________________
ಮುಂ .
- ನವಮಾಶ್ವಾಸಂ | ೪೩೧ ಬವರಂಗಯ್ಯಮಮೋಘಮಂಬ ಬಗೆಯಿಂ ನೀಮೆಲ್ಲಮಾದಂ ರಣೋ ತೃವದಿಂ ನಿನ್ನೆಯೆ ಪೋದ ಗೋಗ್ರಹಣದಂದೇನಾದಿರಂತಾ ಪರಾ | ಭವಮಂ ಚಃ ಮಣಿದಿರ್ದಿರಪೊಡಮದೇನೇವೋದುದಿನ್ನುಂ ಗುಣಾ ರ್ಣವನಿಂ ನಾಳೆಯ ಕೇಳದಿರ್ಪೆರೆ ಮಹಾ ಗಾಂಡೀವ ನಿರ್ಘೋಷಮಂ || ೫೬
ಚಂ|| ಸುರಿವ ಸರಲ್ ನರ ಭಟರತ್ತಮುರುತ್ವ ದಲಿಂ ಪೂರ ಸಿಂ
ಧುರ ಘಟೆ ಬರ್ಪ ನೆತ್ತರ ಕಡಲ್ ಕುಣಿವಟ್ಟೆಗಳಾಜಿಯೊಳ್ ಭಯಂ | ಕರತರಮಪ್ಪಿನಂ ಪಗೆವರೊಕ್ಕಲೊಳೊವನಲೊರ್ವರಿಲ್ಲದಂ ತಿರೆ ತಲೆ ಕೊಲ್ಲುಮಂತುಮರಿಕೇಸರಿಗಾಂತು ಬರ್ದುಂಕಲಕುಮೇ || ೫೭
ವ|| ಎಂದು ಕಾಳನೀಳಮೇಘದಂತು ಮಸಗಿ ಗರ್ಜಿಸುವಸುರಕುಳವಿಷಯಕೇತುಗೆ ಫಣಿಕೇತು ಮುಳಿದು ತಳಮಳಿಸಿ ಕಾಣದ
ಕಂll ಎಗು ದೂತನಪ್ಪನ
ಬೆಟ್ಟಿನ ನುಡಿಗೇಳು ಮುಳಿಯಲಾಗದು ನೀನುಂ | ಮುಟ್ಟು ವಿದುರನೆಂಬೀ ತೋಬ್ಬುಟ್ಟಿಯ ಮನೆಯ ಕೂಟ ನುಡಿಯಿಸಿ ನುಡಿದೆ ||
೫೮
ವ|| ಎನೆ ವಿದುರನತಿಕುಪಿತಮನನಾಗಿ
ಬಿಡಿಸಿ ತಂದವನು ಅರ್ಜುನನಲ್ಲವೇ? ೫೬. ಉತ್ತಮರೀತಿಯಲ್ಲಿ ಯುದ್ದಮಾಡೋಣ ಎಂಬ ಮನಸ್ಸಿನಿಂದ ನೀವೆಲ್ಲರೂ ವಿಶೇಷಾಸಕ್ತಿಯಿಂದ ಬಂದು ನಿನ್ನೆ ನಡೆದ ಪಶುಗಳನ್ನು ಹಿಡಿಯುವ ಸಂದರ್ಭದಲ್ಲಿ ಏನಾದಿರಿ ? ಆಗುಂಟಾದ ಸೋಲನ್ನು ಚಿಃ ಮರೆತಿರುವಿರಾದರೆ ಏನಂತೆ ? ಇನ್ನೂ ಗುಣಾರ್ಣವನಾದ ಅರ್ಜುನನಿಂದ ನಾಳೆಯೇ ಮಹಾಗಾಂಡೀವದ ಟಂಕಾರ ಶಬ್ದವನ್ನು ಕೇಳದಿರುತ್ತೀರಾ? ೫೭. ಸುರಿಯುವ ಬಾಣಗಳು, ನರಳುತ್ತಿರುವ ಯೋಧರು, ಉರುಳುತ್ತಿರುವ ಸೈನ್ಯ, ಹೊರಳುವ ಆನೆಗಳ ಸಮೂಹ, ಹರಿದು ಬರುತ್ತಿರುವ ರಕ್ತಸಮುದ್ರ, ಕುಣಿವ ತಲೆಯಿಲ್ಲದ ಮುಂಡಗಳು, ಯುದ್ಧದಲ್ಲಿ ಭಯಂಕರವಾಗುವ ಹಾಗೆ ಶತ್ರುಶಿಬಿರದಲ್ಲಿ ಓ ಎನ್ನುವುದಕ್ಕೆ ಒಬ್ಬರೂ ಇಲ್ಲದಂತೆ ಸಂಪೂರ್ಣವಾಗಿ ಕೊಲ್ಲುತ್ತಾನೆ. ಹಾಗೆ ಅರಿಕೇಸರಿಗೆ ಪ್ರತಿಭಟಿಸಿ ಬದುಕಲು ಸಾಧ್ಯವೇ? ವ|| ಎಂದು ಪ್ರಳಯಕಾಲದ ಕಾರ್ಮೊಡದ ಹಾಗೆ ರೇಗಿ ಗರ್ಜನೆ ಮಾಡುವ ಕೃಷ್ಣನಿಗೆ ದುರ್ಯೋಧನನು ಕೋಪಿಸಿಕೊಂಡು ಕುದಿದು ಕುರುಡನಾದನು. ೫೮. “ಎದ್ದು ಹೋಗು ; ದೂತನಾದವನ ದಡ್ಡಮಾತನ್ನು ಕೇಳಿ ಕೋಪಿಸಬಾರದು. ನೀನು ಮೋಸಹೋಗಿ ವಿದುರನೆಂಬ ದಾಸೀಪುತ್ರನ ಮನೆಯ ಕೂಳಿನ ಕೊಬ್ಬು
ಮಾತನಾಡಿಸಲು ನೀನು ಹೀಗೆ ಮಾತನಾಡಿದ್ದೀಯೆ. (ನೀಚ ಆಹಾರದ ಪ್ರಭಾವ . ಇದು ಎಂದರ್ಥ) ವಎನ್ನಲು ವಿದುರನು ವಿಶೇಷ ಕೋಪದಿಂದ ಕಿಡಿಕಿಡಿಯಾದನು.