________________
ಕಂ
ಮ||
ನವಮಾಶ್ವಾಸಂ
ಶ್ರೀಗೆ ನೆಗಳಿಗೆ ವೀರ
ಶ್ರೀಗಾಗರಮಪ್ಪನೆಂಬ ಕಳ ಕಳ ವಿಜಯೋ । ದ್ಯೋಗದೊಳ ನೆಗನೆಂಬು ದ್ಯೋಗಿಗೆ ಮಲೆವನ್ಯನೃಪತಿಮಂಡಳಮೊಳವೇ | ಎಂದು ಜಗಜ್ಜನಮಳವನ
ಗುಂದಲೆಯಾಗಡರೆ ಬಿಡದ ಪೊಗಳುತ್ತಿರೆ ಕುಂ | ದೇಂದು ಯಶಂ ರಥದಿಂದಿದೆ ತಂದೆಗಿದನಗ್ರಜನ್ಮ ಪದ ಸರಸಿಜದೊಳ್ ||
ಅಮಗನ ಪವನತನಯನ
ನೆದಾಶೀರ್ವಚನಶತಮನಾಂತನುನಯದಿಂ |
ದೆಂಗಿದಮಳರುಮನ
ನೋವಲ್ಲು ತೆಗೆದಪ್ಪಿ ಪರಸೆ ನಲ್ವರಕೆಗಳಿಂ ||
ಚಲ ಚಲದಿನುಱದ ಪಗವರ
ತಲೆಗಳನರಿದಂದು ಬಂದು ಪಾಂಡುತನೂಜರ್ |
ತಲೆದೋರ ರಾಗಮಗುಂ
ದಲೆಯುಂ ಪೊಂಪುಟಿಯುವಾಯ್ತು ಮತ್ಸ ಗಾಗಳ್ || ಗುಡಿಯಂ ಕಟ್ಟಿಸಿ ಪೊಯ್ಲಿ ಬದ್ದವಣಮಂ ಪ್ರಾಣಕ್ಕಮರ್ಥಕ್ಕಮಿ ನ್ನೆಡ ನೇತಳಪುದೆಂದು ಕುರುಡಂ ಕಣ್ಣೆತ್ತವೋಲ್ ರಾಗದಿಂ | ದೊಡೆಯಂತಾಂ ಬಗೆದುಳ್ಳ ಸಾರ ಧನಮಂ ಮುಂದಿಟ್ಟತಿ ಪ್ರೀತಿಯಂ ಪಡೆದಂ ಮಪ್ಪ ಮಹೇಶನಂದು ಮನದೊಳ್ ತತ್ಪಾಂಡುಪುತ್ರರ್ಕಳಾ || 9 ೧. ಸಂಪತ್ತಿಗೂ ಕೀರ್ತಿಗೂ ಜಯಲಕ್ಷ್ಮಿಗೂ ಆವಾಸಸ್ಥಾನವಾಗುತ್ತೇನೆಂಬ, ಉತ್ಸಾಹಕರವೂ ಜಯಪ್ರದವೂ ಆದ ಕಾರ್ಯದಲ್ಲಿ ತೊಡಗಿರುತ್ತೇನೆನ್ನುವ ಕಾರ್ಯಶೀಲನಾದವನಿಗೆ ಪ್ರತಿಭಟಿಸುವ ಶತ್ರುರಾಜಸಮೂಹವುಂಟೇ ೨. ಎಂದು ಲೋಕದ ಜನಗಳು ಅವನ ಶಕ್ತಿಯನ್ನು ಅತಿಶಯವಾಗಿ ಅಭಿವೃದ್ಧಿಯಾಗುವ ಹಾಗೆ ಒಂದೇ ಸಮನಾಗಿ ಹೊಗಳುತ್ತಿರಲು ಕುಂದಪುಷ್ಪದಂತೆಯೂ ಚಂದ್ರನಂತೆಯೂ ಇರುವ ಯಶಸ್ಸುಳ್ಳ ಅರ್ಜುನನು ರಥದಿಂದಿಳಿದು ಬಂದ ಅಣ್ಣನ ಪಾದಕಮಲದಲ್ಲಿ ನಮಸ್ಕಾರ ಮಾಡಿದನು. ೩. ಧರ್ಮರಾಯನ ಮತ್ತು ಭೀಮನ ಸಂಪೂರ್ಣವಾದ ನೂರು ಆಶೀರ್ವಾದಗಳನ್ನೂ ಪಡೆದು ಅಮಳರನ್ನು ಪ್ರೀತಿಯಿಂದ ಆಲಿಂಗನಮಾಡಿಕೊಂಡು ಒಳ್ಳೆಯ ಹರಕೆಗಳಿಂದ ಹರಸಿದನು. ೪. ಪಾಂಡವರು ಉದಾಸೀನರಾಗಿರದೆ ಹಟದಿಂದ ಶತ್ರುಗಳ ತಲೆಗಳನ್ನು ಕತ್ತರಿಸಿ ಅಂದು ಕಾಣಿಸಿಕೊಳ್ಳಲು ವಿರಾಟರಾಜನಿಗೆ ಅತ್ಯತಿಶಯವಾದ ಸಂತೋಷವುಂಟಾಯಿತು. ೫. ಬಾವುಟಗಳನ್ನು ಕಟ್ಟಿಸಿದನು. ಮಂಗಳವಾದ್ಯಗಳನ್ನು ಬಾಜಿಸಿದನು. ನನ್ನ ಪ್ರಾಣಕ್ಕೂ ಐಶ್ವರ್ಯಕ್ಕೂ ಇನ್ನು ಯಾವುದರಿಂದಲೂ ವಿಘ್ನವುಂಟಾಗುವುದಿಲ್ಲ ಎಂದು ಭಾವಿಸಿ ಕುರುಡನು ಕಣ್ಣನ್ನು