________________
ಕಂii.
ಸಪ್ತಮಾಶ್ವಾಸಂ / ೩೪೯ ಕಂII ಆವಡವಿಗಳೊಳ್ ಪಣ್ಣಲ
ಮಾವಗಮೊಳವಲ್ಲಿಗಳಿಸಿ ಪರಿಪರಿದು ಕರಂ | ತಾವಡಿಗೊಳ್ಳಿ ಭೀಮನ
ಬೇವಸಮಿದು ನಿನ್ನ ಮನಮನೊನಲಿಸಿತಿಲ್ಲಾ || evolt ಪೋಗಿ ಸುಪರ್ವಪರ್ವತದ ಕಾಂಚನರೇಣುಗಳಂ ಪರಾಕ್ರಮೋ
ದ್ಯೋಗದಿನೆತ್ತಿ ತಂದು ನಿನಗಿತ್ತದಟಂ ಬಡಪಟ್ಟು ಬೆಟ್ಟದೊಳ್ | ಪೋಗಿ ತೋಳಲ್ಕು ನಾರ್ಗಳನುಡಲ್ ತರುತಿರ್ದೆಲೆ ಮಾಡಲಾರ್ತನಿ ಬ್ಲಾಗಳೆ ಕೋಪಮಂ ನಿನಗೆ ಸಂಚಿತಶರ್ಯಧನಂ ಧನಂಜಯಂ || ೪೭ ಕಾಯ ಕೇಶದಿನಡವಿಯ ಕಾಯಂ ಪಣುಮನುದಿರ್ಪಿ ತಿಂದಗಲದೆ ನಿಂ | ದೀ ಯಮಳರಾವ ತೆಳದಿಂ ನೋಯಿಸರಯ್ ನಿನ್ನ ನನ್ನಿಕಾಜನ ಮನಮಂ | ಆ ದುಶ್ಯಾಸನನಿಂದನ . ಗಾದ ಪರಾಭವಮನೇನುಮಂ ಬಗೆಯದೊಡಿಂ | ತಾರಮ ತೂವಾರುಮ - ನಾದರದೇಂ ನಿನ್ನ ಮನಕೆ ಚಿಂತೆಯುಮಿಲ್ಲಾ || ಎಮ್ಮಯ್ಯರ ಬೇವಸಮಂ ನೀಂ ಮನದೊಳ್ ನೆನೆಯೆಯಪೊಡಂ ನಿರವಂ | ನೀಂ ಮರುಳೆ ಬಗೆಯದಂತುಂ ಘುಂಬಡವಿಯೊಳಡಂಗಿ ಚಿಂತಿಸುತಿರ್ಪಾ ||
೫೦ ಸುಮ್ಮನಿರಬೇಕೆಂದಿದ್ದರೂ ಇರುವುದಕ್ಕೆ ಅವಕಾಶಕೊಡದೆ ಆ ಕುರುಕುಲದವರು ಮಾಡಿದ ಅಪರಾಧದ ಸಮೂಹಗಳು ನಿಮ್ಮಲ್ಲಿ ನನ್ನನ್ನು ಮಾತನಾಡುವಂತೆ ಮಾಡುತ್ತಿವೆ. ೪೬. ಯಾವ ಕಾಡುಗಳಲ್ಲಿ ಹಣ್ಣುಹಂಪಲುಗಳು ಯಾವಾಗಲೂ ಇರುತ್ತವೆ, ಅಲ್ಲಿಗೆ ಅದನ್ನು ಹುಡುಕಿಕೊಂಡು ಓಡಿ ಅಲೆಯುತ್ತಿರುವ ಈ ಭೀಮನ ಶ್ರಮವು ನಿನ್ನ ಮನಸ್ಸನ್ನು ಕೆರಳಿಸಿಲ್ಲವೇ? ೪೭. ಮೇರುಪರ್ವತಕ್ಕೆ ಹೋಗಿ ಪೌರುಷಪ್ರದರ್ಶನದಿಂದ ಚಿನ್ನದ ಕಣಗಳನ್ನು ನಿನಗೆ ತಂದುಕೊಟ್ಟು ಕೃಶವಾಗಿ ಬೆಟ್ಟದಲ್ಲಿ ತೊಳಲಿ ಉಡುವುದಕ್ಕೆ ನಾರುಗಳನ್ನು ತರುತ್ತಿರುವ ಶೌರ್ಯವನ್ನೇ ಕೂಡಿಟ್ಟ ಧನವಾಗಿ ಉಳ್ಳ ಪರಾಕ್ರಮಶಾಲಿಯಾದ ಧನಂಜಯನೂ (ಅರ್ಜುನನೂ) ನಿನಗೆ ಕೋಪವನ್ನುಂಟು ಮಾಡಲು ಶಕ್ತನಾಗಲಿಲ್ಲವೆ? ೪೮. ಶರೀರದ ಆಯಾಸದಿಂದ ಕಾಡಿನ ಕಾಯನ್ನೂ ಹಣ್ಣನ್ನೂ ಉದುರಿಸಿ ತಿಂದು ನಿಮ್ಮನ್ನು ಅಗಲದೆ ನಿಂತ ಈ ಯಮಳರೂ ಸತ್ಯಸಂಧನಾದ ನಿನ್ನ ಮನಸ್ಸನ್ನು ನೋಯಿಸುವುದಿಲ್ಲವೇ ? ೪೯. ಆ ದುಶ್ಯಾಸನನಿಂದ ನನಗುಂಟಾದ ಅವಮಾನವೇನನ್ನೂ ಎಣಿಸದಿರುವ ನಿನಗೆ ಈ ತೊಗಲುನಾರುಗಳು ಆದರಕ್ಕೆ ಪಾತ್ರವಾದುವೇ ? ಈ ಅನಾಸಕ್ತಿಯೇತಕ್ಕೆ? ನಿನ್ನ ಮನಸ್ಸಿಗೆ ಚಿಂತೆಯೇ ಇಲ್ಲವೇ ? ೫೦. ನಮ್ಮಝುಜನಗಳ ಕಷ್ಟವನ್ನೂ ನೀನು ಮನಸ್ಸಿನಲ್ಲಿ ನೆನೆಯದಿದ್ದರೂ