________________
ಅಷ್ಠಮಾಶ್ವಾಸಂ | ೩೮೭
ಕನಕನ ಬೇಳೆಯಿಂದೊಗೆದ ಕೀರ್ತಿಗೆಯಂ ನಿನಗಪ್ಪಪಾಯಮಂ ನೆನೆದು ಮದೇಭರೂಪಮನೆ ತೋಟ ನಿಜಾಶ್ರಮದಿಂದಗಲ್ಲಿ ನಿ | ನ್ನನುಜರನೀಯುಪಾಯದೊಳ ಕೀರ್ತಿಗೆಯೊಡ್ಡಿಗೆ ಕಾದೆನಾಂ ಕೃತಾಂ ತನೆನೆನಗಮ್ಮ ನೀಂ ಮಗನೆಯನ್ ಪೆಂತೇಂ ನಿನಗುತ್ತರೋತ್ತರಂ || ೪೮ ವ|| ಎಂದು ಮಕೆಂದಿದರನೆತ್ತುವಂತೆ ನಾಲ್ವರುಮನತ್ತಿ ತಾಂ ಮುನ್ನಂ ತಂದರಣಿಯಂ ಕೊಟ್ಟು ಕೃತಾಂತನಂತರ್ಧಾನಕ್ಕೆ ಸಂದಂ ಧರ್ಮತನೂಜನುಮನುಜರ್ ಸಹಿತಂ ನಿಜನಿವಾಸಕ್ಕೆ ವಂದರಣಿಯಂ ಪಾರ್ವಗೆ್ರ ಕೊಟ್ಟು ಕೆಲವು ದವಸಮಿರ್ದು ಧಮ್ಮ ಪುರೋಹಿತಂಬೆರಸಯ್ದರು ಮಾಲೋಚಿಸಿ
ಚಂ!!
ಚoll ನೆದುವು ಪನ್ನೆರರಿಸಮುಗ್ರವಿರೋಧಿಜನಕ್ಕೆ ಮಿಲ್ಕುಗಳ್ ನೆವವೊಲಾಗದಿನ್ನದಿರಲ್ ನಮಗುಮನೊಂದನಿರ್ದೊಡೇ | ತಂ ಪಡೆಮಾತೊ ಮತ್ತಮಿರವೇಟ್ಟದು ಪನ್ನೆರಡಬ್ಬಮಂ ಮನಂ ಮಲುಗೆ ಬನಂಗಳೊಳ್ ನುಡಿದ ನನ್ನಿಗೆ ಪೇಟೆಮಿದರ್ಕೆ ಕಜ್ಜಮಂ || ೪೯ ವ|| ಎನೆ ಯಮನಂದನನಿಂತೆಂದಂ
ಮ|| ಅಪವಾದಂ ಪೆತೊಂದುಮಿಲ್ಲ ನಮಗಿನ್ನು ಪೊಕ್ಕಿರಲಿಂಬು ಮ ತೃಪುರಂ ಶತ್ರುಗೆ ಶತ್ರು ಮತೃನದಂದಜ್ಞಾತವಾಸಕ್ಕೆ ಚಿಂ | ತಿಪೊಡಿನ್ನನ್ನವು ತಾಣವಿಲ್ಲದನುಂತಾರ್ಗಫೊಡಂ ಮಿಕ್ಕ ರೂ ಪ ಪರಾವರ್ತನದಿಂ ವಿರಾಟಪುರಮಂ ಪೊಕ್ಕಿರ್ದದಂ ನೀಗಮ್ || 980 ಪಡಿಸಿದನು. ಸಂತೋಷಗೊಂಡ ದೈವವು ಹೀಗೆ ಹೇಳಿತು. ೪೮. ಕನಕನ ಯಜ್ಞದಿಂದ ಹುಟ್ಟಿದ ಕೀರ್ತಿಗೆಯೆಂಬ ದೇವತೆಯಿಂದ ನಿನಗಾಗಬಹುದಾದ ಅಪಾಯವನ್ನು ತಿಳಿದು ಅದನ್ನು ತಪ್ಪಿಸಬೇಕೆಂದು ಹೀಗೆ ಮಾಡಿದೆ. ಮದಗಜದ ಆಕಾರವನ್ನು ತೋರಿಸಿ ನಿಮ್ಮನ್ನು ಆಶ್ರಮದಿಂದ ಆಗಲಿಸಿ (ಬೇರೆ ಮಾಡಿ) ಈ ಉಪಾಯದಿಂದ ಕೀರ್ತಿಗೆಯೆಂಬ ಆ ದೇವತೆಗೆ ಪ್ರತೀಕಾರಮಾಡಿ ನಿನ್ನ ತಮ್ಮಂದಿರನ್ನು ರಕ್ಷಿಸಿದ ನಾನು ಯಮ. ನೀನು ನನ್ನ ಮಗನಾಗಿದ್ದೀಯಪ್ಪ. ಇದಕ್ಕಿಂತ ನಿನಗೆ ಬೇರೆಯಾದ ಅಭಿವೃದ್ಧಿ ಏನಿದೆ. ವ|| ಎಂಬುದಾಗಿ ಹೇಳಿ ಮರೆತು ಮಲಗಿದ್ದವರನ್ನು ಎಬ್ಬಿಸುವ ಹಾಗೆ ನಾಲ್ಕು ಜನರನ್ನೂ ಎಬ್ಬಿಸಿ ತಾನು ತಂದಿದ್ದ ಅರಣಿಯನ್ನು ಕೊಟ್ಟು ಯಮನು ಅದೃಶ್ಯನಾದನು. ಧರ್ಮರಾಜನೂ ತಮ್ಮಂದಿರೊಡನೆ ತನ್ನ ವಾಸಸ್ಥಳಕ್ಕೆ ಬಂದು ಅರಣಿಯನ್ನು ಬ್ರಾಹ್ಮಣರಿಗೆ ಕೊಟ್ಟನು. ಕೆಲವು ದಿನಗಳಿದ್ದು ದೌಮ್ಯನೆಂಬ ಪುರೋಹಿತನೊಡಗೂಡಿ ಅಯ್ದುಜನರೂ ಆಲೋಚಿಸಿದರು. ೪೯. ಕ್ರೂರಿಗಳಾದ ಶತ್ರುಗಳಿಗೆ ಮೃತ್ಯುಪೂರ್ಣವಾಗುವ ಹಾಗೆ ಹನ್ನೆರಡುವರ್ಷಗಳು ತುಂಬಿದುವು. ಇನ್ನು ಒಂದು ವರ್ಷ ನಾವು ಯಾರೂ ತಿಳಿಯದಂತೆ ಇರಬೇಕು. ಅದು ತಪ್ಪಿದರೆ ಆಡಿದ ಸತ್ಯವಾಕ್ಕಿಗೆ ಅನುಗುಣವಾಗಿ ಮನಸ್ಸಿಗೆ ದುಃಖವಾಗುವ ಹಾಗೆ ಇನ್ನೂ ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿರಬೇಕಾಗುತ್ತದೆ. ಇದಕ್ಕೆ ಮಾಡಬೇಕಾದ ಕಾರ್ಯ (ಉಪಾಯ)ವನ್ನು ತಿಳಿಸಿ. ವ|| ಎನ್ನಲು ಧರ್ಮರಾಯನು ಹೀಗೆಂದನು-೫೦ 'ನಮಗೆ ಇದುವರೆಗೆ ಯಾವ ಅಪವಾದವೂ ಇಲ್ಲ; ಸುಖವಾಗಿರುವುದಕ್ಕೆ ಮತ್ಯಪುರವು