________________
೩೩೨) ಪಂಪಭಾರತಂ ದುಶ್ಯಾಸನನುಮಂ ಪೇಚಿಡವಂದಿರಾಗಳ ಬೀಡಿಂಗವರಿದು ರಜಸ್ವಲೆಯಾಗಿರ್ದಂ ಮುಟ್ಟಲಾಗದೆನೆಯುಮೊತ್ತಂಬದಿಂದೊಳಗಂ ಪೊಕ್ಕು ಪಾಂಚಾಳಿಯಂ ಕಣ್ಣಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಭಾಮಧ್ಯಕ್ಕೆ ತಂದುಮll ಮನದೊಳ್ ನೊಂದಮರಾಪಗಾಸುತ ಕೃಪ ದ್ರೋಣಾದಿಗಳ ಬೇಡವೇ
ಡೆನೆಯುಂ ಮಾಣದೆ ತೋಚಿ ತೋಟ್ಟುವಸಕೆ ಪೋ ಪೋಗು ನೀನೆಂದು ಬ | ಹೈನಿತಾನುಂ ತೆಜದಿಂದಮುಟ್ಟುದುವರಂ ಕೆಯ್ಯಂದು ದುಶ್ಯಾಸನಂ ತನಗಂ ಮೆಲ್ಲನೆ ಮತ್ತು ಸಾರೆ ತೆಗೆದಂ ಧಮ್ಮಿಲ್ಲಮಂ ಕೃಷ್ಣಯಾ ||
ವ|| ಅಂತು ಕೃಷ್ಣಯ ಕೃಷ್ಣಕಬರೀಭಾರಮಂ ಮೇಗಿಲ್ಲದೆ ಪಿಡಿದು ತೆಗೆದು ಕೃಷ್ಕರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬೆಮರುತ್ತುಮಿರ್ದ ದುಶ್ಯಾಸನನುಮಂ ಕಣ್ಣೆತ್ತಿ ಕಿರುನಗೆ ನಗುವ ಕೂರದರ ಮೊಗಮುಮಂ ತಮ್ಮಣ್ಣನ ಬಿನ್ನನಾದ ಮೊಗಮುಮಂ ಕಂಡು ಕಣ್ಣಳಿಂ ನೆತ್ತರ್ ತುಳುಂಕಉ11 ಕೋಪದ ಪರ್ಚಿನೊಳ್ ನಡುಗುವೂರುಯುಗಂ ಕಡುಪಿಂದರ ನಾ
ಸಾಪುಟಮಸ್ಯೆಯಿಂ ಪೊಡರ್ವ ಪುರ್ವು ಪೊದಲ್ಲ ಲಯಾಂತಕ ತ್ರಿಶೂ | ಲೋಪಮ ಭೀಷಣ ಭ್ರುಕುಟ ಮುನ್ನ ರೌದ್ರ ಗದಾಯುಧಂಬರಂ ಪೋಪ ಭುಜಾರ್ಗಳಂ ರಿಪುಗಳ ಗ್ರಹಮಾದುದು ಭೀಮಸೇನನಾ || ೬
ಯೋಚಿಸಿ ಕರ್ಣನ ಸೇವಕನಾದ ಪ್ರಾತಿಕಾಮಿಯೆಂಬುವನಿಗೂ ತನ್ನ ತಮ್ಮನಾದ ದುಶ್ಯಾಸನನಿಗೂ ಆಜ್ಞೆ ಮಾಡಿದನು. ಅವರು ಆಗಲೇ ಅವಳ ಅಂತಃಪುರಕ್ಕೆ ಓಡಿಹೋಗಿ 'ರಸಜ್ವಲೆಯಾಗಿದ್ದೇನೆ ಮುಟ್ಟಕೂಡದು' ಎಂದರೂ ಬಲಾತ್ಕಾರದಿಂದ ಒಳಗೆ ಪ್ರವೇಶಿಸಿ ಬ್ರೌಪದಿಯನ್ನು ಭಯಪಡುವಂತೆ ಗದರಿಸಿ ಅವಳ ತುರುಬನ್ನು ಹಿಡಿದು ಆ ಮನೆಯ ಮಧ್ಯಭಾಗದಿಂದ ದುರ್ಯೊಧನನ ಸಭಾಮಂದಿರದ ಮಧ್ಯಭಾಗಕ್ಕೆ ಸೆಳೆದು ತಂದರು. ೫. ಭೀಷ್ಮ ಕೃಪ ದ್ರೋಣಾದಿಗಳು ಮನಸ್ಸಿನಲ್ಲಿ ದುಃಖಪಟ್ಟು ಬೇಡಬೇಡವೆಂದರೂ ಬಿಡದೆ 'ದಾಸಿ, ನಡೆ, ನೀನು ತೊತ್ತಿನ ಕೆಲಸಮಾಡು ಹೋಗು, ಹೋಗು' ಎಂದು ಎಷ್ಟೋ ರೀತಿಯಲ್ಲಿ ಬಯ್ದು ಉಟ್ಟ ಸೀರೆಯವರೆಗೆ ಕೈಹಾಕಿ ತನಗೆ ಮೃತ್ಯು ಸಮೀಪವಾಗಿರಲು ದುಶ್ಯಾಸನನು ಬ್ರೌಪದಿಯ ತುರುಬನ್ನು ಹಿಡಿದು ಸೆಳೆದನು. ವ|| ಹಾಗೆ ದೌಪದಿಯ ಕಪ್ಪಾದ ಮುಡಿಯ ಗಂಟನ್ನು ನೀಚವಾದ ರೀತಿಯಲ್ಲಿ ಹಿಡಿದು ಸೆಳೆದು ಕಾಳಸರ್ಪವನ್ನು ಹಿಡಿದ ಪೆಚ್ಚನಂತೆ ಸುಮ್ಮನೆ ಬೆವರುತ್ತಿದ್ದ ದುಶ್ಯಾಸನನೂ ಕಣ್ಣನ್ನೆಮಾಡಿ (ಹಾಸ್ಯದಿಂದ) ಹುಸಿನಗೆನಗುವ ಅಹಿತರ ಮುಖವನ್ನೂ ತಮ್ಮಣ್ಣನ ಖಿನ್ನವಾದ ಮುಖವನ್ನೂ ಭೀಮನು ನೋಡಿದನು. ಕಣ್ಣಿನಲ್ಲಿ (ಕೋಪದಿಂದ) ರಕ್ತವು ತುಳುಕಿತು. ೬. ಕೋಪದ ಆಧಿಕ್ಯದಿಂದ ಎರಡು ತೊಡೆಗಳೂ ನಡುಗಿದುವು. ವೇಗದಿಂದ (ಭಯಂಕರವಾಗಿ) ಮೂಗಿನ ಹೊಳ್ಳೆಗಳು ಅರಳಿದುವು. ಪ್ರಳಯಕಾಲದ ಯಮನ ತ್ರಿಶೂಲಕ್ಕೆ ಸಮಾನವೂ ಭಯಂಕರವೂ ಆದ ಹುಬ್ಬು ಗಂಟಿಕ್ಕಿತು. ಮೊದಲೇ ಭಯಂಕರವಾದ ಭೀಮಸೇನನ ಅಗುಳಿಯಂತಿರುವ ತೋಳುಗಳು ಗದೆಯ ಕಡೆ