________________
೩೨೨) ಪಂಪಭಾರತಂ
ಮನಿಯಲೆನಗಾಗ ಗಾಂಗೇ ಯನಿರ್ದನಿರ್ದ೦ ಘಟೋದ್ಭವಂ ನೆಗಟ್ಟಿ ಹೃಥಾ | ತನಯರುಮಿರ್ದರ್ ದುರ್ಯೋ ಧನನಿರ್ದಂ ಕೇಳೆ ಪೇಳ್ವರಾ ಬಲ್ಲವರುಂ || ಎನೆಯನೆ ಬಾಯ್ದಂ ಬಂದನಿ ತನಿತುಮನಮರಾರಿ ಬಯ್ಕೆ ಸೈರಿಸಿ ನೂಜಿತಂ | ಬನಿತುವರಂ ಮನ್ನಿಸಿ ನಸು ಕಿನಿಸದ ಮಿಗೆ ಕಿನಿಸಿ ದಿತಿಜಕುಳದವದಹನಂ || ಮುಳಿದು ತನಗರ್ಥಮದ ತಳಿಗೆಯೊಳಿ ತಿಳಿದ ತಂದೆ ತಲೆ ಪದಾಗಳ್ || ಕಳಕಳಿಸಿ ನಗುತುಮಿರ್ದುದು |
ತಳಿಗೆಯ ಮೇಲಸುರನದಟದೇನಚರಿಯೋ || ವll ಅಂತು ಜವನರ್ಘಮದಂತಿರ್ದ ಶಿಶುಪಾಲನ ಶಿರೋಂಬುಜಮಂ ಕಡಬಲ್ಲಾತನ ನಂಟರಪ್ಪಶ್ಯಗ್ರೀವ ವಿದ್ಯುನ್ಮಾಲಿ ನೀಲಾದಿಗಳಪ್ಪ ಪ್ರಭುಗಳೆನಿಬರಾನುಂ ಮುರಾಂತಕನಂ ಬಂದು ತಾಗಿದೊಡಕಂ| ತಿರಿಪಿ ಕರಚಕ್ರಮಂ ದನು
ಜರ ತಲೆಗಳನಸುರವೈರಿ ಮುಳಿದಿಡ ಪದಂ | ಬರತಳಮನೆ ಮೇಘದ ಪೊರಪೊರೆಯೊಳ್ ತೊಡರ್ದು ನೆಲಕೆ ಬೀಬಿ ತಲೆಗಳ್ | ೬೫ -
ಮರೆಯುತ್ತೇನೆಯೇ, ಬಯ್ಕೆ -ನೂರರವರೆಗೆ ಬಯ್ಯಲು ಅವಕಾಶ ಕೊಡುತ್ತೇನೆ. ೬೨. ನನ್ನ ಮೇಲೆ ಕೋಪಿಸಬೇಡ; ಆಗ ಭೀಷ್ಮನಿದ್ದನು - ದ್ರೋಣನೂ ಇದ್ದನು. ಪ್ರಸಿದ್ಧರಾದ ಪಾಂಡವರೂ ಇದ್ದರು, ದುರ್ಯೊಧನನೂ ಇದ್ದನು. ಕೇಳಿದರೆ ಆ ಬಲ್ಲವರೆಲ್ಲ ಹೇಳುತ್ತಾರೆ. ೬೩. ಎಂದು ಹೇಳುತ್ತಿರಲು ರಾಕ್ಷಸನು ಬಾಯಿಗೆ ಬಂದಷ್ಟನ್ನು ಬಯ್ಯಲು ಸಹಿಸಿಕೊಂಡು ರಾಕ್ಷಸಕುಲಕ್ಕೆ ಕಾಡುಗಿಚ್ಚಿನ ಹಾಗಿರುವ ಕೃಷ್ಣನು ನೂರಾಗುವವರೆಗೂ ಸ್ವಲ್ಪವೂ ಕೋಪಿಸಿಕೊಳ್ಳದೆ ಕ್ಷಮಿಸಿ ಅದೂ ಮೀರಲು ೬೪. ಕೋಪಿಸಿಕೊಂಡು ತನಗೆ ಅರ್ಥ್ಯವೆತ್ತಿದ ತಟ್ಟೆಯಿಂದಲೇ ಹೊಡೆಯಲು ಗರಗರನೆ ಕತ್ತರಿಸಿದ ಹಾಗೆ ಆ ತಲೆಯು ತುಂಡರಿಸಿ ತಟ್ಟೆಯ ಮೇಲೆ ಕಳಕಳಿಸಿ ನಗುತ್ತಿತ್ತು. ರಾಕ್ಷಸನ ಪರಾಕ್ರಮವು ಎಷ್ಟು ಆಶ್ಚರ್ಯಕರವಾದುದು ? ವ|ಹಾಗೆ ಯಮನಿಗೆ ಅರ್ಫ್ಘದಂತೆ ತಟ್ಟೆಯಲ್ಲಿದ್ದ ರಾಕ್ಷಸನ ಕಮಲದಂತಿರುವ ತಲೆಯನ್ನು ಆತನ ನಂಟರಾದ ಅಶ್ವಗ್ರೀವ ವಿದ್ಯುನ್ಮಾಲಿಗಳನೇಕರು ನೋಡಿ ದುಃಖಿಸಿ ಒಟ್ಟಾಗಿ ಸೇರಿ ಬಂದು ಕೃಷ್ಣನನ್ನು ತಾಗಿದರು. ೬೫. ಅಸುರವೈರಿಯಾದ ಕೃಷ್ಣನು ಕಯ್ಯಲ್ಲಿದ್ದ ಚಕ್ರವನ್ನು ತಿರುಗಿಸಿ ರಾಕ್ಷಸರ ತಲೆಗೆ ಕೋಪದಿಂದ ಹೊಡೆಯಲು ಆ ತಲೆಗಳು ಹರಿದುಹೋಗಿ ಆಕಾಶಪ್ರದೇಶದಲ್ಲಿ ಮೋಡದ ಪದರದ ಸಮೂಹದಲ್ಲಿ ಸೇರಿಕೊಂಡು ನೆಲಕ್ಕೆ ಬೀಳದಿದ್ದವು.