________________
೪೫೦ / ಪಂಪಭಾರತಂ
ಶಾ
ವೀರಕ್ಷೇತ್ರಮಗುರ್ವಿಗಂಕದ ಕುರುಕ್ಷೇತ್ರಂ ಬಲಸ್ಥ ಮಹಾ ಕ್ರೂರಾರಾತಿಗಳನ್ನ ದೋರ್ವಲದಗುರ್ವಿಂದಂ ತ್ರಿಲೋಕಕ್ಕೆ ಸಂ | ಹಾರಂ ಮಾಡಿದ ಭೈರವ ಪ್ರಭುವಿನೊಂದಾಕಾರದಿಂ ವೈರಿ ಸಂ ಹಾರಂ ಮಾಡದೆ ಮಾಣೆನೆಂದು ಹರಿಗಂ ಕೆಂಡನುತ್ಸಾಹಮಂ ||೧೦೫
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ
ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ನವಮಾಶ್ವಾಸಂ
ಬಿಟ್ಟಿತು. ೧೦೫. ಪ್ರಸಿದ್ಧವಾದ ಈ ಕುರುಭೂಮಿಯು ವೀರಕ್ಷೇತ್ರವೂ ಅಹುದು, ಮಹಾಕ್ರೂರರಾದ ನನ್ನ ಶತ್ರುಗಳು ಶಕ್ತಿವಂತರು, ಬಲಿಷ್ಠರೆಂಬುದೂ ನಿಜ. ಆದರೂ (ಅವರನ್ನು ನಾನು ನನ್ನ ತೋಳಿನ ಶಕ್ತಿಯಿಂದ ಹಿಂದೆ ಭಯಂಕರವಾಗಿ ಮೂರು ಲೋಕವನ್ನು ಸಂಹಾರಮಾಡಿದ ಭೈರವಸ್ವಾಮಿಯ ಆಕಾರವನ್ನು ತಾಳಿ ವೈರಿಸಂಹಾರ ಮಾಡದೆ ಬಿಡುವುದಿಲ್ಲ ಎಂದು ಅರ್ಜುನನು ಉತ್ಸಾಹವನ್ನು ತಾಳಿದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿದುದೂ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾ ಗುಣಾರ್ಣವನಿಂದ ರಚಿತವಾದುದೂ ಆದ ವಿಕ್ರಮಾರ್ಜುನ ವಿಜಯದಲ್ಲಿ ಒಂಬತ್ತನೆಯ ಆಶ್ವಾಸ.