________________
೨೯೪ / ಪಂಪಭಾರತಂ
ಚಂ
ಕವಿದುವು ಸಪ್ತಸಾಗರ ಜಲಂಗಳ ಲೋಕಮನೀಗಳೆಂಬಿನಂ ಕವಿದು ಮುಗಿಲ್ಗಳಲ್ಲಿ ಕರೆಯುತ್ತಿರ ಪಾವಕನುರ್ಕುಗೆಟ್ಟಿದಂ | ತುವೊ ತೊದಳಾಯ್ತು ದಾನಮನೆ ಮಾರುತಬಾಣದ ಮೇಘಮಾಲಿಕಾ ನಿವಹಮನೆಚ್ಚು ಕೂಡ ಶರಪಂಜರಮಂ ಪಡೆದಂ ಗುಣಾರ್ಣವಂ || ೯೬
ವ|| ಅಂತು ಪುಂಖಾನುಪುಂಖವಾಗಿ ಪಾಯ್ಕ ಶರಸಂಧಾನದೊಳೆಡೆವಳೆಯದಂತೆರಡುಂ ಕೆಯೊಳ್ ತೋಡುಂ ಬೀಡುಂ ಕಾಣಲಾಗದಂತಿಸೆ ತುಲುಗಿ ಕವಿವಂಬಿನ ಮಯ ಮಯಂ ಮಾಣಿಸೆ ದಿವ್ಯಾಸ್ತ್ರಂಗಳಿಂ ನೂಜು ಯೋಜನದಳವಿಯ ಖಾಂಡವವನಮೆಲ್ಲಮಂ ತಟ್ಟಿ ಮಡತಿ ಮಶಕ ಮಾತ್ರಮಪ್ಲೊಡಂ ಮಿಸುಕಲ್ ಛಿದ್ರಮಿಲ್ಲದಂತಾಗ ಶರಪಂಜರದೊಳ್ ಮುಚ್ಚಿ ಮುಸುಕಿ ದಾಗಳಭಿನವ ಜೀಮೂತವಾಹನನ ದಿವ್ಯಾಸ್ತ್ರದ ಕೋಳಿರಲಾಗಿದೆ ಜೀಮೂತಂಗಳೆಲ್ಲಂ ತೆರಳೋಡಿ ದೊಡಗ್ನಿದೇವನಾವಗೆಯ ಕಿರ್ಚಿನಂತೊಳಗೊಳಗಳುರ್ದು
ಕಂ।। ವನ ಖಗ ವನ ಮೃಗ ವನ ತರು
ವನಚರ ವನ ವನಜ ನಿವಹಮುಳ್ಳನಿತುಂ ಸೀ | ರನಿತುಮಣಮುಟ್ಟಿದುದಿಲ್ಲೆಂ
ಬಿನಮುಂಡಂ ದಹನನಳುರ್ದು ಖಾಂಡವವನಮಂ ||
ವ|| ಅಂತಾ ವನಗಹನಮೆಲ್ಲಂ ದಹನಮಯವಾದ ಪ್ರಸ್ತಾವದೊಳ್ ವಿಸ್ಮಯವಾಗ ಮಯನೆಂಬ ದಾನವವಿಶ್ವಕರ್ಮಂ ನೆಗೆದುರಿವುರಿಮಾಲೆಗಳು ಗದೆಯೊಳ್ ಬೀಸುತ್ತುಂ ಪೊಮಡ ಪೊಱಮಡಲೀಯದೆ
62
ಕತ್ತಲಿಸಿ ಕವಿದು-೯೬. ಲೋಕವನ್ನೆಲ್ಲ ಏಳುಸಾಗರಗಳ ನೀರುಗಳೇ ಮುಚ್ಚಿಕೊಂಡವೊ ಎನ್ನುವ ಹಾಗೆ ಮೋಡಗಳು ಮಳೆಯನ್ನು ಸುರಿಸಿದುವು. ಅಗ್ನಿಯು ಶಕ್ತಿಗುಂದಿ ಹೇಗೋ ದಾನವು ಸುಳ್ಳಾಯಿತು ಎನ್ನಲು ಅರ್ಜುನನು ವಾಯವ್ಯಾಸ್ತ್ರದಿಂದ ಮೇಘಮಾಲೆಗಳ ಸಮೂಹವನ್ನು ಹೊಡೆದೋಡಿಸಿ ತಕ್ಷಣವೇ ಒಂದು ಬಾಣದ ಪಂಜರವನ್ನು ನಿರ್ಮಿಸಿದನು. ವ|| ಪುಂಖಾನುಪುಂಖವಾಗಿ ತೋಡುಬೀಡುಗಳು ಕಾಣದಷ್ಟು ವೇಗದಿಂದ ಎರಡುಕೈಗಳಿಂದಲೂ ಏಕಪ್ರಕಾರವಾಗಿ ಪ್ರಯೋಗಮಾಡಿದ ಬಾಣಗಳಿಂದ ಮಳೆಯನ್ನು ಅರ್ಜುನನ್ನು ನಿಲ್ಲಿಸಿದನು. ದಿವ್ಯಾಸ್ತ್ರದಿಂದ ನೂರುಯೋಜನವಿಸ್ತಾರವುಳ್ಳ ಖಾಂಡವವನವೆಲ್ಲವನ್ನೂ ತಟ್ಟಿಯ ಹಾಗೆ ಹೆಣೆದು ಸೊಳ್ಳೆಯಂತಹ ಪ್ರಾಣಿಯೂ ಚಲಿಸಲು ರಂಧ್ರವಿಲ್ಲದ ಹಾಗೆ . ಪಂಜರದಲ್ಲಿ ಮುಚ್ಚಿ ಮುಸುಕಿದನು. ಅಭಿನವ ಜೀಮೂತವಾಹನನಾದ ಆಜು' : ದಿವ್ಯಾಸ್ತ್ರದ ಆಕ್ರಮಣವನ್ನು ಸಹಿಸಲಾರದೆ ಮೋಡಗಳೆಲ್ಲವೂ ಚಲಿಸಿ ಹೋದವು. ಅಗ್ನಿದೇವನು ಕುಂಬಾರರ ಆವಿಗೆಯ ಬೆಂಕಿ ಯಂತೆ ಒಳಗೊಳಗೇ ವ್ಯಾಪಿಸಿ ಸುಟ್ಟನು-೯೭. ಕಾಡಿನಪಕ್ಷಿ, ಮೃಗ, ಮರ, ಪ್ರಾಣಿ, ತಾವರೆಗಳ ಸಮೂಹದಲ್ಲಿ ಒಂದು ಸಣ್ಣ ಸೀರಿನಷ್ಟೂ ಉಳಿಯಲಿಲ್ಲವೆನ್ನುವ ಹಾಗೆ ಅಗ್ನಿಯು ವ್ಯಾಪಿಸಿ ಖಾಂಡವನವನ್ನೆಲ್ಲ ತಿಂದು ಬಿಟ್ಟನು. ವll ಹಾಗೆ ಆ ವನಪ್ರದೇಶವೆಲ್ಲ ಉರಿಗೆ ಅಧೀನವಾದ ಸಂದರ್ಭದಲ್ಲಿ ಆಶ್ಚರ್ಯವಾಗುವ ಹಾಗೆ ಮಯನೆಂಬ ರಾಕ್ಷಸ ಶಿಲ್ಪಿಯು ಮೇಲೆದ್ದು ಹಾರಿ ಚಿಮ್ಮುತ್ತಿದ್ದ ಜ್ವಾಲೆಗಳ ಸಮೂಹಗಳನ್ನು ತನ್ನ ಗದೆಯಿಂದ