________________
೩೮ | ಪಂಪಭಾರತಂ ಕೋಸಗಿದ ಪುಲಿಯ ಪಿಂಡುಮನನುಕರಿಸಿದುವು ಸಂದಣಿಗಳ್', 'ಕಾಯ್ತಿರುಮಸಗಿದಂತೆ ಮಸಗಿದ ಧನುರ್ಧರರ್' ಭೂತಳಮಳ್ಳಾಡೆ ಕೆಸು ಕಡಿತದ ತೆಲಿದಿಂ ಶ್ವೇತ ಗಂಗಾಸುತನ ಒಡ್ಡಣಂ ನಿಂದವು. ಪ್ರಳಯಕಾಲಜಾತೋತ್ಸಾತವಾತನಿರ್ಘಾತದಿಂದ ತುಳ್ಳಾಡಿ ತಳ್ಳಂಕಗುಟ್ಟುವ ಜಳನಿಧಿಗಳಂತೆ ಉಭಯಸೈನ್ಯಗಳು ಮೇರೆದಪ್ಪಿದವು. ತಿಳೆದಿಕ್ಕಿದಂತೆ ತಲೆಗಳ್ ಪಡೆದುರುಳಿದುವು' 'ಮುಗಿಲ್ಗಳಿಟ್ಟೆಡೆಗಳೊಳ್ ತೊಡದಿರ್ದ ತಲೆಗಳ್ ಜೇನ ಪುಟ್ಟಿಗಳನೆ ಪೋಲವು'. ಪ್ರಳಯಕಾಲದಂದು ಮೂಡುವ ಪರ್ವರಾದಿತ್ಯರ ತೇಜಮುಮಂ ಮಹೇಶ್ವರ ಭೈರವಾಡಂಬರಮುಮಂ ಯುಗಾಂತ ಕಾಲಾಂತಕನ ಮಸಕಮುಮಂ ಸುರಾಪಗಾತ್ಮಜಂ ತನ್ನೊಳಳವಡಿಸಿಕೊಂಡಂ' 'ಮಯ್ಯೋಳುಡಿದಂಬು ಗಳುಮನೆಲ್ಯುಮಂ ನಟ್ಟುಡಿದ ಬಾಳಕಕ್ಕಡೆಯುಡಿಗಳುಮನಯಸ್ಕಾಂತಮಂ ತೋಳೆತೋಟಿ ತೆಗೆಯುತ್ತಿರ್ದರ್'. “ಪಂಕುಳಿಗೊಂಡ ಸಿಂಹಮಂ ಮುತ್ತುವಂತೆ ಧರ್ಮಪುತ್ರಂ ಶಿಖಂಡಿಯಂ ಮುಂದಿಟ್ಟು ಭೀಷ್ಮನಂ ಮುತ್ತಿದಂ' 'ನಟ್ಟ ಕೂರ್ಗಣೆಯ ಬಿಳ್ಕೊರೆಯಿಂದೆ ಬಬಿಲ್ಲನುರ್ವಿ ಪೆರ್ವಿದಿರಿ ಸಿಡುಂಬಿನೊಳ್ ಪುದಿದೊಂದು ಕುಳಾಚಳದಂತೆ ಸಿಂಧುಜಂ' 'ಸಿಡುಂಬಿನ ಪೊದಳೊಳಗೆ ಮದೋಣಗಿದ ಮೃಗರಾಜನಂತೆ ಶರಶಯನದೊಳ್ ತೋರಿದಂ' 'ವಿಳಯಕಾಲ ಜಳಧರಂಗಳೆಲ್ಲವೊಂದಾಗಿ ಕುಲಗಿರಿಯಂ ಮುತ್ತುವಂತೆ ಕಳಿಂಗರಾಜ ಗಜಘಟೆ ಭೀಮನಂ ಮುತ್ತಿದುವು. ಗಜಾಸುರನೊಳ್ ಆಸುರಂ ಬೆರಸುತಾಗುವಂಧಕಾರಾತಿಯಂತೆ ಭೀಮಸೇನ ಪೊಣರ್ದಂ' 'ಮಹಾಮಕರಂ ಸಮುದ್ರದೊಳ್ ಪರಿವಂತೆವೋಲಾ ಸುಪ್ರತೀಕಗಜಂ ಪರಿದುದು', 'ಒಣಗಿದುದೊಂದು ಪೆರ್ವಿದಿರ ಪೆರ್ವೊದರಿಂದಮಾಚಿದುರ್ವುವಾ ಶುಶುಕ್ಷಣಿಯವೊಲ್ ಅಭಿಮನ್ಯುವಿನ ಕೂರ್ಗಣೆ ಪಾಯ್ತು ನುಂಗಿದವು' ಅದರ್ವ ' ನೂರುಂ ಪೊನ್ನ ತಾಳ್ ಸೂಯೊಳ್ ಬೀಳಂತೆ ಬಿದ್ದಿರ್' ಇವು ಕೆಲವು ಮಾದರಿಗಳು ಮಾತ್ರ. ವರ್ಣನೆಗಳ ವೈಭವವನ್ನು ಮೂಲವನ್ನು ಓದಿಯೇ ಆಸ್ವಾದಿಸಬೇಕು.
ಚುದ್ರಿಕಾವಿಹಾರ, ಮಧುಪಾನ, ವಿಹಾರಗಳೂ ಮಹಾಕಾವ್ಯದ ಅಂಗವಾದ ಅಷ್ಟಾದಶವರ್ಣನೆಗಳ ಭಾಗಗಳು, ಲೌಕಿಕ ಕಾವ್ಯ' ವನ್ನು 'ಸಮಸ್ತಭಾರತ'ವನ್ನು ಬರೆಯಲು ಹೊರಟ ಕವಿತಾಗುಣಾರ್ಣವನು ಈ ಭಾಗಗಳಲ್ಲಿ ತತ್ಕಾಲದ ಸಮಾಜಚಿತ್ರದ ಒಂದು ಕಿರುದೃಶ್ಯವನ್ನು ಕೊಡಲು ಪ್ರಯತ್ನಪಟ್ಟಿದ್ದಾನೆ. ಸುಭದ್ರಾಹರಣದ ಹಿಂದಿನ ರಾತ್ರಿ ಅರ್ಜುನನು ತನ್ನ ವಿರಹ ವೇಗವನ್ನು ಆರಿಸಿಕೊಳ್ಳುವುದಕ್ಕಾಗಿ ವಿಟ ವಿದೂಷಕರೊಡನೆ ಚಂದ್ರಿಕಾವಿಹಾರಕ್ಕಾಗಿ ಹೊರಟು, ಮಾಲೆಗೇರಿ, ವೇಶ್ಯಾವಾಟಿ ಮತ್ತು ಪಾನಭೂಮಿಗಳ " ಮೂಲಕ ಹಾದು ಹೋಗುವನು. ಅಲ್ಲಿ ಅವನಿಗಾದ ಅನುಭವವನ್ನು ಪಂಪನು ಅತ್ಯಂತ ರೋಮಾಂಚಕಾರಿಯಾಗುವಂತೆ ವರ್ಣಿಸಿದ್ದಾನೆ. ಮೊದಲು ಅರ್ಜುನನು ಪೆಂಡವಾಸಗೇರಿಯನ್ನು ಪ್ರವೇಶಿಸಿದ ತಕ್ಷಣ ಅಲ್ಲಿರುವವರೆಲ್ಲರೂ ಸೌಭಾಗ್ಯದ ಭೋಗದ ಚಾಗದ ರೂಪಾದ ಮಾನಿಸರಂತೆ ಕಾಣುವರು. ಮೊದಲು ಅವನ ಕಣ್ಣಿಗೆ ಬೀಳುವುದು ಹೂವಿನ ಸಂತೆ. 'ಅದು ಆರು ಋತುಗಳ ಪೂಗಳನೊಂದು ಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವಂ ಮಾಡಿದೋಜಿನ ಸಾಲೆ'ಯಂತಿದೆ. ಮಾಲೆಗಾರ್ತಿಯರು