________________
೩೮೦ | ಪಂಪಭಾರತಂ
ವ|| ಎಂಬುದುಂ ಭೀಮಸೇನನಿಂತೆಂದಂ
ಮ||
ಬೆಸನಂ ಪೂಣ್ಣು ಕಡಂಗಿ ಪಾಯ್ತು ಕಡಲಂ ಮುಂ ಪೂಣ್ಣರಂ ಕೊಂದು ಪೊ ಕು ಸಮಂತಾಗಡೆ ಲಂಕೆಯಂ ಬನಮನಾಟಂದುರ್ಕಿ ಕಿಟಕ್ಕಿ ಸಂ | ತಸಮಂ ಸೀತೆಗೆ ಮಾಡಿ ಸುಟ್ಟು ಪೊಲಂ ಕಾಳಾನಳಂಗಿತ್ತು ಬೇ ವಸಮಂ ರಾಮನಿನುಯ್ದ ನೀಂಬರೆಗಮೇನಾ ಕೌರವರ್ ಗಂಡರೇ || ಎನಗೆ ದಯೆಗೆಯ್ದುದೊಂದನೆ
ಮೊನೆಯೊಳ್ ವಿಜಯಂಗೆ ವಿಜಯಮಾಗಿರೆ ನೀಮಾ | ತನ ಕೇತನದೊಳ್ ಫಣಿಕೇ ತನಬಲಕುತ್ಪಾತಕೇತುವುದೆ ಸಾಲ್ಕುಂ ||
ಕಂ।।
2.99
&と
ವ|| ಎಂದು ಬೇಡಿಕೊಂಡೊಡದೇವಿರಿದಿತ್ತೆನೆಂದಣುವನದೃಶ್ಯನಾದನಾಗಳ್ ಭೀಮಸೇನ ಬೀಡಿಂಗೆ ಎಂದು ಧರ್ಮಪುತ್ರಂಗಾ ಮಾತೆಲ್ಲಮಂ ಪೇಟ್ಟು ವಿಕ್ರಮಾರ್ಜುನನ ಬರವನೆ ಪಾರುತ್ತಿರ್ಪನ್ನೆಗಮಿತ್ತ ವಿಬುಧವನಜವನಕಳಹಂಸನುಂ ಪಲವುಂ ದಿವಸಮಗಲ್ಲಿರ್ದ ತನ್ನೊಡವುಟ್ಟದರಂ ನೆನೆದು ಪೋಪೆನೆಂದಿಂದ್ರನಂ ಬೀಳ್ಕೊಂಡು ತನಗೆ ದೇವೇಂದ್ರನಿತ್ತ ಐಂದ್ರವೆಂಬ ದಿವ್ಯಾಸ್ತ್ರಮುಮಂ ನೈಷ್ಠಿಕಮೆಂಬ ಮುಷ್ಟಿಯುಮಂ ಕೆಯೊಂಡು ದೇವಯರ ಮನಮನಿಚ್ಚುಳಿಗೊಂಡಿಂದ್ರಂ ತನ್ನ ಪುಷ್ಪಕಮನೇಟಿಸಿ ಮಾತಳಿಯಂ ಸಾರಥಿಯಾಗಲ್ವೇಟ್ಟು
ಸುರಿದು ನಿನಗೆ ರಾಜ್ಯವನ್ನು ದೊರಕಿಸುತ್ತೇನೆ ಎಂದನು. ವ! ಅದಕ್ಕೆ ಭೀಮಸೇನನು ಹೀಗೆ ಹೇಳಿದನು. ೩೫. ಅಣ್ಣಾ: ಕಾರ್ಯ ಪ್ರತಿಜ್ಞೆಮಾಡಿ ಉತ್ಸಾಹಗೊಂಡು ಕಡಲನ್ನು ದಾಟಿದೆ ಪ್ರತಿಜ್ಞೆಮಾಡಿದ್ದವರನ್ನು ಕೊಂದೆ, ಆಗಲೇ ಲಂಕಾಪ್ರವೇಶಮಾಡಿದೆ, ಅಶೋಕವನ್ನಾಕ್ರಮಿಸಿ ಉತ್ಸಾಹದಿಂದ ಉಬ್ಬಿ (ಅದನ್ನು) ನಾಶಪಡಿಸಿದೆ. ಸೀತಾದೇವಿಗೆ ಸಂತೋಷವನ್ನುಂಟುಮಾಡಿದೆ. (ಲಂಕಾ) ಪಟ್ಟಣವನ್ನು ಸುಟ್ಟು ಹಾಕಿದೆ (ಕಾಲಾಗ್ನಿಗೆ ಕೊಟ್ಟು ರಾಮನ ದುಃಖವನ್ನು ಪರಿಹಾರಮಾಡಿದೆ. ನಿನ್ನವರೆಗೂ (ನಿನ್ನನ್ನೂ ಪ್ರತಿಭಟಿಸುವಷ್ಟು ಆ ಕೌರವರು ಶೂರರೇ ಏನು ? ೩೬. 'ನನಗೆ ದಯಮಾಡಿ ಒಂದನ್ನು ಕರುಣಿಸಬೇಕು; ಯುದ್ಧದಲ್ಲಿ ಅರ್ಜುನನಿಗೆ ವಿಜಯವಾಗುವ ಹಾಗೆ ನೀವು ಆತನ ಧ್ವಜದಲ್ಲಿದ್ದು ದುರ್ಯೋಧನನ ಸೈನ್ಯಕ್ಕೆ ಪ್ರತಿಶಕುನವನ್ನೂ ಸೂಚಿಸುವ ಕೇತುಗ್ರಹವಾಗಿರುವುದೇ ಸಾಕು? ಎಂದು ಬೇಡಿದನು. ವ| 'ಅದೇನು ದೊಡ್ಡದು ಆಗಬಹುದು' ಎಂದು ಹೇಳಿ ಹನುಮಂತನು ಅದೃಶ್ಯನಾದನು. ಭೀಮಸೇನನು ಬೀಡಿಗೆ ಬಂದು ಧರ್ಮರಾಜನಿಗೆ ಆ ಸಮಾಚಾರವೆಲ್ಲವನ್ನೂ ತಿಳಿಸಿದನು. ಎಲ್ಲರೂ ವಿಕ್ರಮಾರ್ಜುನನ ಬರವನ್ನೇ ಇದಿರುನೋಡುತ್ತಿದ್ದರು. ಈಕಡೆ ವಿದ್ವಾಂಸರೆಂಬ ಕಮಲವನಕ್ಕೆ ಶ್ರೇಷ್ಠವಾದ ಹಂಸದಂತಿರುವ ಅರ್ಜುನನೂ ಅನೇಕಕಾಲ ಅಗಲಿದ್ದ ತನ್ನ ಸಹೋದರರನ್ನು ಜ್ಞಾಪಿಸಿಕೊಂಡು ಹಿಂದಿರುಗಲು ಮನಸ್ಸುಮಾಡಿ ಇಂದ್ರನನ್ನು ಬೀಳ್ಕೊಟ್ಟು ತನಗೆ ದೇವೇಂದ್ರನು ಕೊಟ್ಟ ಐಂದ್ರವೆಂಬ ದಿವ್ಯಾಸ್ತ್ರವನ್ನೂ ನೈಷ್ಠಿಕವೆಂಬ ಮುಷ್ಟಿಯನ್ನೂ (ಮಂತ್ರವಿಶೇಷ) ಅಂಗೀಕಾರಮಾಡಿ ಇಂದ್ರನು ತನ್ನನ್ನು ಅವನ ಪುಷ್ಪಕವಿಮಾನವನ್ನು ಹತ್ತಿಸಿ ಮಾತಲಿಯನ್ನು ಸಾರಥಿಯಾಗಿರ ಹೇಳಿ ಕಳುಹಿಸಲು