________________
ಉಪೋದ್ಘಾತ | ೩೫
ದುರ್ಯೋಧನನು ಕಾಲವಂಚನೆಗಾಗಿ ಮುಳುಗಿರಲು ಬಂದ ವೈಶಂಪಾಯನ ಸರೋವರದ ದೃಶ್ಯ ಅತ್ಯಂತ ಭಯಂಕರವಾಗಿದೆ.
ಇದು ಪಾತಾಳಬಿಲಕ್ಕೆ ಬಾಗಿಲ್, ಇದು ದಲ್ ಘೋರಾಂಧಕಾರಕ್ಕೆ ಮಾ ಡಿದ ಕೂಪಂ, ಪಂತು, ಇದುಗ್ರಲಯಕಾಳಾಂಭೋಧರಚ್ಛಾಯೆ ತಾ ನೆ ದಲ್, ಎಂಬಂತಿರೆ ಕಾಚಮೇಚಕಚಯಚ್ಛಾಯಾಂಬುವಿಂ ಗುಣ್ಣಿನಿಂ ಪುದಿದಿರ್ದು ಸರೋವರಂ ಬಕಬಳಾಕಾನೀಕ ರಾವಾಕುಳಂ ||
ಮಹಾಕಾವ್ಯಗಳ ಪ್ರಧಾನವಾದ ಅಷ್ಟಾದಶವರ್ಣನೆಗಳಲ್ಲಿ ಋತುವರ್ಣನೆ ಒಂದು ಪ್ರಧಾನವಾದ ಭಾಗ, ಆದುದರಿಂದ ಎಲ್ಲ ಕವಿಗಳೂ ಅವನ್ನು ತಮ್ಮ ಕಾವ್ಯಗಳಲ್ಲಿ ಉಪಯೋಗಿಸದೇ ಇರುವುದಿಲ್ಲ. ಆದರೆ ಅವೆಲ್ಲ ಸಾಂಪ್ರದಾಯಿಕವಾದ ಕವಿಸಮಯಗಳ ಮಾಲೆಯಾಗಿರುತ್ತವೆ. ಆದರೆ ಅವೇ ಋತುವರ್ಣನೆಗಳು ಪಂಪನ ಕಾವ್ಯಗಳಲ್ಲಿ ಬಹುನವೀನವಾಗಿಯೂ ಅನುಭವಯೋಗ್ಯವಾಗಿಯೂ ಇವೆ. ಮುಂದಿನದು ವರ್ಷಾ ಕಾಲದ ವರ್ಣನೆ : 'ಕರಿಯ ಮುಗಿಲ್ಗಳಿಂ ಗಗನಮಂಡಲಮೊಟ್ಟರೆ, ಸೋಗೆಯಿಂ ವನಾಂತರಮೆಸೆದೊಪ್ಪೆ, ತೋರ್ಪ ಮೊಳೆವುಳಿನ್ ಈ ಧರಣೀವಿಭಾಗಮೊಪ್ಪಿರೆ, ಪೊಸವೇಟಕಾರ ಎರ್ದೆಗಳು ಪೊಸಕಾರ ಪೊಡರ್ಪು ಕಂಡು ಅದೇಂ ಕರಿತುವು ಅದೇಂ ಕಲಕಿದುವು ಅದೇಂ ಕುಳಿಗೊಂಡವು ಅದೇಂ ಕನಲವೊ' 'ಪಯೋಧರಕಾಲದೊಳ್ ಎರಡು ತಡಿಯುಮಂ ಪೊಯ್ದು ಪರಿವ ತೊರೆಗಳುಮಂ ತೊವಲು ಸೊಗಯಿಸುವ ಅಡವಿಗಳುಮಂ ಪಸಿಯ ನೇತ್ರಮಂ ಪಚ್ಚವಡಿಸುವಂತೆ ಪಸುರ್ಪುವಡೆದ ನೆಲದೊಳ್ ಪದ್ಮರಾಗದ ಪರಲ್ಗಳಂ, ಬಲಿಗೆ ದಳದಂತೆ ಉಪಾಶ್ರಯಂಬಡೆದಳಂಕರಿಸಿದ ಇಂದ್ರಗೋಪಂಗಳುಮಂ, ಕಿಸುಗಾಡ ನೆಲಂಗಳೆಳದಳಿರ ಬಣ್ಣಮಂ ಕೆಲ್ಗೊಂಡು ವಿರಹಿಗಳ ಮನಮನೊಲಿಸುವಂತೆ ಜಲಜಲನೆ ಪರಿವ ಜರಿವೊನಲ್ಗಳುಮಂ ಕಂಡು'.
ಇದು ವಸಂತಋತುವಿನ ವರ್ಣನೆ :
ಅಲರ್ವದಿರ್ಮುತ್ತೆ ಪೂತ ಪೊಸಮಲ್ಲಿಗೆ, ಕಂಪನವುಂಕುತಿರ್ಪ ತೆಂ ಬೆಲರುಮಿದಂ ಗೆಲಲ್ ಬಗೆದ ತುಂಬಿಗಳ ಧ್ವನಿಯಿಂ ಕುಕಿಲ್ವ ಕೋ ಗಿಲೆ, ನನ್ನೆದೋಟಿ ನುಣ್ಣೆವ ಮಾಮರನ್, ಒರ್ಮೊದಲಿಲ್ಲದುಣುವು ಯ್ಯಲ ಪೊಸಗಾವರಂ ಪುಗಿಲೊಳೇನೆಸೆದ ಬಸಂತಮಾಸದೊಳ್
ಅಷ್ಟೇ ಅಲ್ಲ! 'ಬಳ್ಳಳ ಬಳೆದ ಮಿಳಿರ್ವಶೋಕೆಯ ತಳಿಗಳುಮಂ ಮಾಮರಂ ಗಳುಮಂ ಮರದಿಂದ ಮರಕ್ಕೆ ದಾಂಗುಡಿಯಿಡುವ ಮಾಧವೀಲತೆಗಳುಮಂ ನನೆಯ ಬಿರಿಮುಗ್ಗುಳಳ ತುಲಗಲೊಳೆಗಿ ತುಲುಗಿದ ಕಲ್ಪಲತೆಗಳುಮಂ ಭೋರ್ಗರೆದು ಮೊರೆವ ತುಂಬಿಗಳುಮಂ, ರಂಗವಲಿಯಿಕ್ಕಿದಂತೆ ಪುಳಿನಸ್ಥಳಗಳೊಳ್ ಉದಿರ್ದ ಕಲೆವೂಗಳುಮಂ ನಿಜನಿಗೊಂಡು ಸೊಗಯಿಸುವ ನಿಡಗನ ನಿಜದಳಿರ ಗೊಂಚಲ್ಗಳುಮಂ ಕಳಿಕಾಂಕುರಂ ಗಳುಮಂ ಸೊನೆಯ ಸೋನೆಗಳುಮಂ ಒಳಕೊಂಡು ವನಂಗಳ್ ಅನಂಗಂಗೆ ತೊತ್ತುವೆಸಂಗೆಯ್ದುವು.' ಶರತ್ಕಾಲದ ವರ್ಣನೆ ಇನ್ನೂ ಸೊಗಸು. 'ಅಳಿ ಬಿರಿದಿರ್ದ