________________
- ೮೭
ಪಂಚಮಾಶ್ವಾಸಂ | ೨೯೧ ಕoll ನನೆಕೊನೆಯ ತಳಿರ ಪೂವಿನ
ಬನಮನಿತುಂ ಶಿಖೆಗಳಳುರೆ ಬೆಂಕೆಯ ಪೊಯ್ದು | ರ್ವಿನೋಳೆ ಕೊರಗಿರ್ದ ಲತೆಗಳ ಕೊನೆಗೊನೆಯನೆ ದಹನನಳುರ್ದು ಕೊನೆಗೊನೆಗೊಂಡಂ ||
ವ|| ಆಗಳಾ ಬನಮನಿಂದ್ರನ ಬೆಸದೊಳ್ ಕಾವ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ಧ ವಿದ್ಯಾಧರ ಬಲಮನಿತುಮೊಂದಾಗಿ ವಿಕ್ರಮಾರ್ಜುನನೊಳ್ ತಾಗಕoll ಕೊಂಡಪುದುರಿ ಬನಮನದಂ
ಕಂಡಂತಿರಲಕ್ಕುಮೆಂದು ತಾಗಿದ ನೆಗ | ಇಂಡರ ಗಂಡುವಿನಂ ಕೊಂಡುವು ಗಾಂಡೀವಮುಕ್ತ ಬಾಣಗಣಂಗಳ್ ||
೮೮ | ವll ಅಂತು ಕಾದ ವಿದ್ವಿಷ್ಟವಿದ್ರಾವಣನ ಮೊನೆಯಂಬಿನಂಪೇಟಿಂಗಳ್ಳಿ ಹತವಿಹತ ಕೋಳಾಹಳರಾಗಿ ಒದರಸಿದರಾಗೆಯುಂ ಕಿನ್ನರರಿನಾರ ಮಣಿಯಂ ಪುಗುವಮನೆಯುಂ ಕಿ ಪುರುಷರ್ ಕಾಪುರುಷರಂತ ಬಾಯಂ ಬಡೆಯುಂ ಗಂಧರ್ವರ್ ಗರ್ವಮನುಳೆದೊಂದೂರ್ವರಂ ಮಿಗೆಯೊಡೆಯುಂ ವಿದ್ಯಾಧರರಧರರಾಗೆಯುಂ ಪನ್ನಗರ್ ಪನ್ನತಿಕೆಯಿಂ ಬಂದಾಂತೊಡಕoll ನಾಗರ ಖಂಡಂಗಳನಾ
ನಾಗರ ಖಂಡದೊಳೆ ತೊಡರೆ ನರನಿಸುವುದುಮಾ | ನಾಗರ ಖಂಡಂಗಳುಮಂ ನಾಗರ ಖಂಡಮುಮನಳುರ್ದು ಕೊಂಡಂ ದಹನಂ ||
ಹೀರಿದನು. ೮೭. ಮೊಗ್ಗಿನ, ಟಿಸಿಲಿನ, ಚಿಗುರಿನ, ಹೂವಿನ ಆ ವನವನ್ನೆಲ್ಲ ಬೆಂಕಿಯ ಜ್ವಾಲೆಗಲು ವ್ಯಾಪಿಸಲು ಬೆಂಕಿಯು ಹೊಡೆದ ರಭಸದಲ್ಲಿಯೇ ಬಾಡಿದ ಬಳ್ಳಿಗಳ ಕವಲು ಕವಲುಗಳನ್ನೇ ಅಗ್ನಿಯು ಸುಟ್ಟು ತುತ್ತತುದಿಯನ್ನೂ ಆಕ್ರಮಿಸಿದನು. ವ|| ಆಗ ಅವನನ್ನು ಇಂದ್ರನ ಆಜ್ಞೆಯಂತೆ ರಕ್ಷಿಸುತ್ತಿದ್ದ ಕಿನ್ನರ ಕಿಂಪುರುಷ ಗರುಡ ಗಂಧರ್ವ ಸಿದ್ದ ವಿದ್ಯಾಧರ ಸೈನ್ಯವನ್ನೂ ಒಂದಾಗಿ ವಿಕ್ರಮಾರ್ಜುನನನ್ನು ಬಂದು ತಾಗಿದುವು. ೮೮. ಬೆಂಕಿಯು ವನವನ್ನು ಸುಡುತ್ತಿದೆ. ಅದನ್ನು ನೋಡಿಯೂ ಹೇಗೆ ಸುಮ್ಮನಿರುವುದು ಎಂದು ಪ್ರತಿಭಟಿಸಿದ ಪ್ರಸಿದ್ದವಾದ ಶೂರರ ಪೌರುಷವು ಪಲಾಯನಮಾಡುವ ಹಾಗೆ ಗಾಂಡೀವದಿಂದ ಬಿಡಲ್ಪಟ್ಟ ಬಾಣಸಮೂಹಗಳು ಅವರನ್ನು ಆಹುತಿಗೊಂಡವು. ವll ಹಾಗೆ ಕಾದಲು ವಿದ್ರಾವಣನ ಮೊನಚಾದ ಬಾಣದ ಬಿಲ್ಲಿನ ಯುದ್ದದ ನಾನಾ ವಿಧವಾದ ಹೊಡೆತ ಮರುಹೊಡೆತಗಳ ಕೋಲಾಹಲದಲ್ಲಿ ಸಿದ್ದರು ಸಿದ್ಧತೆಯಿಲ್ಲದವರಾದರು, ಕಿನ್ನರರು ಇನ್ನು ಯಾರ ಮರೆಯನ್ನು ಹೋಗೋಣವೆಂದು ಯೋಚಿಸಿದರು, ಕಿಂಪುರುಷರು ಅಲ್ಲಮನುಷ್ಯರಂತೆ ಹಾಹಾಕಾರಪಟ್ಟರು. ಗಂಧರ್ವರು ತಮ್ಮ ಆತ್ಮಗರ್ವವನ್ನು ಬಿಟ್ಟು ಒಬ್ಬೊಬ್ಬರನ್ನೂ ಮೀರಿಸಿ ಓಡಿದರು. ವಿದ್ಯಾಧರರು ತಿರಸ್ಕೃತರಾದರು. ಪನ್ನಗರು ಪರಾಕ್ರಮದಿಂದ ಬಂದು ಎದುರಿಸಿದರು. ೮೯. ಅಲ್ಲಿ ಬೆಳೆದ ಹಸಿಯ ಶುಂಠಿಯ ಚೂರುಗಳೂ ಆ ಸರ್ಪಗಳ ಚೂರುಗಳಲ್ಲಿಯೇ