________________
೨೮o | ಪಂಪಭಾರತಂ
ತಡಿವಿಡಿದು ಪೂತ ಲತೆಗಳ ನೊಡನೊಡನೆಲರಲೆಯ ಬಿಡದೆ ಸುರಿವಲರ್ಗಳನಂ || ದಡೆಗುಡದ ನೂಂಕಿ ಮೆಲ್ಲನೆ ತಡಿಯಂ ಸಾರ್ಚಿದಪುದಿದು ಬಂಬಲ್ಲೆರೆಗಳ | ವಿದಳಿತ ನುತ ಶತಪತ್ರದ ಪುದುವಿನೊಳಿರದಗಲೆವೋದ ಹಂಸನನಾಸಲ್ | ಪದೆದೆಳಸುವ ಪಣ್ಣಂಚೆಯ
ಪದ ಕೊರಲಿಂಚರದ ಸರಮೆ ಸವಿ ಕಿವಿಗಿದುಳೊಳ್ || ಕಂ| ನೆಯಲರ್ದಂಭೋರುಹದಲ
ರ್ದುಜುಗಲನೆಲೆದೊಗೆದುವಸೆಯ ಜಲದೇವತೆಗಳ 11. ನಿತಿವಿಡಿದುಡಲ್ ನಿಮಿರ್ಚಿದ
ಕುಜುವಡಿಯ ತರಂಗದಂತೆ ಬಂಬಲ್ಲೆರೆಗಳ | ಚಂ| ತುರಗಚಯಂಗಳಂತಿರೆ ತರಂಗಚಯಂ ಚಮರೀರುಹಂಗಳಂ - ತಿರೆ ಕಳಹಂಸೆ ಬೆಳ್ಕೊಡೆಗಳಂತಿರೆ ಬೆಳ್ಳೂರ ಗೊಟ್ಟ ಗಾಣರಂ | ತಿರೆ ಮದುಂಬಿ ಮೇಳದವರಂತಿರೆ ಸಾರಿಕೆ ರಾಜನೇಹದಂ
ತಿರೆ ಕೊಳನಲ್ಲಿ ತಾಮರಸರಂತಿರೆ ತಾಮರಸಂಗಳೊಪ್ಪುಗುಂ 1 . ೫೮
ವಗ್ರ ಎಂದು ಭಾಸ್ಕರತನೂಜೆಯನುಭಯತಟ ನಿಕಟ ಕುಸುಮನಿವಹ ತತ್ವರಾಗ ಪಟಳ ಪಿಶಂಗ ತರತ್ತರಂಗ ಸರೋಜೆಯಂ ಮೆಚ್ಚಿ ಪೊಗಟ್ಟು ಜಲಕ್ರೀಡೆಯಾಡಲ್ ಬಗೆದು ತಾನುಮನಂತನುಮಂತಃಪುರಪರಿವಾರಂ ಬೆರಸು
ಕಪ್ಪಕಾಂತಿಯಿಂದ ಪ್ರಕಾಶಿಸುತ್ತಿದೆ. ೫೫. ದಡವನ್ನನುಸರಿಸಿ ಹೂಬಿಟ್ಟಿರುವ ಲತೆಗಳನ್ನು ಆಗಾಗ ಗಾಳಿಯು ಅಲುಗಿಸಲು ಅದರಿಂದ ಸುರಿಯುವ ಹೂವುಗಳನ್ನು ಒಂದೇ ಸಮನಾಗಿ ಇದರ ಸಾಲಾದ ಅಲೆಗಳು ಮೃದುವಾಗಿ ದಡವನ್ನು ಸೇರಿಸುತ್ತವೆ. ೫೬. ಅರಳಿದ ಪ್ರಸಿದ್ದವಾದ ತಾವರೆಯ ಹುದುವಿನ ಆಶ್ರಯದಲ್ಲಿರದೆ ಅಗಲಿಹೋದ ಗಂಡು ಹಂಸಪಕ್ಷಿಯನ್ನು ಹುಡುಕಲು ಆಶೆಪಟ್ಟು ಕೂಗುವ ಹೆಣ್ಣುಹಂಸದ ಹದವಾದ ಕೊರಲಿನ ಇಂಪಾದಧ್ವನಿಯೇ ಇಲ್ಲಿ ಕಿವಿಗಿಂಪಾದ ಸ್ವರವಾಗಿದೆ. ೫೭. ಜಲದೇವತೆಗಳು ಉಡಲು ಎತ್ತಿದ ಸೀರೆಯ ನಿರಿಗೆಗಳು ಚಿಮ್ಮುವಂತೆ ಅಲೆಗಳ ಸಮೂಹವು ತಾವರೆಗಳ ಮೇಲಿಂದ ಹಾರಿದುವು. ೫೮. ಅಲೆಗಳ ಸಮೂಹವು ಕುದುರೆಗಳ ಸಮೂಹದಂತಿರಲು ಕಳಹಂಸವು ಚಾಮರಗಳಂತಿರಲು ಬಿಳಿಯ ನೊರೆ ಶ್ವೇತಚ್ಛತ್ರಿಯಂತಿರಲು ದುಂಬಿಯ ಮರಿಗಳು ಗಾಯಕಗೊಷ್ಠಿಯಂತಿರಲು ಹೆಣ್ಣುಗಳಿಯು ಸಖಿಯಂತಿರಲು ಅಲ್ಲಿಯ ಕೊಳವು ಅರಮನೆಯಂತಿರಲು ತಾವರೆಗಳು ತಾವೇ ಅರಸರಾಗಿರುವ ಹಾಗೆ ಪ್ರಕಾಶಿಸುತ್ತಿವೆ. ವ!! ಎಂದು ಎರಡು ಸಮೀಪದ ಮರಗಳಿಂದ ಉದುರಿದ ಹೂವಿನ ಪರಾಗರಾಶಿಯಿಂದ ಪಿಶಂಗ (ಕಪ್ಪುಮಿಶ್ರವಾದ ಕೆಂಪುಬಣ್ಣವಾಗಿ ಮಾಡಲ್ಪಟ್ಟ ಚಂಚಲವಾದ ಅಲೆಗಳಿಂದ ಕೂಡಿದ ಕಮಲವನ್ನು ಸೂರ್ಯಪುತ್ರಿಯಾದ