________________
ಕಂ||
ಸಪ್ತಮಾಶ್ವಾಸಂ
ಶ್ರೀ ರಮಣೀರಮಣಂಗರಿ
ನಾರೀ ವೈಧವ್ಯ ದಿವ್ಯ ದೀಕ್ಷಾ ದಕ್ಷಂ |
ಗಾರಣೆ ಹರಿಗಂಗೀಗಡೆ
ಬಾರಿಸು ನೀಂ ನಿನ್ನ ಮಗನನಂದನರೇಂದ್ರಾ ||
ಕಾದುದು ಸರವೆಂದರ
ನಾದುದು ಕಾಲಾಗ್ನಿಬಲವದರಿನೃಪತಿಗೆ ಕಾ | ಪಾದುದು ನೆಲಕ್ಕೆ ತೋಳ್ವಲ
ಮಾ ದೊರೆತೆನೆ ಮರುಳೆ ಹರಿಗನೊಳ್ ಪಗೆಗೊಳ್ವಾ ||
ವ! ಎಂದೆನಿತಾನುಂ ತದೊಳ ಸಾಜೆಯುಂ ಕೀಡೆಯುಂ ನುಡಿದೊಡೆ ಧೃತರಾಷ್ಟ ಮಗನಲ್ಲಿಗೆ ವಂದು ಜಡಿದು ನುಡಿದುಮೆಗೆಯುಮೊಡಂಬಡಿಸಲಾಗಿದಿರೆ ಯುಧಿಷ್ಠಿರಂ ತಲೆಗವಿ ವನಲ್ಲದೆಯುಮೇವದೊಳ್ ತಲೆಗವಿದು ಸಿಸ್ಟಂ ಕೊಂಡಾಡಿ ನೆತ್ತಮನಾಡಿ
ಕಂ ವ್ಯಾಳ ಗಜಂಗಳನಗ್ಗದ
و
ಸೂಳೆಯರೊಕ್ಕನಲನರ್ಘ ವಸ್ತುಗಳನಿಳಾ |
ಪಾಳಂ ಸೋಲೊಡ ಜೂದಿನ
ಕೇಳಿಯನಾ ಕೇಳಿಯನಿತಳ್ ಮಾಣಿಸಿದ ||
2
ವl ಮಾಣಿಸಿದೊಡೆ ಮಾಣದೆ ರಪಣಮಂ ತೋಡೆಯುಮೊತ್ತೆಯನುಗ್ಗಡಿಸಿಯುಮಾಡಿ ಮನೆ ಪೆತೇನುಮುಪಾಯಮಿಲ್ಲದೆಮ್ಯಾಳ ನೆಲನೊತ್ತೆಯೆಂದೊಡೆ ಬಗೆದು ನೋಡಿ ಗೆಲ್ಲಿಂ
೧. 'ಐಶ್ವರ್ಯಲಕ್ಷ್ಮೀಪತಿಯೂ ಶತ್ರುರಾಜಸ್ತ್ರೀಯರಿಗೆ ವೈಧವ್ಯದೀಕ್ಷೆಯನ್ನು ಕೊಡುವ ಶಕ್ತಿಯುಳ್ಳವನೂ ಆದ ಅರಿಕೇಸರಿಗೆ ಸಮಾನರಾದವರಾರು? ಕುರುಡ ದೊರೆಯೇ ನಿನ್ನ ಮಗನನ್ನು ಈ ಜೂಜಿನ ಕಾರ್ಯದಿಂದ ನಿವಾರಿಸುವವನಾಗು. ೨. ಅರ್ಜುನನ ತೋಳಿನ ಬಲವು ಶರಣಾಗತರನ್ನು ರಕ್ಷಿಸಿತು. ಬಲಿಷ್ಠರಾದ ಶತ್ರುರಾಜರಿಗೆ ಕಾಲಾಗ್ನಿಯಾಯಿತು. ಭೂಮಿಗೆ ರಕ್ಷಣೆಯಾಯಿತು. ಅವನ ಬಾಹುಬಲವು ಇಂತಹುದು ಎಂದು ತಿಳಿದೂ ಹುಚ್ಚ! ಅರ್ಜುನನಲ್ಲಿ ಹಗೆಗೊಳ್ಳುತ್ತೀಯಾ? ವ|| ಎಂದು ಎಷ್ಟೋ ರೀತಿಯಲ್ಲಿ ಸಾರಿ ಸ್ಪಷ್ಟವಾಗಿ ಕೋಪದಿಂದಲೂ ಬಲಾತ್ಕಾರದಿಂದಲೂ ಭೀಷ್ಮರು ಹೇಳಿದರು. ಧೃತರಾಷ್ಟ್ರನು ಮಗನ ಹತ್ತಿರಕ್ಕೆ ಬಂದು ಗದರಿಸಿ ಬಯ್ದು ಹೇಳಿ ಏನೂ ಮಾಡಿದರೂ ಒಪ್ಪಿಸಲಾಗಲಿಲ್ಲ. ಧರ್ಮರಾಜನು (ಸಾಮಾನ್ಯವಾಗಿ) ತಲೆತಗ್ಗಿಸುವವನಲ್ಲವಾದರೂ ತನಗುಂಟಾದ ಸೋಲಿನಲ್ಲಿ ತಲೆತಗ್ಗಿಸಿ ನಾಚಿಕೆಯಿಂದ ಪಗಡೆಯಾಟವಾಡಿ-೩. ಭಯಂಕರವಾದ (ತುಂಟಾದ) ಆನೆಗಳನ್ನೂ ಶ್ರೇಷ್ಠರಾದ ದಾಸಿಯರನ್ನೂ ಕುಟುಂಬಗಳನ್ನೂ ಬೆಲೆ ಯಿಲ್ಲದ ವಸ್ತುಗಳನ್ನೂ ಸೋತನು. ಜೂಜಿನಾಟವನ್ನು ಆ ಆಟಕ್ಕೆ ನಿಲ್ಲಿಸಿದರು. ವ ಹಾಗೆ ನಿಲ್ಲಿಸಿದರೂ ದುರ್ಯೋಧನನು ನಿಲ್ಲಿಸಲು ಇಷ್ಟಪಡದೆ ಪದಾರ್ಥಗಳನ್ನು