________________
19
ಕಂ
ಪಂಚಮಾಶ್ವಾಸಂ | ೨೮೩
ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿನ ರಜದಿಂ 1 ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುಟ್ಟುವು ಮಾಂಗಳ್ ||
ಮುಡಿ ಬಿಡೆ ಪರೆದೆಸಳ ಪೊಸ
ದುಡುಗೆಯ ಮುತ್ತುಗಳ ಕುಚದ ಸಿರಿಕಂಡದ ಬೆ | ಳೊಡನೊಡನೆಸೆದಿರೆ ಜಗುನೆಯ
ಮಡು ಗಂಗೆಯ ಮಡುವನಿನಿಸನನುಕರಿಸಿರ್ಕುಂ ||
೬೫.
とと
ವ|| ಅಂತು ನಾಡೆಯುಂ ಪೊತ್ತು ಜಲಕೇಳೀ ಲೀಲೆಯೊಳ್ ಮೆದು ನಿಮಿರ್ದ ಕುರುಳಳುಂ ಕೆಂಪೇಟೆದ ಕಣ್ಣಳು ಬೆಳದ ಬಾಯ್ಲೆಗಳುಂ ಪಳಂಚಿದ ಬಣ್ಣಂಗಳುಮಸೆಯೆ ಸೊಗಯಿಸುವ ನಿಜ ವಧೂಜನಂ ಬೆರಸು ಪೊಮಟ್ಟಾಗಳ್
ಕoll
ತಲಪುವಡೆದಂಗಜಂ ಕೆ
ಹೈಗೊಳ ನೋಟಕರ ಮನಮನಾಗಳ ಕೊಳದಿಂ | ಪೊಱಮಡೆ ಜಿಗಿತ್ತು ಪತಿದ
ಕುಜುವಡಿಗಳೆ ಮದುವವರ ನಾಣ್ಣಳ ತೆಜಪಂ |
೬೭
ವ|| ಆಗಳ್ ಮಡಿಯ ಭಂಡಾರದ ಮಾಣಿಕ್ಯ ಭಂಡಾರದ ನಿಯೋಗಿಗಳ ತಂದು ಮುಂದಿಟ್ಟ ಪೊನ್ನ ಪಡಲಿಗೆಗಳೊಳೊಟ್ಟದ ದೇವಾಂಗವಸ್ತ್ರಂಗಳುಮನನೇಕವಿಧದ ತುಡುಗೆಗಳು
೬೫. ಆ ಸಮಸ್ತಸಮೂಹವು ಲೇಪನ ಮಾಡಿಕೊಂಡಿದ್ದ ಕಸ್ತೂರಿಯಿಂದಲೂ ತುರುಬಿನ ಹೂಗಳ ಪರಾಗಗಳಿಂದಲೂ ವಾಸನೆ ಮಾಡಲ್ಪಟ್ಟ ನೀರಿನ ಕದಡವೆಂಬ ಮದ್ಯಸೇವನೆಯಿಂದ ಮೀನುಗಳು ಸೊಕ್ಕಿ ಬೆಂಡಿನಂತೆ ಅಸ್ತವ್ಯಸ್ತವಾದುವು. ೬೬. ಆ ಸ್ತ್ರೀಯರ ಬಿಚ್ಚಿ ಹೋದ ತುರುಬಿನಿಂದ ಚೆದುರಿದ ಹೂವಿನ ದಳಗಳಿಂದಲೂ, ಹೊಸಒಡವೆಗಳ ಮುತ್ತುಗಳಿಂದಲೂ ಮೊಲೆಗೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧದಿಂದಲೂ ಬಿಳಿಯ ಬಣ್ಣವನ್ನು ಹೊಂದಿ ಯಮುನೆಯ ಮಡು (ಬಿಳುಪಾಗಿರುವ) ಗಂಗೆಯ ಮಡುವನ್ನು ಸ್ವಲ್ಪ ಹೋಲುತ್ತಿತ್ತು. ವ|| ಹಾಗೆ ಬಹಳಹೊತ್ತು ಜಲಕ್ರೀಡೆಯ ಆಟದಲ್ಲಿ ಮೆರೆದು ನೇರವಾಗಿ ನಿಂತ ಕೂದಲುಗಳೂ ಕೆಂಪು ಹತ್ತಿದ ಕಣ್ಣುಗಳೂ ಬಿಳಿಚಿಕೊಂಡಿರುವ ತುಟಿಗಳೂ ತಗಲಿ ಅಂಟಿಕೊಂಡಿರುವ ಬಣ್ಣದ ಸೀರೆಗಳೂ ರಮಣೀಯವಾಗಿರಲು ಸೊಗಸಾಗಿ ಕಾಣುತ್ತಿರುವ ತಮ್ಮ ಸ್ತ್ರೀಜನಗಳೊಡನೆ ಕೃಷ್ಣಾರ್ಜುನರು (ನೀರಿನಿಂದ) ಹೊರಟುಬಂದರು. ೬೭. ಮನ್ಮಥನು ಅವಕಾಶವನ್ನು ಪಡೆದು ನೋಟಕರ ಮನಸ್ಸನ್ನು ಸೆರೆಹಿಡಿಯುತ್ತಿರಲು ಕೊಳದಿಂದ ಸ್ತ್ರೀಯರು ಹೊರಗೆ ಬಂದರು. ಅವವ ಶರೀರಕ್ಕೆ ಅಂಟಿಕೊಂಡಿದ್ದ ಚಿಕ್ಕಸ್ನಾನಶಾಟಿಗಳೇ ಅವರ ರಹಸ್ಯಸ್ಥಾನಗಳ ವಿಸ್ತಾರವನ್ನು ಪ್ರಕಟಿಸಿದುವು. ವ|| ಆಗ ವಸ್ತ್ರಭಂಡಾರ ಮಾಣಿಕ್ಯ ಭಂಡಾರಗಳ ಅಧಿಕಾರಿಗಳು ತಂದು ಮುಂದೆ ಚಿನ್ನದ ತಟ್ಟೆಗಳಲ್ಲಿ ರಾಶಿ ಹಾಕಿದ ರೇಷ್ಮೆ ವಸ್ತುಗಳನ್ನೂ ಅನೇಕ ವಿಧವಾದ ಆಭರಣಗಳನ್ನೂ ಎಷ್ಟೋ ರೀತಿಯ