರಿ
ರ್ವರುಮಂ ಕಾದಳವೆನುತಿದ ರಿಪುನೃಪಬಲಮಂ || ೧೪ ವ|| ಎಂದು ತನ್ನೊಳ್ ಬಗೆಯುತ್ತಿರ್ಪಿನಮತ್ತ ದುರ್ಯೋಧನಂ ಸಹಸ್ರ ಕಿರಣೋದಯದೊಳನೇಕಸಹಸ್ರನರಪತಿ ಪರಿವತನುಮಾಗಿ ಮಂದಾಕಿನೀತನೂಜಂಗೆ ಬಲಿಯನಟ್ಟಿ ಬರಿಸಿ ಮಣಿಮಯಪೀಠದೊಳ್ ಕುಳ್ಳಿರಿಸಿ ದೇವಾಸುರಯುದ್ಧದೊಳ್ ಗುಹಂಗೆ ವೀರಪಟ್ಟಮಂ ಕಟ್ಟುವ ಪುರಂದರನಂದಮನೆ ಪೋಲು೧೧. ದುರ್ಯೋಧನನು ವಿಶೇಷವಾಗಿ ತನಗುಂಟಾದ ಕೋಪದಲ್ಲಿ ಪಾಂಡವರು ನಿಶ್ಯಕ್ತರು, ಸತ್ವಶಾಲಿಗಳಲ್ಲ ಎಂದು ಜಯ ಪಡೆಯುವುದಕ್ಕಾಗಿ ನಾರಾಯಣನನ್ನೂ ಉದಾತ್ತನಾರಾಯಣನನ್ನೂ ಲಕ್ಷ್ಯಮಾಡದೆ ಯುದ್ಧದಲ್ಲಿ ಜಯಿಸುವುದಕ್ಕೆ ಹೊರಟಿದ್ದಾನೆ. ಇಂತಹ ಶೂರನು ಬೇರೆ ಇದ್ದಾನೆಯೇ. ೧೨. ದುರ್ಯೋಧನನು ನನ್ನನ್ನೇ ನಂಬಿದ್ದಾನೆ. ಯುದ್ದಮಾಡುತ್ತೇನೆಂದು ನನ್ನಿಂದ ಪ್ರತಿಜ್ಞೆ ಮಾಡಿಸಿದ್ದಾನೆ. ನನಗೆ ಎರಡು ಗುಂಪಿನವರೂ ಸಮಾನರಾದವರಲ್ಲವೇ? (ಸಮಾನಬಂಧುಗಳಲ್ಲವೇ ?) ನನ್ನ ಮಕ್ಕಳೊಡನೆಯೂ ಮೊಮ್ಮಕ್ಕಳೊಡನೆಯೂ ಹೇಗೆ ಯುದ್ಧಮಾಡಲಿ? ೧೩. ಮಕ್ಕಳ ಮೊಮ್ಮಕ್ಕಳ ತೇರುಗಳು ಗುಂಪುಗುಂಪಾಗಿ ನಡುವೆ ಎದುರಿಸಿದರೆ ಅವರನ್ನು ರಕ್ಷಿಸದೆ ಯುದ್ಧದಲ್ಲಿ ಮಕ್ಕಳನ್ನು ಕೊಂದನಾದರೆ ಹಾವು ತಾನು ಇಕ್ಕಿದ (ಪ್ರಸವಿಸಿದ-ಹತ್ತ) ಮೊಟ್ಟೆಗಳನ್ನು ತಾನೆ ನುಂಗಿದಂತಾಗುತ್ತದೆಯಲ್ಲವೇ? ೧೪. ನರನಾರಾಯಣರಿಬ್ಬರೇ ಯುದ್ದದಲ್ಲಿ ನನ್ನನ್ನು ಪ್ರತಿಭಟಿಸುವವರು, ಅವರಲ್ಲಿ ಒಬ್ಬ ಮೊಮ್ಮಗ, ಮತ್ತೊಬ್ಬ ಪರಮಗುರು. ಅವರಿಬ್ಬರನ್ನೂ ರಕ್ಷಿಸಿ ಉಳಿದ ಶತ್ರುರಾಜಸೈನ್ಯವನ್ನು ನಾಶ ಪಡಿಸುತ್ತೇನೆ. ವ|| ಎಂದು ತನ್ನಲ್ಲಿ ಯೋಚಿಸುತ್ತಿರಲಾಗಿ ಆ ಕಡೆ ದುರ್ಯೋಧನನು ಸೂರ್ಯೊದಯದಲ್ಲಿ ಅನೇಕ ಸಾವಿರರಾಜರುಗಳಿಂದ ಸುತ್ತುವರಿಯಲ್ಪಟ್ಟು ಭೀಷ್ಮನಿಗೆ ದೂತರ ಮೂಲಕ ಹೇಳಿಕಳುಹಿಸಿ ಬರಮಾಡಿದನು. ರತ್ನಖಚಿತವಾದ ಪೀಠದಲ್ಲಿ