________________
ಮ।
೪೧೮ / ಪಂಪಭಾರತಂ
ವll ಎಂಬುದುಮಂಬುಜೋದರಂ ನಯದ ವಿನಯದ ಮಾತು ನೀನೆಂದಂತು ತೊಳೆಗೆ ನೀರಡಕಲುಮಾದಿತ್ಯಂಗೆ ಸೊಡರಿಡಲುಮಿಂದ್ರಂಗೆ ದೇವಲೋಕಮಂ ಬಣ್ಣಿಸುವಂತಯುಂ ನಿನಗೇನೆಂದು ಕಜ್ಜಂಪೇಟ್ಟುದಾದೊಡಂ
ಬೆಸಮಾರ್ ಕೊಂಡವೊಲಕ್ಕುಮೊಂದೆ ನಯಮಂ ಕೇಳೆ ನಿನ್ನ ಮುಂದೀಗಳಾ ನುಸಿರ್ದಪ್ಟೆಂ ಸಲೆ ಮಲ್ಕು ಬಲ್ಬನಟಿಗುಂ ಕೈವಾರಮುಂ ಕೂಡ ಕೂ || ರಿಸುಗುಂ ನಿಕ್ಕುವಮಪ್ಪ ಕಾರಣದಿನಿಂತೀ ಸಾಮಮಂ ಮುಂ ಪ್ರಯೋ . ಗಿಸಿಕೊಟ್ಟವುದಂದು ದಂಡಮನೆ ಮುಂ ಮುಂತಿಕ್ಕುವಂ ಮಂತ್ರಿಯೇ || ೧೯. ಬಲಿಯಂ ವಾಮನರೂಪದಿಂದಮ ವಲಂ ಮುಂ ಬೇಡಿದಂ ಭೂರಿ ಭೂ ತಲಮಂ ಕುಂದನಗಾಯ ಕೊಂಡನಿಳಯಂ ಕಟಟಿನಿನುಂ ರಸಾ | ತಲದೊಳ್ ದೈತ್ಯನನಂತ ನೀನುಮಿಣಿಯಂ ಮುಂ ಚೀಡಿಯಟ್ಟ ಮಾ ರ್ಮಲೆದಾತಂ ಕುಡದಿರ್ದೊಡಂದಿಯ ನೀಂ ಲೋಕಂ ಗುಣಂಗೊಳ್ಳಿನಂ ೨೦
ವ|| ಎಂದು ನುಡಿದ ಮಂದರಧರನ ನುಡಿಗೆ ಕಿನಿಸಿ ಕಿಂಕಿಮೋಗಿ ಭೀಮಸೇನನಿಂತೆಂದಂ
ನಾಚಿಕೆಯಿಂದ ಸಂಕೋಚದಿಂದಿದ್ದೇನೆ. ಹಾಗಿದ್ದರೆ ಲೋಕದ ಜನರೆಲ್ಲ ಇವನು ಆಸ್ತಿಯಿಲ್ಲದವನು ಎಂದು ನಿಂದಿಸಿದರೆ ನನ್ನ ಕೀರ್ತಿಯೂ ಮಾಸಿಹೋಗುತ್ತದೆ. ಎಲೆ ಕಮಲನಾಭ ಇದಕ್ಕೆ ಮಾಡಬೇಕಾದ ಕಾರ್ಯವನ್ನು ನೀನು ನಿನ್ನ ದಿವ್ಯಚಿತ್ತದಲ್ಲಿ ಯೋಚಿಸಿ ಹೇಳು. ವ|| ಎನ್ನಲು ಕೃಷ್ಣನು (ಧರ್ಮರಾಜನನ್ನು ಕುರಿತು) 'ಧರ್ಮರಾಜ ನೀತಿ ಮತ್ತು ನಡತೆಯ ದೃಷ್ಟಿಯಿಂದ ನೋಡಿದರೆ ನೀನು ಹೇಳಿದ ಹಾಗೆಯೆ ಸತ್ಯ. ನಿನಗೆ ಕಾರ್ಯರೀತಿಯನ್ನು ಹೇಗೆಂದು ತಿಳಿಸುವುದು ನದಿಗೆ ನೀರು ತುಂಬುವ ಹಾಗೆ, ಸೂರ್ಯನಿಗೆ ದೀಪವನ್ನು ಹಚ್ಚುವ ಹಾಗೆ, ಇಂದ್ರನಿಗೆ ಸ್ವರ್ಗಲೋಕವನ್ನು ಪರಿಚಯ ಮಾಡಿಸುವ ಹಾಗೆ ಆಗುತ್ತದೆ. ಆದರೂ ೧೯. ಆರಂಭಿಸಿದ ಕಾರ್ಯ ಉದ್ದೇಶಿಸಿದ ಹಾಗೆಯೇ ಆಗುವುದಿಲ್ಲ, ಕಾರ್ಯಸಾಧನೆಯಾಗುವ ಒಂದು ನೀತಿಯನ್ನು ಈಗ ನಿಮಗೆ ತಿಳಿಸುತ್ತೇನೆ. ಮಾರ್ದವವು ಒರಟುತನವನ್ನು ನಾಶಪಡಿಸುತ್ತದೆ. ಹೊಗಳಿಕೆಯು ತಕ್ಷಣವೇ ಪ್ರೀತಿಯನ್ನುಂಟುಮಾಡುತ್ತದೆ. ಆದುದರಿಂದ ಮೊದಲು ಸಾಮೋಪಾಯವನ್ನು ಉಪಯೋಗಿಸುವುದು ಸೂಕ್ತ ಎಂದು ಉಪದೇಶ ಮಾಡುವವನು ನಿಜವಾದ ಮಂತ್ರಿ, ಹಾಗಲ್ಲದೆ ಉದಾಸೀನತೆಯಿಂದ ಏನೀಗ ಎಂದು ಮೊದಲು ದಂಡೋಪಾಯವನ್ನು ಸೂಚಿಸುವವನು ಮಂತ್ರಿಯಾಗಬಲ್ಲನೇ?” ೨೦. ಹಿಂದಿನ ಕಾಲದಲ್ಲಿ ವಾಮನನ ಆಕಾರದಲ್ಲಿ ಬಲಿಚಕ್ರವರ್ತಿಯಿಂದ ಈ ವಿಸ್ತಾರವಾದ ಭೂಮಿಯನ್ನು ತೆಗೆದುಕೊಂಡೆನು. ಆ ರಾಕ್ಷಸನನ್ನು ಇನ್ನೂ ಪಾತಾಳದಲ್ಲಿಯೇ ಕಟ್ಟಿಟ್ಟಿದ್ದೇನೆ. ಹಾಗೆಯೇ ನೀನು ರಾಜ್ಯಕ್ಕಾಗಿ ಮೊದಲು ಬೇಡಿ ದೂತನನ್ನು ಕಳುಹಿಸಿಕೊಡು. ಆತನು ಪ್ರತಿಭಟಿಸಿ ಕೊಡದಿದ್ದರೆ ಆಗ ಲೋಕವೆಲ್ಲ ಗುಣಗ್ರಹಣಮಾಡುವ ಹಾಗೆ ಯುದ್ಧಮಾಡು. ವ|| ಎಂಬುದಾಗಿ ಹೇಳಿದ ಕೃಷ್ಣನ ಮಾತಿಗೆ ಕರಳಿ ಕೋಪಗೊಂಡು ಭೀಮಸೇನನು ಹೀಗೆಂದನು