________________
ಅವಮಾಶ್ವಾಸಂ) ೪೦೭ ವ|| ಆಗಳದಂ ಕಂಡುತ್ತರನೊತ್ತರವೆತ್ತಿದಂತೆ ಬೆರ್ಚಿ ಬಿಗಡುಗೊಂಡುಉil ನೋಡಲಟುಂಬವೆಂದೂಡಿದನಾಂತಿದಾರ್ ತವಿಪನ್ನರೆಂದು ನಾ
ಕೂಡ ವಿರಾಟಸೂನು ರಥದಿಂದಿಳಿದೋಡಿದೊಡೆಯ ಪೂಣ್ಣು ಚ | ರ್ಚೊಡೆ ಕಿರೀಟ ತನ್ನನಚಿಪುತ್ತ ಶಮಿಾದ್ರುಮದಲಿಗಾತನಂ' ನೀಡಿರದುಯ್ದು ನೀಡಿಸಿದನಾತನಿನಲ್ಲಿಯ ಕೈದುವೆಲ್ಲಮಂ || ೧೦೦
ವ|| ಅಂತು ಗಾಂಡೀವಿ ಗಾಂಡೀವಂ ಮೊದಲಾಗೆ ದಿವ್ಯಶರಾಸನಶರಧಿ ವಿಚಿತ್ರತನುತ್ರಂಗಳೆಲ್ಲಮಂ ಗೆಲ್ಲಮಂ ತನಗಾವಗಂ ಕೊಲ್ವಂತೆ ಕೊಂಡು ಪಗೆವರ ಗಂಟಲ ಬಳೆಯನೊಡೆದು ಕಳೆವುದನನುಕರಿಸುವಂತೆ ತೀವಿ ತೊಟ್ಟ ಮುಂಗೈಯ್ಯ ಬಳೆಗಳನೊಡೆದು ಕಳೆದುಚಂ! ಪಿಣಿಲಂ ಕುರುಧ್ವಜಿನಿ ತೊಟ್ಟನ ಬಾಯನೆ ಬಿಟ್ಟುದಂದು ಗಂ.
ಡುಡೆಯುಡೆ ಗಂಡುಗಟ್ಟುದು ನೆಗಟ್ಯ ಗಾಂಡಿವಮಂ ತಗುಳು ಜೇ | ವೊಡೆಯ ಸಿಡಿ ಸಿಡಿಲು ಪೊಡವಂತವೊಲಾಯ್ತನೆ ಗಂಡಗಾಡಿ ನೂ
ರ್ಮಡಿ ಮಿಗಿಲಾದುದಾ ರಥಮನೇಲಲೊಡಂ ಪಡೆಮಚ್ಚೆಗಂಡನಾ || ೧೦೧
ವ|| ಅನ್ನೆಗಮ ಪರಸೈನ್ಯಭೈರವನ ಬರವಿಂಗಳ್ಳಿ ಗಾಡಿಗೊಡ್ಡಿದ ಸೊಡರಂತೆ ನಡನಡ ನಡುಗುವ ಕುರುದ್ವಜಿನಿಯಂ ಕಂಡು ಸುಯೋಧನಂಗೆ ಗಾಂಗೇಯನಿಂತೆಂದಂ
ಕಾಣಲು ದುರ್ಯೋಧನನ ಸೇನಾಸಮುದ್ರವು ಉತ್ತರನ ಕಣ್ಣಿಗೆ ಅತ್ಯಂತ ಭಯಂಕರವಾಗಿ ಕಂಡಿತು. ವ| ಅದನ್ನು ನೋಡಿ ಉತ್ತರನು ಇದ್ದಕ್ಕಿದ್ದ ಹಾಗೆ ಆಕ್ರಮಿಸಲ್ಪಟ್ಟವನ ಹಾಗೆ ಬೆಚ್ಚಿ ಭಯವನ್ನು ಹೊಂದಿದನು. ೧೦೦. 'ನೋಡುವುದಕ್ಕೆ, ಅಸಾಧ್ಯವಾದ ಇದನ್ನು ಪ್ರತಿಭಟಿಸಿ ನಾಶಮಾಡುವವರಾರು' ಎಂದು ಉತ್ತರನು ನಾಚಿಕೆಗೆಟ್ಟು ತೇರಿನಿಂದಿಳಿದು ಓಡಿದನು. (ಹಿಂದ) ಹೆಮ್ಮಯಿಂದ ಪ್ರತಿಜ್ಞೆಮಾಡಿ ಈಗ ಹೆದರಿ ಭಯದಿಂದ ಓಡಿಹೋಗುತ್ತಿರುವ ಉತ್ತರನಿಗೆ ಅರ್ಜುನನು ತನ್ನ ಪರಿಚಯವನ್ನು ಮಾಡಿಕೊಟ್ಟು ಅವನನ್ನು ಬನ್ನಿಯ ಮರದ ಹತ್ತಿರಕ್ಕೆ ತಕ್ಷಣ ಕರೆದುಕೊಂಡು ಹೋಗಿ ಅವನಿಂದ ಆಯುಧಗಳೆಲ್ಲವನ್ನೂ ತನಗೆ ನೀಡುವ ಹಾಗೆ ಮಾಡಿದನು - (ತೆಗೆದುಕೊಂಡನು) ವಹಾಗೆ ಅರ್ಜುನನು ಗಾಂಡೀವವೇ ಮೊದಲಾದ ದಿವ್ಯವಾದ ಬಿಲ್ಲುಬತ್ತಳಿಕೆಗಳನ್ನೂ ವಿಚಿತ್ರವಾದ ಕವಚಗಳನ್ನೂ ತನಗೆ ವಿಜಯಸೂಚಕವಾಗಿಯೇ ಅಂಗೀಕರಿಸಿದನು. ಶತ್ರುಗಳ ಗಂಟಲ ಬಳೆಯನ್ನು ಒಡೆದು ಹಾಕುವುದನ್ನು ಅನುಸರಿಸುವಂತೆ ಪೂರ್ಣವಾಗಿ ತೊಟ್ಟಿದ್ದ ಮುಂಗಯ್ಯನ ಬಳೆಗಳನ್ನು ಒಡೆದುಹಾಕಿದನು. ೧೦೧. ಕೂದಲಿನ ಗಂಟನ್ನು (ಹೆರಳನ್ನು) ಬಿಚ್ಚಲು ಕೌರವ ಸೈನ್ಯವು ಇದ್ದಕ್ಕಿದ್ದ ಹಾಗೆ ಆಶ್ಚರ್ಯ ಮತ್ತು ಭಯದಿಂದ ಬಾಯಿಬಿಟ್ಟಿತು. ಪುರುಷನಿಗೆ ಯೋಗ್ಯವಾದ ಗಂಡುಗಚ್ಚೆಯ ಉಡುಪನ್ನು ಧರಿಸಲು ತನ್ನ ಪೌರುಷವನ್ನು ನೀಗಿತು. ಗಾಂಡೀವವನ್ನು ಹಿಡಿದು ಹೆದೆಯಿಂದ ಶಬ್ದಮಾಡಲು ಸಿಡಿಲು ಸಿಡಿದು ಹೊಡೆಯುವ ಹಾಗಾಯಿತು ಎನ್ನಲು ಪಡೆಮಚ್ಚೆಗಂಡನಾದ ಅರ್ಜುನನು ರಥವನ್ನು ಹತ್ತಲು ಅವನ ಪೌರುಷವೂ ಸೌಂದರ್ಯವೂ ನೂರರಷ್ಟು ಹೆಚ್ಚಾಯಿತು. ವ|| ಅಷ್ಟರಲ್ಲಿ ಆ ಕಡೆ