________________
೨೭೬ | ಪಂಪಭಾರತಂ ಪೊಸತುಂ ಪದುಮನದು ಪರಿಯಿಸಲ್ ನೀನೆ ಬಲ್ಲೆಯದನಾನೆ ಬಲ್ಲೆನೆಂದು , ಬಿನ್ನಪಂಗಯ್ಯನಂತುವಲ್ಲದ ಬಿಗಂ ಬಸನಕ್ಕಂ ಸವಿಯಪ್ಪ ಕಿಜುವೇಂಟೆಯುಂ ಪರ್ವೇಂಟೆಯುಮಲ್ಲದುಟಿದ ಬೇಂಟೆಯಂ ಬೇಂಟೆಯನ್ನೆಂಪಿರಿಯಕ್ಕರ | ಪಸಿವು ದೊರೆಕೊಳ್ಳುಮುಣಿಸುಗಳಿನಿಕೆಯುಮಾವಂದದೂಳ್ ಕನಲ್ದಾದ
ಮಯ್ಯ ನಸಿಯನಾಗಿಪುದುಳಿದುವಪ್ಪುವು ಬಗೆಗೊಳಲಪುದು ಮೃಗದ ಮಯ್ಯೋಳ್ | ನಿಸದಮೆಸೆವುದಂ ಬಲ್ಲಾಳ ಬಿಲ್ಲಿ ತನ್ನೊಳಮಿಸುತ ಲೇಸಪುದು ಬಸನಮಂದಣಿಯದೇಳಿಸುವರ್ ಚೇಂಟೆಯಂ ಬೇಂಟೆಯ ಬಿನದಂಗಳರಸll ೪೭
ವ|| ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗ ಮೃಗ ವ್ಯಾಯಾಮ ಕಾರ್ತಿಕೇಯಂ ಮಚ್ಚಿ ಮೆಚ್ಚುಗೊಟ್ಟು ತೊವಲನಕ್ಕೆಂದು ಮುಂದೆ ಪೇಟ್ಟಿಟ್ಟ ನಾರಾಯಣನುಂ ತಾನುಮಂತಃ ಪುರ ಪರಿವಾರಂಬೆರಸು ಬೇಂಟೆಗೆ ಪೊಆಮಟ್ಟು ಪರಿಯ ತಾಣಕ್ಕೆ ವಂದು ಬೇಲಿಯ ಕೆಲದೋಳಲ್ಲದ ಪಂಗಣುಲಿಪಿಂಗಮುಳೊಳಕ್ಕಂ ಗಂಟಾಗಿ ಬೀಡಂ ಬಿಡಿಸಿ ಬೇಂಟೆಕಾಳಿನ ಸಮದ ಮಕರತೋರಣಮುಮಂ ಗುಣಕಯ ಬಾಣಸಿನ ಮಜ್ಜನದ ರಾಣಿವಾಸದ ಮನೆಗಳುಮಂ ನನೆಯ ಪಂದರುಮಂ ತಳಿರ ಕಾವಣಂಗಳುಮಂ ಮಾಡದ ನೆಲೆಯ ಚೌಪಳಿಗೆಗಳುಮನವು ಮೇಲಿರ್ದಿಯಡಕೆಯುಮಂ ತಂಗಿನೆಳನೀರುಮಂ ಕೊಳಲಿಂಬಪ್ರಂತಿರ ಮಾಡಿ ನಮ್ಮ ಕಂಗಿನ
ದಾರಿಯಲ್ಲಿಯೇ ಹೊಸದು ಹಳೆಯದೆಂಬುದನ್ನು ತಿಳಿದು ಹರಿಯಿಸಲು ನೀನೇ ಶಕ್ತನೆಂಬುದನ್ನು ನಾನು ಬಲ್ಲೆ. ಅಲ್ಲದೆ ಶಕ್ತಿಪ್ರದರ್ಶನಕ್ಕೂ ಸವಿಯಾಗಿರುವ ಕಿರುಬೇಟೆಯನ್ನೂ ಹೆಬ್ಬೇಟೆಯನ್ನೂ ಬಿಟ್ಟು ಉಳಿದ ಬೇಟೆಯನ್ನು ಬೇಟೆಯೆಂದೇ ನಾನು ಕರೆಯುವುದಿಲ್ಲ. ೪೭. ಬೇಟೆಯಿಂದ ಹಸಿವುಂಟಾಗುತ್ತದೆ. ಆಹಾರ ರುಚಿಯಾಗುತ್ತದೆ. ಯಾವ ರೀತಿಯಲ್ಲಾದರೂ ಕೆರಳಿ ಕೊಬ್ಬಿದ ಬೊಜ್ಜು ಕರಗುತ್ತದೆ. ಉಳಿದುವೂ ಆಗುತ್ತದೆ. ಮೃಗಗಳ ಶರೀರ ಮತ್ತು ಮನಸ್ಸಿನ ಅರಿವುಂಟಾಗುತ್ತದೆ. ಪರಾಕ್ರಮಶಾಲಿಯ ಬಿಲ್ಲಿನ ಪ್ರೌಢಿಮ ನಿಶ್ಚಯವಾಗಿಯೂ ಪ್ರಕಾಶಿಸುತ್ತದೆ. ಬಾಣಪ್ರಯೋಗ ಮಾಡುವುದರಿಂದ ತನಗೂ ಒಳ್ಳೆಯದಾಗುತ್ತದೆ. ತಿಳಿಯದವರು ಬೇಟೆಯನ್ನು ವ್ಯಸನವೆಂದು ಕರೆಯುತ್ತಾರೆ. ಬೇಟೆಯು ವಿನೋದಗಳ ರಾಜನಲ್ಲವೆ? ವ|| ಎಂದು ವಿಜ್ಞಾಪನಮಾಡಿದ ಬೇಟೆಯವನಿಗೆ ಮೃಗಗಳಿಗೆ ವ್ಯಾಯಾಮ ಮಾಡಿಸುವುದರಲ್ಲಿ ಷಣ್ಮುಖನಂತಿರುವ ಅರ್ಜುನನು (ಅರಿಕೇಸರಿಯು) ಬಹುಮಾನವನ್ನಿತ್ತು ಚಿಗುರನ್ನು ಹಾಕು ಎಂದು ಮೊದಲು ಹೇಳಿಕಳುಹಿಸಿದನು. ಕೃಷ್ಣನೂ ತಾನೂ ರಾಣಿವಾಸದ ಪರಿವಾರದೊಡನೆ ಹೊರಟು ಬೇಟೆಯ ಪ್ರವೇಶಸ್ಥಳಕ್ಕೆ ಬಂದರು. ಬೇಲಿಯ ಪಕ್ಕದಲ್ಲಿಯೇ ಅಲ್ಲದೆ ಹಿಂದುಗಡೆಯ ಸದ್ದಿಗೂ ಗಲಭೆಗೂ ದೂರವಾಗಿ ಪಾಳೆಯವನ್ನು ಬಿಡಿಸಿದರು. ಬೇಟೆಗಾರನು ಸಿದ್ಧ ಮಾಡಿದ್ದ ಮಕರತೋರಣ, ನೃತ್ಯಶಾಲೆ, ಪಾಕಶಾಲೆ, ಸ್ನಾನಗೃಹ, ಅಂತಃಪುರ, ಹೂವಿನ ಚಪ್ಪರ, ಚಿಗುರಿನ ಹಂದರ, ಉಪ್ಪರಿಗೆಯ ಮನೆಯ ತೊಟ್ಟಿಗಳು, ಅವುಗಳ ಮೇಲಿದ್ದ, ಎಲೆಯಡಿಕೆ, ತೆಂಗಿನ ಎಳನೀರುಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಹಾಗೆ