________________
೨೫
೪೨೦) ಪಂಪಭಾರತಂ ಮl ಬಕ ಕಿಮ್ಯಾರ ಜಟಾಸುರೋತ ಜರಾಸಂಧರ್ಕಳಂ ಸಂದ ಕೀ
ಚಕರಂ ನೂರ್ವರುಮಂ ಪಡಲ್ವಡಿಸಿದೀ ತ್ವಚ್ಚಂಡದೋರ್ದಂಡಮು | ಗ್ರ ಕುರುಕ್ಷಾ ಪ ಮಹೀರುಹಪ್ರಕರಮಂ ಮತ್ತೇಭವಿಕ್ರೀಡಿತ ಕೈ ಕರಂ ಪೋಲ್ವೆಗೆ ವಂದು ಭೀಮ ರಣದೊಳ್ ನುರ್ಗಡದೇಂ ಪೋಕುಮ ||
ವ|| ಎಂದು ನಾರಾಯಣನುಂ ಧರ್ಮಪುತ್ರನುಂ ವೃಕೋದರನ ಮನಮನಾಳ ನುಡಿದು ಮತ್ತು ನಾರಾಯಣಂಗೆ ಯುಧಿಷ್ಠಿರಂ ನಿಷ್ಠಿತ ಕಾರ್ಯಮನನುಷ್ಟಿಸಲಂದಿಂತೆಂದಂಮll ಅವನೀನಾಥನ ಗೆಯ್ದ ಪೊಲ್ಲಮಗಮನ್ನೊಳಿಂಗಮಿರಿ ಸಕ್ರಿಯಾ
ಗವನೀವಂತುಟನೀಯದಂತುಟನದಂ ಬಲ್ಲಂತು ಕಾಲುತ್ತಿನೋ | ಡವನೀ ಭಾಗದೊಳೆನ್ನ ಭಾಗಮನದಂ ತಾನೀಯದಿರ್ದಾಗಳ ನವನೀ ರಕ್ಷಣ ದಕ್ಷ ದಕ್ಷಿಣ ಭುಜಸ್ತಂಭಂ ಕೊಲಲ್ ಸಾಲದೇ 1 , ೨೬
ವ|| ಎಂದು ಧರ್ಮರಾಜಂ ರಾಜರಾಜನಲ್ಲಿಗೆ ನಿರ್ವ್ಯಾಜದಿಂ ದಿತಿಜಕುಳ ವಿಜಯಿಯಪ್ಪಜಿತನನೆ ದೂತಕಾರ್ಯಕ್ರಟ್ಟಿದೊಡಸುರವಿಜಯಿಯುಂ ಕತಿಷಯ ಪ್ರಯಾಣಂಗಳಿಂ ಮದಗಜೇಂದ್ರಪುರಮನೆಯ್ದಚಂ| ಮದಗಜ ಬೃಂಹಿತಧ್ವನಿ ತುರಂಗಮ ಹೇಪಿತಘೋಷದೊಳ್ ಪೊದ
ದವ ಗಭೀರ ಧೀರ ಮುರಜಧ್ವನಿ ವನ ಮತ್ತಕಾಮಿನೀ | ಮೃದು ಪದ ನೂಪುರ ಶೃಣಿತದೊಳ್ ಪಕ್ಷದೊಂದಿಗೆ ಚಕ್ರಿಗುಂಟುಮಾ
ಡಿದುದು ಪೋಬಲ್ ಸುರಾದ್ರಿಮಧಿತಾಂಬುಧಿಜಾತನಿನಾದ ಶಂಕೆಯಂ || ೨೭ ವಿಜೃಂಭಿಸಿದ ಭೀಮಸೇನನನ್ನು ಧರ್ಮರಾಯನು ಸಮಾಧಾನಮಾಡಿದನು. ೨೫. ಬಕ, ಕಿಮೀರ, ಜಟಾಸುರ, ಗರ್ವಿಷ್ಠರಾದ ಜರಾಸಂಧಾದಿಗಳನ್ನೂ ಪ್ರಸಿದ್ದರಾದ ನೂರು ಕೀಚಕರನ್ನೂ ಕೆಳಗೆ ಬೀಳುವ ಹಾಗೆ ಮಾಡಿಸಿದ ನಿನ್ನ ಭಯಂಕರವಾದ ಕೌರವರಾಜರೆಂಬ ಮರಗಳ ಸಮೂಹವು ಮದ್ದಾನೆಯಾಟಕ್ಕೆ ಸಮನಾಗಿ ನುಚ್ಚು ಮಾಡದೇ ಬಿಡುತ್ತದೆಯೆ ? ವ|| ಎಂದು ಕೃಷ್ಣನೂ ಧರ್ಮರಾಯನೂ ಭೀಮನ ಮನಸ್ಸನ್ನು ಸಮಾಧಾನಪಡಿಸಿದರು. ಪುನಃ ಧರ್ಮರಾಯನು ಕೃಷ್ಣನಿಗೆ ಮಾಡಬೇಕಾದ ಕಾರ್ಯವನ್ನು ಹೀಗೆಂದು ತಿಳಿಸಿದನು. ೨೬. ರಾಜನಾದ ದುರ್ಯೋಧನನು ಮಾಡಿದ ಅಪರಾಧಕ್ಕೂ ನನ್ನ ಒಳ್ಳೆಯ ಸ್ವಭಾವಕ್ಕೂ ನೀನು ಸಾಕ್ಷಿಯಾಗಿದ್ದುಕೊಂಡು ಅವನು ಭೂಮಿಯನ್ನು ಕೊಡುವುದನ್ನೂ ಕೊಡದಿರುವುದನ್ನೂ ಸಾಧ್ಯವಿದ್ದಷ್ಟು ವಿಚಾರಮಾಡಿ ನೋಡು. ನ್ಯಾಯಯುತವಾಗಿ ನನಗೆ ಬರಬೇಕಾದುದನ್ನು ಅವನು ಕೊಡದಿದ್ದಾಗ ನನ್ನ ಭೂಭಾರರಕ್ಷಣಾಸಮರ್ಥವಾದ ಕುಂಭದಂತಿರುವ ಬಲತೋಳು ಅವನನ್ನು ಕೊಲ್ಲಲು ಸಾಲದೇ ಹೋಗುತ್ತದೆಯೇ ? ವ| ಎಂದು ಧರ್ಮರಾಯನು ಕೃಷ್ಣನನ್ನು ಕೌರವಚಕ್ರವರ್ತಿಯ ಹತ್ತಿರಕ್ಕೆ ನಿಷ್ಕಪಟಿಯಾಗಿ - ಸರಳಹೃದಯನಾಗಿ ದೂತಕಾರ್ಯ ಕ್ಕಾಗಿ ಸಂಧಿಯನ್ನು ಏರ್ಪಡಿಸುವ ರಾಯಭಾರಿಯಾಗಿ ಕಳುಹಿಸಿದನು. ಕೃಷ್ಣನು ಕೆಲವು ದಿವಸದ ಪ್ರಯಾಣದಿಂದ ಹಸ್ತಿನಾಪಟ್ಟಣವನ್ನು ಸೇರಿದನು. ೨೭. ಆ ಹಸ್ತಿನಾಪಟ್ಟಣವು ಕುದುರೆಗಳ ಹೇಷಾರವ, ಮದ್ದಾನೆಗಳ ಫೀಂಕಾರಶಬ್ದ, ಮದ್ದಲೆಗಳ ಗಂಭೀರನಾದ,