________________
೨೪ | ಪಂಪಭಾರತಂ
ಎಂದು ಹೇಳಿದುದನ್ನು ಕೇಳಿ ಭೀಮಸೇನನು ಕೋಪೋದ್ರೇಕವನ್ನು ತಡೆಯಲಾರದೆ ನವಮೇಘನಾದದಿಂದ ಹೀಗೆಂದು ಪ್ರತಿಜ್ಞೆ ಮಾಡುವನು:
ಮುಳಿಸಿಂದು ನುಡಿದೊಂದು ನಿನ್ನ ನುಡಿಸಿ ಆರಾಗದೆಂಬರ್ ಮಹಾ ಪ್ರಳಯೋಲೋಪಮ ಮದ್ಧದಾಹತಿಯಿನ್, ಅತ್ಯುಗ್ರಾಜಿಯೊಳ್ ಮುನ್ನಮೀ || ಖಳ ದುಶ್ಯಾಸನನಂ ಪೊರಳ್ಳಿ ಬಸಿಲಿಂ ಪೋಳಿ ಬಂಬಲ್ಲರು ಛಳಿನ್, ಆನಿ ವಿಳಾಸದಿಂ ಮುಡಿಯಿಪಂ ಪಂಕೇಜಪತೇಕ್ಷಣೇ | ಕುಡಿವೆಂ ದುಶ್ಯಾಸನೋರಸ್ಥಳಮನ್, ಅಗಲೆ ಪೋಅಣ್ಣಾರ್ದು ಪೊ | ಕುಡಿವೆಂ ಪಿಂಗಾಕ್ಷನೂರುದ್ವಯಮನ್, ಉರುಗದಾಘಾತದಿಂ ನುಚ್ಚುನೂರಾ ಗೊಡವೆಂ ತತ್ನರಶಿಪ್ರಕಟಮಕುಟಮಂ ನಂಬು ನಂಬೆನ್ನ ಕಣ್ಣಿಂ ಕಿಡಿಯುಂ ಕೆಂಡಂಗಳು ಸೂಸಿದವುವು, ಅಹಿತರಂ ನೋಡಿ ಪಂಕೇಜವಕ್ಕೆ ||
ಎಂದು ಗರ್ಜಿಸಿ ದಿಕ್ಷಾಲಕರ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿ 'ವಿಳಯಕಾಳಜಳಧರ ನಿನಾದದಿಂ' ಮೊಳಗುವನು. ಈ ಕೋಪಾಟೋಪದ ಮಧ್ಯದಲ್ಲಿ ಪಂಪನ ಪ್ರಕಾರ ಪತಿಯಾದ ಅರ್ಜುನನು ಒಂದು ಮಾತನ್ನೂ ಆಡದೆ ಕುಳಿತಿರುವನು. ಇದು ಆಭಾಸವಾಗಿ ಕಾಣುವುದಿಲ್ಲವೆ? ಈ ಸಂದರ್ಭದಲ್ಲಿ ಭೀಮನಾಡಿದ ಮಾತನ್ನೇ ಪ್ರಕಾರಾಂತರವಾಗಿ ಅರ್ಜುನನೇ ಹೇಳಿದ್ದರೆ ಇನ್ನೂ ಹೆಚ್ಚು ಸಮಂಜಸವಾಗುತ್ತಿದ್ದಿತಲ್ಲವೆ? ಈ ಸಮಯದಲ್ಲಿ ಪಂಪನು ತನ್ನ ಮಾರ್ಪಾಟನ್ನು ಮರೆತು ಮೂಲಭಾರತದಲ್ಲಿದ್ದುದನ್ನು ಇದ್ದಂತೆಯೇ ಹೇಳಿ ಬಿಟ್ಟಿದ್ದಾನೆ.
ಮುಂದೆ ಇನ್ನೆರಡು ಸ್ಥಳಗಳಲ್ಲಿ ಪಂಪನು ಹೀಗೆಯೆ ಮುಗ್ಗರಿಸಿರುವನು. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಕೀಚಕನು ಬ್ರೌಪದಿಯಲ್ಲಿ ಅತ್ಯಾಚಾರನಡೆಸಲು ಪ್ರಯತ್ನ ಪಟ್ಟಾಗ ಬ್ರೌಪದಿಯು ರಾತ್ರಿಯ ವೇಳೆಯಲ್ಲಿ, ಅದೂ ಕಟೀಕಾಂತದಲ್ಲಿ ದುರುಳದಮನಕ್ಕೆ ಮೊರೆಯಿಟ್ಟದ್ದು ಭೀಮನಲ್ಲಿ ಅರ್ಜುನನಲ್ಲಲ್ಲ. ಇದು ಮೊದಲಿಗಿಂತಲೂ ಹೆಚ್ಚು ಪಂಪನ ವಿಸ್ತರಣೆಯನ್ನು ವ್ಯಕ್ತಗೊಳಿಸುತ್ತದೆ. ಅರ್ಜುನನು ಬೃಹನ್ನಳೆಯಾಗಿದ್ದುದರಿಂದ ದೌಪದಿಯು ಹೀಗೆ ಮಾಡಿದಳೆಂದು ಹೇಳಲಾಗುವುದಿಲ್ಲ. ಇದೇ ರೂಪದಲ್ಲಿದ್ದಾಗಲೇ ಅರ್ಜುನನು ಉತ್ತರಗೋಗ್ರಹಣಕಾಲದಲ್ಲಿ ಯುದ್ಧ ಮಾಡಿ ಎಲ್ಲರನ್ನೂ ಸೋಲಿಸಲಿಲ್ಲವೆ? ತಮ್ಮಗುಟ್ಟು ರಟ್ಟಾಗುವುದೆಂದು ಹೀಗೆ ಮಾಡಿದನೆಂದು ಭಾವಿಸಿದರೂ ಆಗಲೂ ಅರ್ಜುನನೇ ಈ ಕೆಲಸವನ್ನು ಮಾಡಿದ್ದರೆ ಹೆಚ್ಚು ಸಮಂಜಸವಾಗಿ ಕಾಣುತ್ತಿತ್ತು. ಇಲ್ಲಿಯೂ ವಿಸ್ತರಣೆಯೇ ಇದಕ್ಕೆ ಕಾರಣ.
ಕೊನೆಗೆ ಭೀಮಸೇನನು ದುಶ್ಯಾಸನನನ್ನು ಸಂಹರಿಸಿ ತನ್ನ ಪೂಣೆಯನ್ನು ಪೂರೈಸಿದ ಮೇಲೆ 'ದ್ರುಪದಾತ್ತಜೆಗೆ ಬಲೆಯನಟ್ಟಿ ಜಯವನಿತೆ ಬರ್ಪಂತೆ ಬಂದ ತನ್ನ ತಳೋದರಿಯಂ ಕೆಲದೊಳ್ ಕುಳ್ಳಿರಿಸಿ ಪೊಸೆದು ಜಡೆಗೊಂಡಿರ್ದ ಕೇಶಮಂ ಪಸರಿಸಿ ವೈರಿಯ ಪಲ್ಲ ಪಣಿಗೆಯಿಂ ಬಾಚಿ ದುಶ್ಯಾಸನನ ಕರುಳಿ ಪೊಸ ಬಾಸಿಗಮಾಗೆ ಕೃಷ್ಣಯಂ ಮುಡಿಯಿಸಿ,