________________
ಅವಮಾಶ್ವಾಸಂ / ೪೦೧ ವ|| ಎಂದು ಪೊಲೀಲ ಜನಂಗಳ್ ಗುಜುಗುಜುಗೊಂಡು ಕೀಚಕನ ಪಡೆಮಾತನೆ ನುಡಿಯೆ ವಿರಾಟನ ಮಹಾದೇವಿಯುಂ ಪೇಡಿ ಸತ್ತಂತೇನುಮನನಲಯದ ನಾಣ್ಯ ತನ್ನೊಳೆ ಮೂಗುತಿಯನಟ್ಟು ಕೆಮ್ಮನಿರ್ದಳಿತ್ತ ದುರ್ಯೋಧನನ ಗೂಢಪ್ರಣಿಧಿಗಳಾ ಮಾತಂ ಜಲಕ್ಕನದು ನಾಗಪುರಕ್ಕೆ ವಂದು ಸುಯೋಧನ ಸಭಾಮಧ್ಯದೊಳಿಂತೆಂದು ಬಿನ್ನಪಂಗೆಯ್ದರ್ಮll - ಗುಡಿಗಂ ಬದ್ದವಣಕ್ಕಮಪ್ಪ ಪಡೆಮಾತೇಮಾತಿದಂ ಕೇಳೊಡೀ
ಗಡೆ ಮೆಚೀಯಲೆವೇಚ್ಚುಗೆಯ ಷರಮದ್ರೋಹರ್ಕಳಾಗಿರ್ದು ನಿ ಮಡಿಯೊ ಪೋಗದೆ ಕಾಡುತಿರ್ದ ಸುಭಟರ್ಕಳ್ ನೂರ್ವರುಂ ಕೀಚಕರ್ ಮಡಿದರ್ ದೇವರದೊಂದು ಪುಣ್ಯಬಲದಿಂ ಗಂಧರ್ವಯುದ್ಧಾಗ್ರದೊಳ್|| ೮೩
ವll ಅದುಕಾರಣದಿಂದಾ ವಿರಾಟನ ಮಂಡಲಂ ಗೋಮಂಡಲದಂತೆ ಹೇಳಾಸಾಧ್ಯವಾಗಿ ಕೈಗೆವರ್ಕುಮಂಬುದುಂ ಕುರುರಾಜಂ ಸಿಂಧುತನೂಜನ ಮೊಗಮಂ ನೋಡಿಮll ಇದು ದಲ್ ಚೋದ್ಯಮತರ್ಕಮದ್ಭುತಮಸಂಭಾವ್ಯಂ ವಿಚಾರಕ್ಕೆ ಬಾ
ರದುದೆಂತೆಂದೊಡೆ ಸಂದ ಸಿಂಹಬಲನಂ ಕೊಲ್ವನ್ನರಾರ್ ಭೀಮನ ಲದವರ್ ಕೀಚಕ ಭೀಮ ಶಲ್ಯ ಬಲದೇವರ್ಕಳ್ ಸಮಾನರ್ಕಳ ಪುದಂ ತೋಳ್ವಲದೊಳ್ ಪಳಂಗಮರಿದೀ ವಿಕ್ರಾಂತಮುಂ ಗರ್ವಮುಂ || ೮೪
ನಡತೆಯಿಲ್ಲದವನ ಪೌರುಷಪರಾಕ್ರಮಗಳಿಂದೇನು ಪ್ರಯೋಜನ ? ವlು ಎಂದು ಪಟ್ಟಣದ ಜನಗಳು ಗುಂಪುಕೂಡಿಕೊಂಡು ಕೀಚಕನ ವಿಷಯವಾದ ಮಾತನ್ನೇ ಆಡುತ್ತಿರಲು ವಿರಾಟನ ಮಹಾರಾಣಿಯಾದ ಸುದೇಷ್ಠೆಯೂ ಹೇಡಿ ಸತ್ತ ಹಾಗೆ ಏನನ್ನು ಹೇಳಲೂ ತಿಳಿಯದೆ ಲಜ್ಜೆಪಟ್ಟು ತನ್ನಲ್ಲಿಯೇ ಮೂಗಳುವನ್ನು ಅತ್ತು ಸುಮ್ಮನಿದ್ದಳು. ಈ ಕಡೆ ದುರ್ಯೊಧನನ ಗೂಢಚಾರರು ಆ ಮಾತನ್ನು ಥಟ್ಟನೆ ತಿಳಿದು ಹಸ್ತಿನಾವತಿಗೆ ಬಂದು ದುರ್ಯೋಧನನ ಸಭೆಯ ಮಧ್ಯದಲ್ಲಿ ಹೀಗೆಂದು ವಿಜ್ಞಾಪನೆ ಮಾಡಿದರು. ೮೩. 'ಧ್ವಜಾರೋಹಣಮಾಡುವುದಕ್ಕೂ ಮಂಗಳವಾದ್ಯ ಮಾಡಿಸುವುದಕ್ಕೂ ಯೋಗ್ಯವಾದ ಸಮಾಚಾರ' ಎಂದರು ದೂತರು. ಅದೇನಂತಹ ಸುದ್ದಿ ಎಂದ ದುರ್ಯೊಧನ, ಇದನ್ನು ಕೇಳಿದ ತಕ್ಷಣವೇ ನಮಗೆ ಬಹುಮಾನವನ್ನು ಕೊಟ್ಟೇ ತೀರಬೇಕಾದುದು. 'ನಿಮ್ಮ ವಿಶೇಷಪರಮ ದ್ರೋಹಿಗಳಾಗಿದ್ದು ನಿಮ್ಮನ್ನು ಸದಾ ಹಿಂಸಿಸುತ್ತಿದ್ದ ನೂರುಜನ ಕೀಚಕರೂ ಸ್ವಾಮಿಯ ಪುಣ್ಯಬಲದಿಂದ ಗಂಧರ್ವರೊಡನೆ ಆದ ಯುದ್ಧದಲ್ಲಿ ಸತ್ತರು. ವt ಆದ ಕಾರಣದಿಂದ ವಿರಾಟದೇಶವು ಪಶುವಿನ ಹಿಂಡಿನಂತೆ ಆಟದಷ್ಟು ಸುಲಭಸಾಧ್ಯವಾಗಿ ಕೈವಶವಾಗುತ್ತದೆ' ಎಂದು ಹೇಳಿದರು. ದುರ್ಯೋಧನನು ಭೀಷ್ಮಾಚಾರ್ಯರ ಮುಖವನ್ನು ನೋಡಿದನು. ೮೪. ಇದು ನಿಜವಾಗಿಯೂ ಆಶ್ಚರ್ಯಕರವಾದುದದು, ತರ್ಕಿಸಲಾಗದುದು. ಅದ್ಭುತವಾದುದು, ನಡೆಯಲಾಗದುದು, ವಿಚಾರ ಮಾಡಲಾಗದುದು ; ಹೇಗೆಂದರೆ ಭೀಮನಲ್ಲದವರು ಸಿಂಹಬಲನನ್ನು ಕೊಲ್ಲುವವರಾರಿದ್ದಾರೆ ? ಬಾಹುಬಲದಲ್ಲಿ ಕೀಚಕ, ಭೀಮ, ಶಲ್ಯ, ಬಲದೇವರುಗಳು ಸಮಾನರಾಗಿರುವುದರಿಂದ ಈ ಪೌರುಷಮಾರ್ಗವು