________________
೩೮೬ /ಪಂಪಭಾರತಂ
ವll ಅನ್ನೆಗಮಿತ್ತ ಕೃತಾಂತನಂದನಂ ತನ್ನ ನಾಲ್ವರ್ ತಮ್ಮಂದಿರುಂ ಬಾರದೆ ತಡೆದುದರ್ಕೆ ಚಿಂತಾಕ್ರಾಂತನಾಗಿ
ಕಂ
ಪೋದರನೊಡಗೊಂಡು ಬರಲ್
ಪೋದರುಮಾ ಪೋದ ಪೋಗೆ ಪೋದ ತಡೆಯಲ್ 1 ಪೋದವರಲೆಂದು ಮನಃ
ಖೇದಂಬೆರಸೆಯೇನಂದನಬ್ಬಾಕರಮಂ ||
೪೫
ವ|| ಅಂತೆಯೇವಂದು ಬಸಿಡಿಲ್ ಪೊಡೆಯ ಕಡೆದ ಶಾಲತರುಗಳಿ ರ್ಪಂತಿರ್ದ ನಾಲ್ವರ್ ತಮ್ಮಂದಿರುಮಂ ಕಂಡು ಬೆಕ್ಕಸಂಬಟ್ಟು
ಆರಿಂದಮಿವರ್ಗಿದಾಯಂ
ದಾರಯ್ಯಂ ಬಯವಾದೊಡೇನಾಯ್ತಂದಂ | ಭೋರುಹರಜಃಪಟಾವೃತ
ವಾರಿಯನಾ ನೃಪತಿ ಕುಡಿಯಲೊಡರಿಸಿದಾಗಳ್ ||
ಕಂ।।
ಮರುಳಾಗದನ್ನ ನುಡಿಗು
ತರಮಂ ಮುನ್ನಿತ್ತು ಕುಡಿಯ ಕಜ್ಜು ನಿನಗು | ತರಿಸುಗುಮಂತಲ್ಲದಿವಂ
ದಿರಂತೆ ನೀನುಂತ ಮೂರ್ಖನಾಗದಿರರಸಾ ||
೪೬
42
ಮ|| ಎಂಬುದುಮೆನ್ನ ತಮ್ಮಂದಿರ್ಗಿನಿತಂ ಮಾಡಿದ ದಿವ್ಯಮಾ ದಿವ್ಯಮಕ್ಕುಮಂದದು ಬೆಸಗೊಂಡುದರ್ಕೆಲ್ಲಂ ಮಲಮಾತುಗುಡುವುದುಂ ಮೆಚ್ಚಿ ತನ್ನ ಸ್ವರೂಪಮಂ ತೋಟ
ಪ್ರಖ್ಯಾತವಾಗುವ ಹಾಗೆ ದುರ್ಯೋಧನನ ಪುರೋಹಿತನಾದ ಆ ಕನಕಸ್ವಾಮಿಯನ್ನೇ ಕೋಪಿಸಿಕೊಂಡು ಕೀರ್ತಿಗೆ ತಿಂದುಹಾಕಿದಳು. ವ|| ಅಷ್ಟರಲ್ಲಿ ಧರ್ಮರಾಜನು ತನ್ನ ನಾಲ್ಕು ತಮ್ಮಂದಿರೂ ಬರದೆ ಸಾವಕಾಶಮಾಡಿದುದಕ್ಕಾಗಿ ಚಿಂತಾಕ್ರಾಂತನಾಗಿ ೪೫. ಹೋದವರನ್ನು ಒಡಗೊಂಡು ಬರಲು ಹೋದವರೂ ಅವರ ಹಿಂದೆಯೇ ಹೊರಟುಹೋದರು. ಅವರು ತಡೆಯಲು ಹೋದವರಲ್ಲ (ಅವರು ಹಾಗೆ ಸಾವಕಾಶಮಾಡುವವರಲ್ಲ ಎಂಬ ಮನಸ್ಸಿನ ಖೇದದಿಂದ ತಾನೇ ಸರೋವರದ ಸಮೀಪಕ್ಕೆ ಬಂದನು. ವ|| ಹಾಗೆ ಸಮೀಪಿಸಿ ಬರಸಿಡಿಲು ಹೊಡೆಯಲು ಕೆಡೆದ ಸಾಲವೃಕ್ಷಗಳಂತಿದ್ದ ನಾಲ್ವರು ತಮ್ಮಂದಿರನ್ನೂ ನೋಡಿ ಆಶ್ಚರ್ಯಪಟ್ಟನು. ೪೬. ಯಾರಿಂದ ಇವರಿಗಿದಾಯಿತು ಎಂಬುದನ್ನು ಅನಂತರ ವಿಚಾರಿಸುತ್ತೇನೆ. ಆದರೆ ಏನಾಯ್ತು ಎಂದು ಕಮಲದ ಧೂಳೆಂಬ ಬಟ್ಟೆಯಿಂದ ಮುಚ್ಚಿದ ನೀರನ್ನು ಆ ರಾಜನು ಕುಡಿಯಲು ತೊಡಗಿದನು. ೪೭. ಅವಿವೇಕಿ (ಹುಚ್ಚ)ಯಾಗದೆ ನನ್ನ ಮಾತಿಗೆ ಮೊದಲು ಉತ್ತರವನ್ನು ಕೊಟ್ಟು ನೀರು ಕುಡಿದರೆ ನಿನ್ನ ಕೆಲಸ ಜಯಪ್ರದವಾಗುತ್ತದೆ. ಹಾಗಲ್ಲದೆ ಎಲೈ ರಾಜನೇ ಇವರುಗಳ ಹಾಗೆ ನೀನೂ ಸುಮ್ಮನೆ ಮೂರ್ಖನಾಗಬೇಡ' ವ|| ಎನ್ನಲು ನನ್ನ ತಮ್ಮಂದಿರಿಗೆ ಇಷ್ಟು ಮಾಡಿದೆ ದೇವತೆಯಿದೇ ಆಗಿರ ಬಹುದೆಂದು ತಿಳಿದು ಅದು ಹಾಕಿದ ಪ್ರಶ್ನೆಗಳಿಗೆಲ್ಲ ಪ್ರತ್ಯುತ್ತರವನ್ನಿತ್ತು ತೃಪ್ತಿ