________________
೩೫೬ | ಪಂಪಭಾರತ
ಅಳಿ ಬಿರಿದಿರ್ದ ಜಾದಿಯೊಳ ಪಲೊರೆಯುತ್ತಿರೆ ಹಂಸ ಪೂತ ಪೂ ಗೋಳದೊಳೆ ರಾಗಿಸುತ್ತಿರೆ ಶುಕಾವಳಿ ಬಂಧುರ ಗಂಧಶಾಳಿ ಸಂ | ಕುಳದೊಳೆ ಪಾಯು ವಾಯು ನಲಿಯುತ್ತಿರೆ ಸಾರೆ ಚಕೋರಮಿಂದುಮಂ
ಡಳ ಗಳಿತಾಮೃತಾಸವಮನುಂಡುಸಿರುತ್ತಿರೆ ಚೆಲ್ಲು ಶಾರದಂ || ೭೦ | ಮ|| ಪುಳಿಯೊಳ್ ಕರ್ಚಿದ ಬಾಳ ಬಣ್ಣಮನೆ ಪೋಲ್ಯಾಕಾಶಮಾಕಾಶಮಂ
ಡಳಮಂ ಪರ್ವಿದ ಬೆಳುಗಿಲ್ ಮುಗಿಲ ಬೆಳ್ಕೊಳೊಕ್ಕು ತಳ್ಕೊಮ್ಮೆ ಬ | ಧ್ವಳ ನೀಳಿರ್ದ ದಿಶಾಳಿಶಾಳಿವನ ಗಂಧಾಂಧ ದ್ವಿರೇಖಾಳಿ ಕ ಸ್ಫೂಳಿಸಿತ್ತೊರ್ಮೆಯ ಬಂದುದಂದು ಶರದಂ ಲೋಕಕ್ಕೆ ಕಣ್ ಬರ್ಪಿನಂ |೭೧
ವ|| ಆಗಳ್ ವಿಜಯಂ ತನ್ನ ವಿಜಯಶ್ರೀಯ ಬರವಿಂಗಿದಿರ್ವಂದಂತ ಬಂದ ಶರತ್ಕಾಲಶ್ರೀಯನುತ್ಕಂಠಿತಹೃದಯನಾಗಿ ಮೆಚ್ಚಿ ನೋಡುತ್ತುಂ ಬರ್ಪನ್ನೆಗಂ ಮುಂದೆ ಶಾರದ ನೀರದಂಗಳಿಲ್ಲಮೊಂದೆಡೆಗೆ ತರಳೊಟ್ಟಿ ಚಿಟ್ಟಾದಂತಿರ್ದ ನೀಹಾರಗಿರಿಯಂ ಕಂಡಿದಾವುದೆಂದು ಬೆಸಗೊಳೆ ಗುಹಕನಿಂತೆಂದಂಮll : ವಿದಳಕ್ಕುಂದ ಶಶಾಂಕ ಶಂಖಧವಳಂ ಗ೦ಧೇಭ ದಾನಾಂಬು ಪೂ
ರ್ಣ ದರೀ ಸುಂದರ ಕಂದರಂ ಮೃಗಪತಿ ಪ್ರಧಾನ ಗರ್ಜದ್ಯುಹಂ | ಮದಿರೋನು ನಿಳಿಂದ ಕಿಂಪುರುಷ ಕಾಂತಾರಬ್ಧ ಸಂಗೀತವೂ ಓದುದಲೇ ಸುರ ಸಿದ್ಧ ದಂಪತಿ ರತಿ ಶ್ರೀ ರಮ್ಮ ಹೈಮಾಚಳಂ || ೭೨
ವಾಸನೆಯು ಹೆಚ್ಚಿತು. ನವಿಲಿನ ವೈಭವವು ನಿಂತಿತು. ಹಂಸದ ವೈಭವವು ಹೊಸದಾಗಿ ಬಂದಿತು. ಮೋಡಗಳ ಕಪ್ಪು ಸಂಪೂರ್ಣವಾಗಿ ಹಿಂಜರಿಯಿತು. ಚಂದ್ರಮಂಡಲದ ಕಪ್ಪುಮಚ್ಚೆಯು ಪ್ರಕಾಶಮಾನವಾಯಿತು. ೭೦. ದುಂಬಿಗಳು ಅರಳಿದ ಜಾಜಿಯಲ್ಲಿ ಝೇಂಕರಿಸಿದುವು. ಹಂಸಪಕ್ಷಿಯು ಸುಮಭರಿತವಾದ ಪುಷ್ಟಸರೋವರದಲ್ಲಿ ಸಂತೋಷಪಡುತ್ತಿತ್ತು. ಗಿಳಿಗಳ ಸಮೂಹವು ಮನೋಹರವಾದ ಸುಗಂಧದಿಂದ ಕೂಡಿದ ಬತ್ತದ ಸಮೂಹದಲ್ಲಿ ನುಗ್ಗಿ ನುಗ್ಗಿ ನಲಿದುವು. ಪಕ್ಕದಲ್ಲಿಯೇ ಚಕೋರ ಪಕ್ಷಿಯು ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತವೆಂಬ ಮಕರಂದವನ್ನುಂಡು ಶಬ್ದಮಾಡಿತು. ಇವುಗಳಿಂದ ಶರತ್ಕಾಲವು ಸುಂದರವಾಯಿತು. ೭೧. ಹುಳಿನೀರಿನಲ್ಲಿ ತೊಳೆದ ಕತ್ತಿಯ ನೀಲಿಯ ಬಣ್ಣವನ್ನೇ ಹೋಲುವ ಆಕಾಶ, ಆಕಾಶಪ್ರದೇಶವನ್ನು ಹಬ್ಬಿರುವ ಬಿಳಿಯ ಮೋಡ, ಮೋಡಗಳ ಬಿಳುಪು ಒಳಗೆಲ್ಲಾ ವ್ಯಾಪಿಸಿರಲು ವಿಸ್ತಾರವಾಗಿ ಹರಡಿದ್ದ ದಿಕ್ಕುಗಳ ಸಮೂಹ, ಶಾಲಿವನದ (ಬತ್ತದ ಗದ್ದೆಯ) ಸುವಾಸನೆಯಿಂದ ಸೊಕ್ಕಿರುವ ದುಂಬಿಗಳ ಸಮೂಹ ಇವುಗಳಿಂದ ಆಕರ್ಷಕವಾಗಿರುವ ಶರತ್ಕಾಲವು ಲೋಕಕ್ಕೆ ಕಣ್ಣು ಬರುವಂತೆ ಪ್ರಾಪ್ತವಾಯಿತು. ವll ಆಗ ಅರ್ಜುನನು ತನ್ನ ವಿಜಯಲಕ್ಷ್ಮಿಯ ಬರುವಿಕೆಯನ್ನು ಸ್ವಾಗತಮಾಡುವುದಕ್ಕೆ ಇದಿರಾಗಿ ಬಂದಂತೆ ಬಂದ ಶರತ್ಕಾಲಲಕ್ಷ್ಮಿಯನ್ನು ಸಂತುಷ್ಟ ಹೃದಯದಿಂದ ಮೆಚ್ಚಿ ನೋಡುತ್ತ ಬರುವಷ್ಟರಲ್ಲಿ ಮುಂದೆ ಶರತ್ಕಾಲದ ಮೊಡಗಳೆಲ್ಲ ಒಟ್ಟಾಗಿ ಸೇರಿ ಬೆಟ್ಟವಾದಂತೆ ಇದ್ದ ಹಿಮವತ್ಪರ್ವತವನ್ನು ನೋಡಿ ಇದು ಯಾವುದು ಎಂದು ಪ್ರಶ್ನೆಮಾಡಿದನು. ಗುಹ್ಯಕನು ಹೀಗೆಂದು ಹೇಳಿದನು. ೭೨. ಅರಳುತ್ತಿರುವ ಮೊಲ್ಲೆಯ ಹೂವಿನಂತಿರುವ ಚಂದ್ರನಂತೆಯೂ ಶಂಖದಂತೆಯೂ ಬೆಳ್ಳಗಿರುವುದೂ ಮದ್ದಾನೆಗಳ ಮದೋದಕದಿಂದ