________________
ಸಪ್ತಮಾಶ್ವಾಸಂ | ೩೬೩ ಚಂ|| ಪದ ಕೋರಲಿಂಪನಪ್ಪುಕೆಯ ಕೊಂಕು ನಯಂ ಗಮಕಂಗಳಿಂ ಪೊದ
ರ್ಕೊದಳೆಂದಿಕ್ಕಿದಂತೆ ಸುತಿಯೊಳ್ ಸಮವಾಗಿರೆ ಜಾಣನಾಂತು ಮೇ | ಚಿದ ತಂದಾಸವಟ್ಟಲಸದೆತ್ತಿದವೋಲ್ ದೊರೆವತ್ತು ದೂಳಿದಾ ಆದ ದನಿ ಮುಟ್ಟೆ ಮೇನಕೆ ಸರಸ್ವತಿ ಬಾಯ್ದೆರೆದಂತೆ ಪಾಡಿದ | ೮೮ ನಡು ನಡುಗಿ ಪುರ್ವು ಪೊಡರಿ ಕುರುಳ್ ಮಿಳಿರಕ್ಕೆ ಬಾಯ್ ಬೆಡಂ ಗಿಡಿದೆಳಸಲ್ ತರಳು ತುಡುಕಿ ತಗುಳುದು ಕೆಂದಕೆ ಕ | ನೃಡಿಪಳೊ ಪಾಡಿದೀ ನೆವದಿನೆಂಬಿನೆಗಂ ದನಿಯಿಂಪು ಬೀಣೆಯಂ ಮಿಡಿದವೊಲಾಗೆ ಗಾನದೊಳೊಡಂಬಡೆ ಮೇನಕೆ ಮುಂದೆ ಮಾಡಿದಳ್ || ೮೯ ಒದವಿದ ಕತ್ತ ಕಂಕಣದ ಪುರ್ವಿನ ಜರ್ವು ಲಯಕ್ಕೆ ಲಕ್ಕ ಲೆ ಕ್ರದ ಗತಿ ನಾಟಕಾಭಿನಯಮಾಯ್ತನೆ ಗೇಯದೊಳೀಕೆ ಸೊರ್ಕನಿ || ಕಿದಳೆನೆ ಕಳೆ ಚಕ್ಕಣಮೆನಿಪುದು ಸಾಕೆನಿಸಿ ಸಾಲ್ಯ ಸ. ಗದ ಪೊಸ ದೇಸಿಯೋಳಿಗಳನೊರ್ವಳೊಲ್ಲು ನೆಟ್ಟು ಪಾಡಿದ || ೯೦
ದೇಶೀಯನೃತ್ಯಕ್ಕಿಂತಲೂ ಉತ್ತಮವಾದ ನೃತ್ಯವನ್ನಾಡಿದಳು. ೮೮. ಹದವಾದ ಶಾರೀರವು ಇಂಪಿನಿಂದ ಕೂಡಿಕೊಂಡಿರಲು ಕೊಂಕು ನಯ ಗಮಕಗಳಿಂದ ಸ್ಪುರಣೆಗೊಂಡ ಮಧುರವಾದ ಮಾತು ತಂತಿಎಳೆದ ಹಾಗೆ ಶ್ರುತಿಯಲ್ಲಿ ಸೇರಿಕೊಂಡಿರಲು ಜಾಣತನದಿಂದ ಕೂಡಿ ತಾನೆ ಮೆಚ್ಚಿ ಆಸೆಗೊಂಡು ರಾಗವನ್ನು ಎತ್ತಿಕೊಂಡು ಹಾಗೆ ಸ್ವಲ್ಪವೂ ಆಯಾಸ ಪಡದೆ ಮಧ್ಯಮಸ್ವರದಿಂದ ಹೃದಯಸ್ಪರ್ಶಿಯಾಗಿರಲು ಸರಸ್ವತಿಯೇ ಬಾಯಿತೆರೆದ ಹಾಗೆ ಮೇನಕೆಯು ಹಾಡಿದಳು. ೮೯. ಸೊಂಟವು ನಡುಗುತ್ತಿರಲು ಹುಬ್ಬುಗಳು ಅದುರುತ್ತಿರಲು ಮುಂಗುರುಳು ಅಲುಗಾಡುತ್ತಿರಲು ಬಾಯಿಸೌಂದರ್ಯದಿಂದ ಕೂಡಿ ತವಕ ಪಟ್ಟು ಹಿಡಿದುಕೊಳ್ಳುವುದಕ್ಕೆ ಓಡಿಬಂದಿತು. ಹಾಡಿದ ಈ ನೆಪದಿಂದ ಇವಳು ರತಿಪ್ರೇಮವನ್ನು ಪ್ರತಿಬಿಂಬಿಸುತ್ತಿದ್ದಾಳೆಯೋ ಎನ್ನುವ ಹಾಗೆ ಧ್ವನಿಯ ಮಾಧುರ್ಯವು ವೀಣೆಯನ್ನು ಮೀಟಿದ ಹಾಗೆ ಹೊಂದಿಕೊಂಡಿರಲು ಮೇನಕೆಯು ಮುಂದೆ ಬಂದು ಹಾಡಿದಳು. ೯೦. ಉಂಟಾದ ಬಳೆಗಳ ಚಲನೆಯೂ ಹುಬ್ಬಿನ ಅಲುಗಾಟವೂ ತಾಳದ ಲಯಕ್ಕನುಗುಣವಾಗಿ ಲಕ್ಷ್ಮಸಂಖ್ಯೆಯ ಗತಿಯನ್ನುಳ್ಳ ನಾಟಕಾಭಿನಯವಾಯಿತೆನ್ನುವ ಹಾಗೆ ಹಾಡುಗಾರಿಕೆಯಲ್ಲಿ ಈಕೆ ಸೊಕ್ಕನ್ನುಂಟುಮಾಡಿದಳು (ಕಿಣ್ವವನ್ನಿಕ್ಕಿದಳು - ಮದ್ಯಪಾನ ಮಾಡುವುದರಿಂದುಂಟಾಗುವ ಮೈಮರೆಯುವಿಕೆ). ಇವಳ ಗೀತವು ಮದ್ಯಕ್ಕೆ ಚಾಕಣವನ್ನು ಬೆರಸಿದ ಹಾಗಿದೆ. ಹಾಗೆನಿಸಿಕೊಳ್ಳಲೂ ಸಾಕು ಎನ್ನಿಸಿಕೊಳ್ಳುವ ಸ್ವರ್ಗದ ಹೊಸದೇಸಿರಾಗಗಳ ಸಮೂಹವನ್ನು ಒಬ್ಬಳು ಅಪ್ಪರ ಪ್ರೀತಿಯಿಂದ ಸ್ಥಿರವಾಗಿ
24