________________
೩೩೬ | ಪಂಪಭಾರತ
ವ|| ಎಂದುಲ್ಲು ಧೃತರಾಷ್ಟ್ರನೊಳ್ ನುಡಿಯ ಕುಂಭಸಂಭವಾಶ್ವತ್ಥಾಮ ಕೃಪ ವಿದುರಾದಿಗಳ್ ನೀವೆನಿತು ನುಡಿದೊಡವಾನೆಯ ಕೋಡು ಬಾಗದೆಂಬಂತೆ ದುರ್ಯೋಧನನುದ್ವತ್ತತೆಯುಮಂ ಭೀಮಸೇನನ ಮಹಾಪ್ರತಿಜ್ಞೆಯುಮನಾರ್ಗ೦ ಬಾರಿಸಲಾರದು ಕೆಯ್ದದ ಮನೆವಾ ಬುದ್ಧಿವೇಬಲೆಡೆಯಿಲ್ಲ ತಾಮುಂ ತಾಮುಮಳವರ್ ಬನ್ನಿಮಂದು ನಿಜನಿವಾಸಂಗಕ್ಕೆ ಪೋದರಾಗಳ್ ಭೀಮಸೇನ ಧರ್ಮಪುತ್ರಂಗೆಂದನುಮ್ಮಿಕ್ಕಿದೂಡ ತುಪ್ಪದ ಮೆಳಡಿತೆಂಬಂತೆ ನಮ್ಮ ಕೆಮ್ಮನಿರ್ಪಿರವಿದೇ ಕಾರಣಂ ಬನ್ನಿ ಪೋಪಮೆಂದರಮನೆಯಂ ಪೋಲಮಟ್ಟು ಬರೆ ಧೃತರಾಷ್ಟ್ರ ದುರ್ಯೋಧನನನೇಗೆಯುಮೊಡಂಬಡಿಸಲಾಟದಿರೆಯು ದೌಪದಿ ಪರಸ್ತ್ರೀಯಂ ನಮ್ಮ ಮನೆಯೊಳಿರಿಸುವುದುಚಿತಮಲ್ಲೆಂದು ಕಟಿಪಿದೊಡ ಪಾಂಚಾಳರಾಜತನೂಜೆವರಸು ಬಿನ್ನ ಬಿನ್ನನೆ ಪೋಲಂ ಪೂಜಮಡ ಪುರಜನಂಗಳೆಲ್ಲಂ ನೆರೆದವರ ಪೋಗಿಂಗೆ ಸೈರಿಸಲಾಗಿದೆ ತಮ್ಮೊಳಿಂತಂದರ್ಕಂ ಏದೊರೆಯಂ ಯಮನಂದನ
ನೇದೊರೆಯಂ ಭೀಮಸೇನನೇದೊರೆಯಂ ಕಂ | ಜೋದರನ ಮೈದುನಂ ತಾ ಮೇದೊರೆಯರಮಲ್ಗಳವರ್ಗಮಿಾ ಯಿರವಾಯೇ || ೧೭
ಇಲ್ಲಿಯವರೆಗೂ ಕ್ರಮವಾಗಿ ನಡೆದುಬಂದ ಚಂದ್ರವಂಶವು ಈಗ ಈ ಕೌರವರಿಂದ ಮುಂದೆ ಅಭಿದ್ದಿಯಾಗುತ್ತದೆ ಎಂದು ಯೋಚಿಸುತ್ತಿರಲು ಅದಕ್ಕೆ ವಿರೋಧವಾಗಿ ಕೀಲಿನಲ್ಲಿಯೇ ಬೆಂಕಿಹುಟ್ಟಿ ಶಬ್ದಮಾಡಿ ಉರಿಯುವ ಹಾಗೆ ನಿನ್ನ ಮಗನಿಂದ ನಮ್ಮ ವಂಶವೇ ಸುಟ್ಟು ಹೋಗುತ್ತದೆ. ಇದನ್ನು ನಿವಾರಿಸುವವರು ಯಾರಿದ್ದಾರೆ? ವll ಎಂದು ದುಃಖಿಸಿ ಧೃತರಾಷ್ಟ್ರನಲ್ಲಿ ಹೇಳಲು, ದ್ರೋಣ ಅಶ್ವತ್ಥಾಮ ಕೃಪವಿದುರರೇ ಮೊದಲಾದವರು ನೀವೆಷ್ಟು ಹೇಳಿದರೂ ಆನೆಯ ಕೊಂಬು ಬಗ್ಗುವುದಿಲ್ಲ ಎನ್ನುವ ಹಾಗೆ ದುರ್ಯೋಧನನ (ಕಡೆದು ನಿಲ್ಲುವಿಕೆ) ತುಂಟತನವನ್ನೂ ಭೀಮನ ಮಹಾಪ್ರತಿಜ್ಞೆಯನ್ನೂ ಯಾರಿಗೂ ತಪ್ಪಿಸಲಾಗುವುದಿಲ್ಲ: ಕೈಮೀರಿದ ಮನೆವಾರ್ತೆಗೆ ಬುದ್ದಿಹೇಳಲು ಅವಕಾಶವಿಲ್ಲ; ಅವರವರೇ ತಿಳಿಯಲಿ ಬನ್ನಿ ಎಂದು ತಮ್ಮ ಮನೆಗಳಿಗೆ ಹೋದರು. ಆಗ ಭೀಮಸೇನನು ಧರ್ಮರಾಜನಿಗೆ ಹೇಳಿದನು. ಉಪ್ಪನ್ನು ಬಡಿಸಿದರೆ ತುಪ್ಪಕ್ಕೆ ಮೋಸ ಎನ್ನುವ ಹಾಗೆ ನಾವು ಸುಮ್ಮನಿರುವುದರಿಂದ ಏನು ಪ್ರಯೋಜನ, ಬನ್ನಿ ಹೋಗೋಣ ಎಂದು ಅರಮನೆಯಿಂದ ಹೊರಟರು. ಧೃತರಾಷ್ಟ್ರನು ದುರ್ಯೋಧನನನ್ನು ಏನು ಮಾಡಿಯೂ ಒಪ್ಪಿಸಲಾರದಿದ್ದರೂ ಪರಸ್ತ್ರೀಯಾದ ಬ್ರೌಪದಿಯನ್ನು ನಮ್ಮ ಮನೆಯಲ್ಲಿಟ್ಟುಕೊಳ್ಳುವುದು ಯೋಗ್ಯವಲ್ಲವೆಂದು ಕಳುಹಿಸಿದನು. ಬ್ರೌಪದಿಯೊಡನೆ ಪಾಂಡವರು ದುಃಖದಿಂದ ಪಟ್ಟಣವನ್ನು ಬಿಟ್ಟು ಹೊರಟರು. ಪಟ್ಟಣದ ಜನರೆಲ್ಲರೂ ಒಟ್ಟುಗೂಡಿ ಅವರು ಆ ಸ್ಥಿತಿಯಲ್ಲಿ ಹೋಗುತ್ತಿರುವುದನ್ನು ನೋಡಿ ದುಃಖಪಟ್ಟು ಹೀಗೆಂದರು-೧೭. ಧರ್ಮರಾಜನೆಂತಹವನು - ಭೀಮನೆಂತಹವನು, ಕೃಷ್ಣನ ಮೈದುನನಾದ ಅರ್ಜುನನು ಎಂಥವನು; ಅವಳಿಗಳಾದ