________________
೪೪೮ / ಪಂಪಭಾರತಂ ಕoll ಅಂತು ತಿರುವಿಂ ಬರ್ದುಂಕಿದ
ಕಂತುವ ನನಗಣಗಳಂತವೊಲೆ ನಡೆತಂದರ್ | ಸಂತಸದ ಪೊನ್ನ ಕಳಸದ
ದಂತದ ಸಿವಿಗೆಗಳನೇ ಭೋಗಿಯರರೆಬರ್ || ಹರಿಣೀಪುತಂ | ನಡೆಯ ತುರಗ ಪೊನ್ನಾಯೋಗಂಗಳಿಂದಮರ್ದಪ್ತಿಯಿಂ
ಪಡೆಯ ನೆಬಲಂ ಚಂಚಂಛಾತಪತ್ರಮ ಕೂಡ ತ |' ಮೊಡನೆ ಬರೆ ಬಂದತ್ತಂ ಪತ್ತೆಂಟು ದೇಸಿ ವಿಳಾಸದೊಳ್
ತೊಡರೆ ಚರಿತಂಬಂದರ್ ಕಣ್ಣಪ್ಪರಲ್ ವರ ಭೋಗಿಯರ್ || ೧೦೨ ಚಂ11 ಸಡಹುಡನಪ್ಪ ಕಟ್ರಿ ಕೊಡೆ ಸಂತಸದಿಂ ಪಗೇಟಿ ಬರ್ಪ ಕ
ನೃಡಿವಿಡಿದಾಕೆ ಚಿನ್ನದ ಸವಂಗಮಪೂರ್ವದ ಮೊಚಿಯಂ ಪವ | ಇಡದ ಸುವರ್ಣ ಪಾರಿವದ ಕುಪ್ಪಸಮೊಟ್ಟೆ ಬೆಡಂಗನಾಳು ಕ
ಡದೆ ಪಂಡವಾಸದ ವಿಳಾಸದ ಸೂಳೆಯರೊಟ್ಟಿ ತೋಟದರ್ | ೧೦೩ ಮll ನಡೆಯಲ್ಬಂದಿಯ ತಕ್ಕ ತುರಂಗಂ ಭೋರೆಂದು ಬರ್ಪೊಂದೊಡಂ
ಬಡು ಬಂದಿಸಿದೊಂದು ಸತ್ತಿಗೆ ಕರಂ ಮೆಯ್ಯತ್ತು ಮುಯ್ಯಾಗಮಾ | ಗಡುಮಾರ್ಗ೦ ಕುಡುತಿರ್ಪ ಕಪುರದ ಬಂಬಲ್ಲಂಬುಲಂ ರಾಗಮಂ ಪಡೆಗೆಲ್ಲಂ ಪಡೆವನ್ನೆಗಂ ನಡೆದರಂದತ್ತಂ ಕೆಲ ನಾಯಕರ್ || ೧೦೪
ಆಕರ್ಷಕವಾಗಿರಲು ಮನ್ಮಥನ ಸೈನ್ಯವೆನ್ನಿಸಿ ಪ್ರಕಾಶಿಸಿದರು. ೧೦೧. ಹಾಗೆ ಬಿಲ್ಲಿನ ಹಗ್ಗದಿಂದ ತಪ್ಪಿಸಿಕೊಂಡ ಮನ್ಮಥನ ಪುಷ್ಪಬಾಣದಂತೆ ಕೆಲವರು ವಿಲಾಸಿನಿಯರು ಚಿನ್ನದ ಕಲಶವನ್ನುಳ್ಳ ದಂತದ ಪಲ್ಲಕ್ಕಿಗಳನ್ನು ಹತ್ತಿ ಸಂತೋಷದಿಂದ ಬಂದರು. ೧೦೨. ಕುದುರೆಗಳು ಚಿನ್ನದ ಅಲಂಕಾರಗಳಿಂದ ಕೂಡಿ ಸಂತೋಷದಿಂದ ನಡೆದು ಬರಲು, ಚಲಿಸುತ್ತಿರುವ ನವಿಲುಗರಿಯ ಕೊಡೆಯು ನೆರಳನ್ನುಂಟು ಮಾಡುತ್ತ ಜೊತೆಯಲ್ಲಿ ಬರಲು, ಎಲ್ಲೆಲ್ಲಿಯೂ ಹತ್ತೆಂಟು ವಿಳಾಸಗಳು ಶೋಭಾಯಮಾನವಾಗಿರಲು ಶ್ರೇಷ್ಠರಾದ ಭೋಗಸ್ತೀಯರು ಕಣ್ಣಿಗೆ ಆಕರ್ಷಕವಾಗಿರುವ ರೀತಿಯಲ್ಲಿ ಜಾಗ್ರತೆಯಾಗಿ ಬಂದರು. ೧೦೩. ಸಡಗರದಿಂದ ಕೂಡಿದ ಹೇಸರಗತ್ತೆಯ ಮೇಲೆ ಸಂತೋಷದಿಂದ ಹಿಂದ ಕುಳಿತು ಬರುವ ಕನ್ನಡಿಯನ್ನು ಹಿಡಿದಿರುವ ದಾಸಿಯೂ ಚಿನ್ನದ ಸರಿಗೆಯ ಕವಚವೂ ಅಪೂರ್ವವಾದ ಪಾದರಕ್ಷೆಯೂ ಪ್ರಯಾಣಕ್ಕನುಗುಣವಾದ ಹೊಂಬಣ್ಣದ ಪಾರಿವಾಳದ ಬಣ್ಣದ ಕುಪ್ಪಸವೂ ಸುಂದರವಾಗಿರಲು ಬೆಡಗಿನಿಂದ ಕೂಡಿ ಕಣ್ಣಿಗೆ ಸಹ್ಯವಾದ ರೀತಿಯಲ್ಲಿ (ಹಿತವಾಗಿ) ರಾಣಿವಾಸದ ವಿಳಾಸವನ್ನು ವೇಶ್ಯಾಸ್ತ್ರೀಯರು ಚೆಲುವಿನಿಂದ ಕೂಡಿ ಕಾಣಿಸಿಕೊಂಡರು. ೧೦೪, ಯುದ್ಧಕ್ಕೆಂದು ಬಂದ ಕುದುರೆಯು ಭೋರೆಂದು ಯೋಗ್ಯವಾದ ರೀತಿಯಲ್ಲಿ ನಡೆಯಲು, ತಮಗೆ ಹಿತಕರವಾದ ರೀತಿಯಲ್ಲಿ (ಒಪ್ಪುವ ರೀತಿಯಲ್ಲಿ ಹಿಡಿದು ಬರುತ್ತಿರುವ ಛತ್ರಿ, ಪೂರ್ಣವಾಗಿ ಪುಷ್ಟವಾಗಿ ಬೆಳೆದ ತಮ್ಮ