________________
೫೮
೩೯೨) ಪಂಪಭಾರತಂ ಕoll ಪರ್ಪರಿಕೆಗಿಡದ ಕಲಿ ವಿಷ
ಖರ್ಪರನಿದಿರಾಂಡಾಂತು ವಲಲಂ ತಳಮಂ | ಮಾರ್ಪೊಸೆದು ತಳು ಕಣ್ಣಿರಿ
ತರ್ಪಿನೆಗಮವುಂಕಿ ಸಿಂಹನಾದದಿನಾರ್ದಂ || ವ|| ಅಂತು ಸುಯೋಧನನ ಮಲ್ಲನಂ ಕೊಂದು ವಲಲಂ ವಿರಾಟನ ಮನೆಯೊಳ್ ತನ್ನ ಮಾತೆ ಮಾತಾಗಿರ್ದನನ್ನೆಗಂ ವಿರಾಟನ ಮೈದುನಂ ಸುದೇಷ್ಠಯೊಡವುಟ್ಟಿದನೊರ್ವಂ ಸಿಂಹಬಲಂ ಕೀಚಕನೆಂಬಂ ಸುಯೋಧನನ ದಂಡೆಲ್ಲಮನದೋಡಿಸಿ ಬಂದು ವಿರಾಟನಂ ಕಂಡು ತಮ್ಮನಂ ಕಾಣಲ್ ಪೋದಾತನಾ ಮಹಾದೇವಿಯ ಕೆಲದೊಳಿರ್ದಚಂII ಸೊಗಯಿಸೆ ತೋಳ ಮೊತ್ತಮೊದಲೊಳ್ ಪೊಗರ್ವಟೈಸವೊಂದು ನುಣ್ಣು ಸಾ
ವಗಿಸುವ ಮೇಲುದಂ ಮೊಲೆಗಳಳ್ಳಿಯುತ್ತಿರೆ ಪೊಣೆ ಘರ್ಮ ಬಂ | ದುಗಳಲರಂಬುವೋಲೆಳಸೆ ಪಾಟಲಲೋಲವಿಲೋಚನಂ ಮನಂ |
ಬುಗೆ ನಳಿತೋಳ ಕೋಳೆಸೆಯ ಘಟ್ಟಮಗುಟ್ಟುವ ಘಟ್ಟವಳಿಯಂ |೫೯ - ವll ಭೋಂಕನೆ ಕಂಡು ಕೀಚಕಂ ಕಾಮದೇವಂ ಮಾಡಿದ ಯಾಚಕನಂತ ಕರಮ ನಾಣ್ಣಿಟ್ಟು ಮನಂಗಾಪಟಿದಳಿಪಿ ನೋಡಿ ತನ್ನ ಮನದೊಳಿಂತೆಂದು ಬಗೆದರಿಚಂ|| ಸುರಿಯ ಬೆಮರ್ ಕುರುಳ್ಳಿಡಿದು ಮುತ್ತುಗಳಂ ಮಣಿದುಂಬ ಕಾಣುವಂ
ತಿರ ನಳಿತೋಳ ಬಳಳಿಕ ಕಣೋಳೆ ಘಟಿ ಮಗುಚುವಂದನ | ಅರೆದು ಮಗುಟ್ಟುವಂದಮ ದಲನ್ನೆರ್ದೆಯಂ ಪವಿತೇನದೆಂತು ಪೇಯ್ ಪರಿಕಿಪನೀ ಮೃಗೋದ್ಭವದ ಕಂಪುಮನೀಕೆಯ ಸುಯ್ಯ ಕಂಪುಮಂ || ೬೦
ದುರ್ಯೊಧನನ ಸೈನ್ಯವನ್ನೆಲ್ಲ ಶೀಘ್ರವಾಗಿ ಓಡಿಸಿ ಬಂದು ವಿರಾಟನನ್ನು ನೋಡಿಯಾದ ಮೇಲೆ ತಮ್ಮಕ್ಕನನ್ನು ನೋಡಲು ಹೋದನು. ಆ ಮಹಾರಾಣಿಯ ಸಮೀಪದಲ್ಲಿದ್ದ ಬ್ರೌಪದಿಯನ್ನು ಕಂಡನು. ೫೯. ಅವಳ ತೋಳ ನುಣುಪು ವಿಶೇಷಕಾಂತಿಯಿಂದ ಸೊಗಸಾಗಿತ್ತು. ನೋಟಕರಿಗೆ ಸಾವನ್ನುಂಟುಮಾಡುತ್ತಿರುವ ಅವಳ ಮೊಲೆಗಳು ಮೇಲುಹೊದಿಕೆಯನ್ನು ಅಲುಗಾಡಿಸುತ್ತಿದ್ದುವು. ಬೆವರಹನಿಗಳು ಹೊರಹೊಮ್ಮು ತಿದ್ದುವು. ನಸುಗೆಂಪಾದ ಕಣ್ಣುಗಳು ಪುಷ್ಪಬಾಣದಂತೆ ಮನಸ್ಸನ್ನಾಕರ್ಷಿಸುತ್ತಿದ್ದುವು. ದುಂಡಾದ ತೋಳುಗಳ ಹಿಡಿತವು ಚೆಲುವಾಗಿರಲು ಗಂಧವನ್ನು ಅರೆಯುತ್ತಿದ್ದ ಸೈರಂದ್ರಿಯನ್ನು ಕೀಚಕನು ನೋಡಿದನು ವll ಇದ್ದಕ್ಕಿದ್ದ ಹಾಗೆ ಅವಳನ್ನು ನೋಡಿ ಕೀಚಕನು ಕಾಮದೇವನು ಮಾಡಿದ ಭಿಕ್ಷುಕನಂತೆ ವಿಶೇಷವಾಗಿ ನಾಚಿಕೆಗೆಟ್ಟು ಮನಸ್ಸಿನ ಹಿಡಿತ ತಪ್ಪಿ ಆಸೆಯಿಂದ ನೋಡಿ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿ ದನು - ೬೦. ಮರಿದುಂಬಿಗಳು ಮುತ್ತುಗಳನ್ನು ಕಾರುವ ಹಾಗೆ ಬೆವರು ಮುಂಗುರುಳು ಗಳನ್ನು ಅನುಸರಿಸಿ ಸುರಿಯುತ್ತಿವೆ. ದುಂಡಾದ ತೋಳಿನ ಸೌಂದರ್ಯವು ಆಕರ್ಷಕ ವಾಗಿದೆ. ಇದು ಗಂಧವನ್ನು ತೇಯುವ ರೀತಿಯಲ್ಲ ; ನನ್ನ ಎದೆಯನ್ನು ಅರೆದು ಹಿಂದುಮುಂದು ಮಾಡುವ ರೀತಿಯೇ ಸರಿ. ನಾನು ಈ ಕಸ್ತೂರಿಯ ವಾಸನೆಯನ್ನೂ