________________
ervoll
ಅಷ್ಟಮಾಶ್ವಾಸಂ | ೩೯೯
ಆಂ ಜಗದೊಳ್ ಬಲಸ್ಥನೆನಿದಿರ್ಚುವರಾರೆನಗೆಂದು ಸೋಲದಿಂ ಕಂಜದಳಾಕ್ಷಿಯಂ ಪಿಡಿದನೀ ಖಳನೆಂಬಲಿಂದಮತ್ತಮಿ | ತಂ ಜವನೊಕ್ಕಲಿಕ್ಕಿದೊಡ ನಾಟಕಶಾಲೆಯೊಳೆಯ ರಕ್ತ ಪು ಸ್ಟಾಂಜಳಿಗೆ ಮಾಯವೊಲಿರ್ದುವು ಸೂಸಿದ ಖಂಡದಿಂಡೆಗಳ ||೭೮
ವ|| ಅಂತು ಸಂಧಿ ಸಂಧಿಯೊಳ್ ಸಹಸ್ರ ಸಿಂಹಬಲನೆನಿಪ ಸಿಂಹಬಲನನಶ್ರಮದೊಳೆ ಬಾಣಸಿನ ಮನೆಯೊಳ್ ಬಂದಿರ್ದನಿತ್ತ ದೌಪದಿಯುಮುವಾಯದೊಳ್ ಗುಣಣೆಯ ಮನೆಯ ಮುಂದೆ ನಿಂದು
ಕಂli
ಗಂಧರ್ವವನಿತೆಯಂ ನಿ
ರ್ಬಂಧಂ ಬೇಡಳಿಗೆ ಸಾವೆಯನೆ ಮಾಣದ ಕಾ | ಮಾಂಧಂ ಕೀಚಕನಾಟಿಸಿ
ಗಂಧರ್ವರಿನದನೆನಗೆ ದೂಱಪ್ಪಿನೆಗಂ ||
ವ|| ಎಂದು ಗಗ್ಗರಿಕಗೊಳೂ ಸರಮಂ ಕರ್ಣಪರಂಪರೆಯ ಕೇಳು ಸಿಂಹಬಲನೊಡವುಟ್ಟಿದರ್ ನೂರ್ವರ್ ಕೀಚಕರುಂ ಪರಿತಂದು ಮುಳಿಸಿನೊಳ್ ಕಾಣದಲ್ಲಮ ಡಾಮರ ಡಾಕಿನಿಯಿಂದಮಾದುದೀಕೆಗಮಮ್ಮಣ್ಣಂಗಮೊಂದೆ ವಿಧಿಯಂ ಮಾಮಂದಾಕೆಯಂ
26
ಉಬ್ಬಿಕೊಂಡಿದ್ದ ಹಸುಬೆಯ ಚೀಲವನ್ನು ಅದರಲ್ಲಿದ್ದ ಪದಾರ್ಥವನ್ನು ಖಾಲಿಮಾಡಿದಂತೆ ಕೀಚಕನ ಶರೀರವು ಭಯಂಕರವಾಯಿತು. ೭೮. ಪ್ರಪಂಚದಲ್ಲೆಲ್ಲ ನಾನೇ ಬಲಿಷ್ಠನಾದವನು. ನನ್ನನ್ನು ಇದಿರಿಸುವವರಾರಿದ್ದಾರೆ ಎಂದು ಮೋಹದಿಂದ ಕಮಲದಳನೇತ್ರೆಯಾದ ದೌಪದಿಯನ್ನು ಈ ದುಷ್ಟನು ಹಿಡಿದನು ಎಂಬ ದುಃಖದಿಂದ ಯಮನು ಆ ಕಡೆಯಿಂದ ಈ ಕಡೆಗೆ ಒಕ್ಕಣಮಾಡಲಾಗಿ ನಾಟಕಶಾಲೆಯಲ್ಲಿ ಚೆಲ್ಲಿದ ಮಾಂಸರಾಶಿಗಳು ಕೆಂಪುಹೂವುಗಳನ್ನು ಎರಚಿದ ರೀತಿಯಲ್ಲಿ ಇದ್ದುವು. ವ|| ಹಾಗೆ ಭೀಮನು ಕೀಲುಕೀಲುಗಳಲ್ಲಿಯೂ ಸಾವಿರ ಸಿಂಹದ ಬಲವುಳ್ಳವನೆನಿಸಿದ ಕೀಚಕನನ್ನು ಅನಾಯಾಸದಿಂದ ಕೊಂದು ಯಮನಿಗೆ ಔತಣವಿಕ್ಕಿ ನಿತ್ಯದ ಹಾಗೆ ಅಡುಗೆಮನೆಯನ್ನು ಸೇರಿದನು. ಈ ಕಡೆ ದೌಪದಿಯು ಉಪಾಯದಿಂದ ನಾಟ್ಯಶಾಲೆಯ ಮುಂದುಗಡೆ ನಿಂತುಕೊಂಡು ೭೯. ನಾನು ಗಂಧರ್ವಪತ್ನಿ, ಬಲಾತ್ಕಾರ ಮಾಡಬೇಡ; ದುರಾಸೆಪಟ್ಟರೆ ಸಾಯುತ್ತೀಯೆ ಎಂದರೂ ಬಿಡದೆ ಕಾಮಾಂಧನಾದ ಕೀಚಕನು ಆಶೆಪಟ್ಟು ನನಗೆ ಅಪಪ್ರಥೆ ಬರುವಹಾಗೆ ಗಂಧರ್ವರಿಂದ ನಾಶವಾದನು. ವ| ಎಂದು ಆರ್ತಸ್ವರದಿಂದ ಕೂಗಿಕೊಳ್ಳುವ ಧ್ವನಿಯನ್ನು ಕಿವಿಯಿಂದ ಕಿವಿಗೆ ಕೇಳಿದ
ಸಿಂಹಬಲನಾದ ಕೀಚಕನ ಸಹೋದರರಾದ ನೂರುಜನ ಕೀಚಕರು ಓಡಿಬಂದು ಕೋಪದಿಂದ ಕುರುಡರಾಗಿ ಎಲ್ಲವೂ ಈ ಪಿಶಾಚಿಯಿಂದಾಯಿತು, ಇವಳಿಗೂ `ನಮ್ಮಣ್ಣನಿಗೂ ಒಂದೇ ರೀತಿಯ ಸಂಸ್ಕಾರವನ್ನು ಮಾಡುವೆವು ಎಂದು ಅವಳನ್ನು ಮುಂದಿರಿಸಿಕೊಂಡು ಹೋದರು. ಇವನನ್ನು ಈ ರಾತ್ರಿಯೇ ದಹನಕ್ರಿಯಾದಿಗಳಿಂದ ಸಂಸ್ಕಾರ ಮಾಡಬೇಕು ಎಂದು ತೆಗೆದುಕೊಂಡು ಹೋಗುವಾಗ ಆ ಗಲಭೆಯ ಶಬ್ದವನ್ನು