________________
೨೭೨) ಪಂಪಭಾರತಂ
ಬರವಂ ಕಾಡಂ ಬೇಗೆಗೆ ಕರಮಳದೆರಡುಂ ಮೃಗಂಗಳುಂ ತಣ್ಮುಟಿಲೊಳ್ | ನೆರೆದೊಡವಂದುವು ತಪ್ಪದಿ ದರಿಕೇಸರಿ ಕಂಡು ಮೆಚ್ಚುವೆ ಕೋಳ್ತಾಂಗಂ ||* ಕಾಡೂಡಮ ವೇಳೆ ಸಲೆ ಕೆ ಯೂಡಿದುದನೆ ನೆಲದೊಳಿರ್ದ ನೆಲ್ಲಿಯ ಕಾಯುಂ | ನೋಡ ನೆಲಮುಟ್ಟಲಿಯೊ
ಕಾಡುವೊಡೀ ದವಸಮ ಬೇಂಟೆಯ ದವಸಂ lit ವ|ಮತ್ತಂ ಬೇಂಟೆ ಜಾಲಿಲ್ಲದ ಬೇಂಟೆಯ ಮಾತಂ ಬಿನ್ನಪಂಗೆಯ್ಯಂಪಿರಿಯಕ್ಕರ | ಆಡಲಾಡಿಸಲ್ ಪಾಟಿಯಂ ನಿಸಲುಂ ಪರಿಗೊಳಲ್ ತೊವಲಿಕ್ಕ
ಲೋಳಗಂಬರಲ್ ಕಾಡ ಬೇಲಿಯಂ ಮಾರ್ಕಾಡನಳೆಯಲುಂ ಮೂಡಿಗೆ ಕಕ್ಕುಂಬಂ ಸುಟಿಸಿ ಜೊಂಪಂ | ಬೀಡು ಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮಂದೆಡೆಯದುಂ ಮಾಡಲ್ ಮಾಡಿಸಲ್ ಪಡೆ ಮೆಚ್ಚಿ ನೀಂ ಬಲ್ಲೆ ನೀಂ ಮಚ್ಚೆ ಹರಿಗ ಕೇಳಾನೆ
* ಬಲ್ಲll ೪೧ ಹೊಲದ ದಾರಿಯಲ್ಲಿರುವ ಮೇವುಗಳಿಂದಲೇ ತೃಪ್ತಿಪಡುತ್ತಿವೆ. ಹಂದಿಗಳೂ ತಮ್ಮ ಹಳೆಯ ಕೂದಲುಗಳನ್ನು ವಿಶೇಷವಾಗಿ ಬೀಳಿಸಿಕೊಂಡಿವೆ. ಕಾಡು ಈಗ ಓಡಾಡಲು ಅತ್ಯಂತ ಸೊಗಸಾಗಿದೆ. ೩೯. ಮೃಗಗಳ ಬರುವಿಕೆಯನ್ನೂ ಕಾಡಿನ ಸ್ವರೂಪವನ್ನೂ ಚೆನ್ನಾಗಿ ತಿಳಿದು ಎರಡು ಜಿಂಕೆಗಳೂ ತಂಪಾದ ಮರಗಳ ತೋಪಿನಲ್ಲಿ ಸೇರಿ ಜೊತೆಗೂಡಿ ಬಂದಿವೆ. ಇದು ಸುಳ್ಳಲ್ಲ ಅರ್ಜುನನೇ ಮೃಗವು ಸಿಕ್ಕಿಬೀಳುವ ರೀತಿಯನ್ನು ನೀನು ಮೆಚ್ಚುತ್ತೀಯೆ.* ೪೦. ಕಾಡಿನಲ್ಲಿ ಸಂಗ್ರಹಿಸಬೇಕಾದ ವಸ್ತು, ಅದನ್ನು ಸಂಗ್ರಹಿಸಬೇಕಾದ ಕಾಲ ಇವೆರಡೂ ಕೈಗೂಡಿದೆಯೆನ್ನಲು ನೆಲದಲ್ಲಿ ಬಿದ್ದಿರುವ ನೆಲ್ಲಿಯ ಕಾಯೇ ಸಾಕ್ಷಿ, ನೆಲವನ್ನು ಮುಟ್ಟಿ ಆಟ ಆಡುವ ಪಕ್ಷದಲ್ಲಿ ಬೇಟೆಗೆ ಈ ದಿನವೇ ಯೋಗ್ಯವಾದ ದಿನವಲ್ಲವೇ? ವll ಬೇಟೆಯ ವಿಷಯವಾದ ಸುಳ್ಳು ಸಂದೇಶಗಳಿಲ್ಲದ ಬೇಟೆಯ ಫಲಾಫಲಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ೪೧. ಬೇಟೆಯಾಡುವುದಕ್ಕೂ ಆಡಿಸುವುದಕ್ಕೂ ಕ್ರಮವನ್ನು ಸ್ಥಾಪಿಸುವುದಕ್ಕೂ ಓಡುವುದಕ್ಕೂ ಚಿಗುರನ್ನು ಹಾಕುವುದಕ್ಕೂ ಒಳಗೆ ಪ್ರವೇಶಿಸುವುದಕ್ಕೂ ಕಾಡಿನ ಎಲ್ಲೆಯನ್ನೂ ಎದುರು ಕಾಡನ್ನೂ ತಿಳಿಯುವುದಕ್ಕೂ ಬತ್ತಳಿಕೆ ಕಕ್ಕುಂಬ(?) ಗಳನ್ನು ಸುಳಿಸಿ. ಇದು ಜೊಂಪ (?) ಇದು ಬೀಡುಬಿಡಲು ಯೋಗ್ಯವಾದ ಸ್ಥಳ, ಇದು ಬಾಳೆ, ತೆಂಗು ಇರುವ ಸ್ಥಳ ಇದು, ಮೃಗಗಳು ನೀರು ಕುಡಿಯಲು ಬರುವ ಸ್ಥಳ ಎಂದು ಜಾಣೆಯಿಂದರಿದು ಸೈನ್ಯವೆಲ್ಲ ಮೆಚ್ಚುವ ಹಾಗೆ ಮಾಡುವುದಕ್ಕೂ ಕೂಡಿಸುವುದಕ್ಕೂ ಸಮರ್ಥನಾಗಿದ್ದೀಯ. ಎಲೈ
* ಈ ಪದ್ಯದ ಅರ್ಥ ಮತ್ತು ಅನ್ವಯ ಸ್ಪಷ್ಟವಾಗಿಲ್ಲ. ಏನೋ ಪಾಠದೋಷವಿರಬೇಕು. * ಈ ಪದ್ಯವೂ ಸರಿಯಾಗಿ ಅರ್ಥವಾಗುತ್ತಿಲ್ಲ.