________________
೨೭೦ | ಪಂಪಭಾರತಂ
ಉ
ಚoll
ಚoll
ಮುಂ ಮಹಿಯೆಲ್ಲಮಂ ಶಿಶಿರರಾಜನೆ ಬಿಚ್ಚತಮಾಳಗಳಾ ತಂ ಮಿಡುಕ ಸಲ್ಲಿರದೆ ಪೋಪುದದಕನ ಕಾಮದೇವನಿ | ತಂ ಮಧು ಪೆತ್ತನೀ ನೆಲನನಿಂತಿದು ಪತ್ತಳೆಯೆಂದು ಸಾಲುವಂ ದಂ ಮಿಗೆ ಕರ್ಚಿ ಪಾದುವು ಕೆಂದಳಿರು ಗಿಳಿವಿಂಡಿನೋಳಿಗಳ್ || 20
ಕೆಂಗಣ ಕೆಂದಳಿರ್ ಪುದಿದ ಮೇಗಣ ಪಂದಳಿರೊಂದಿದೊಂದು ಕೆ ಯಟದ ಪಸುರ್ಪುಮಂ ಪೊಳೆವ ಕೆಂಪುಮನಾಳಿಗೆ ಬೇಟದೊಳ್ ಕನ | ಲ್ದುದ ವಿಯೋಗಿಯಾರ್ದೆಯನಾಯ್ಡದನಾಟಿಸಲೆಂದ ಮನ್ಮಥಂ ಘಟಿಯಿಸಿ ಕೆಂಪುವಾಸಿದವೊಲಿರ್ದುವು ಮಾಮರಗಳ್ ಬಸಂತದೊಳ್ || ೩೨
ಪರೆಯೆ ವಸುರ್ಪು ಬೆಳ್ಳಡರೆ ಬಲುಗುಳೊಳ್ ಪೊರೆದೋ
ತಂಬೆರಲ್ ಪೊರೆವೊರೆಯಂ ಸಡಿಲೈ ನಡು ಪೊಂಗಿರೆ ಮಲ್ಲಿಗೆಗಳ್ ಬಸಂತದೊಳ್ | ಬಿರಿದೊಡೆ ನಲ್ಲರಂ ನೆನೆದ ನಲ್ಲರ ಮೆಲ್ಲೆರ್ದೆಗಳ್ ಬಸಂತದೊಳ್ ಬಿರಿದುವದಂತೂ ಮಲ್ಲಿಗೆಗೆ ನಲ್ಲರ ಮೆಲ್ಲೆರ್ದೆ ವೇಳೆಗೊಂಡುದೋ || ೩೩
ನನೆಯೆಳಗಂಪನೆತ್ತಿಯುಮಣಂ ನನೆ ನಾಅದರಲ್ಲನೇಕ ಕೋ
ಕನದ ವನಂಗಳೊಳ್ ಸುಟಿದು ತಣ್ಣಸಮಾಗದ ಕೂಡೆ ಬಂದ ಮಾ | ವಿನ ಪೊಸ ಪೂವಿನೊಳ್ ಪೊರೆದು ಪೊಣಿದ ಕಂಪು ಮೊಗಂಗಳಂ ಚಳಿ ಆನೆ ಕೊಳೆ ಪೊಯ್ಯ ತೀಡಿದುದು ತೆಂಕಣ ಗಾಳಿ ವಸಂತಮಾಸದೊಳ್ || ೩೪
ಹಾಸಿಗೆಯಲ್ಲಿದ್ದ ಬಯಕೆಯು ಗೊಂಚಲಾಗಿರುವ ಹೂವಿನ ಹಾಸಿಗೆಯಲ್ಲಿ ನೆಲೆಸಿತು. ಹೂಬಿಟ್ಟಿದ್ದ ಸೇವಂತಿಗೆ ಮತ್ತು ಸಿಂಧುವಾರ ಹೂವುಗಳಲ್ಲಿದ್ದ ಆಸಕ್ತಿ ಮಿಶ್ರಗಂಧವನ್ನು ಬೀರುತ್ತಿರುವ ಮಲ್ಲಿಗೆಯಲ್ಲಿಯೂ ಅರಳಿದ ಸಂಪಗೆಯಲ್ಲಿಯೂ ಅತಿಶಯವಾಯಿತು. ೩೧. ಮೊದಲು ಭೂಮಿಯನ್ನೆಲ್ಲ ಮಾಗಿಯ ಕಾಲವೆಂಬ ರಾಜನು ತಾನೇ ತಾನಾಗಿ ಆಳಿದನು. ಈಗ ಆತನು ಚಲಿಸಲು ಸಾಧ್ಯವಿಲ್ಲ ಇರದೆಹೋಗಬೇಕು. ಅದೇಕೆಂದರೆ ಈ ಭೂಮಿಯನ್ನು ಮನ್ಮಥನು ಕೊಟ್ಟನು, ವಸಂತರಾಜನು ಪಡೆದನು. ಇದು ಹೀಗೆ ರಾಜಶಾಸನ (ಓಲೆಯಪತ್ರ) ಎಂದು ಡಂಗುರ ಹೊಡೆಯುವ ರೀತಿಯಲ್ಲಿ ಗಿಳಿಯ ಹಿಂಡಿನ ಸಾಲುಗಳು ಕೆಂಪಾದ ಚಿಗುರುಗಳನ್ನು ಕಚ್ಚಿಕೊಂಡು ಹಾರಿದುವು. ೩೨. ಕೆಳಭಾಗದ ಕೆಂಪು ಚಿಗುರಿನಿಂದ ಕೂಡಿದ ಮೇಲುಭಾಗದ ಹಸರು ಚಿಗುರು ಒಂದಕ್ಕೊಂದು ಕೂಡಿಸಿಕೊಂಡು ಅತಿಶಯವಾದ ಹಸಿರು ಬಣ್ಣವನ್ನೂ ಹೊಳೆಯುವ ಕೆಂಪು ಬಣ್ಣವನ್ನೂ ಹೊಂದಿರಲು ವಿರಹದಿಂದ ಕೆರಳಿ ಉಳಿದುಕೊಂಡ ವಿರಹಿಯ ನಡುಗುವ ಎದೆಯನ್ನು ಆಯ್ದುಕೊಂಡು ಅದನ್ನು ಬಯಸಲಿ ಎಂದೇ ಮನ್ಮಥನು ಅದನ್ನು ಸೇರಿಸಿ ಕೆಂಪು ಬಣ್ಣವನ್ನು ಹಾಸಿದ ಹಾಗೆ ಮಾವಿನ ಮರಗಳು ವಸಂತ ಕಾಲದಲ್ಲಿ ರಮ್ಯವಾಗಿದ್ದುವು. ೩೩. ವಸಂತಕಾಲದಲ್ಲಿ ಮಲ್ಲಿಗೆಯ ಹಸಿರು ಬಣ್ಣ ಹೋಗಿ ಬಲಿತ ಮೊಗ್ಗುಗಳಲ್ಲಿ ಬಿಳಿಯ ಬಣ್ಣವು ಕೂಡಿದವು. ದಳದ ಪದರಗಳು ತೋರುತ್ತಿರಲು ತಂಗಾಳಿಯು ಆ ದಳದ ಪದರಗಳನ್ನು ಸಡಲಿಸಿದವು. ಮೊಗ್ಗಿನ ಮಧ್ಯಭಾಗವು ಉಬ್ಬಿ ಮಲ್ಲಿಗೆಯು ಅರಳಿರಲು ಪ್ರಿಯರನ್ನು ನೆನಸಿಕೊಂಡ ವಿರಹಿಗಳ ಹೃದಯಗಳು ಒಡೆದುವು. ಮಲ್ಲಿಗೆಯ ಅರಳುವಿಕೆಗೆ ಪ್ರಿಯರ ಮೃದುಹೃದಯವೂ ಸಮಯಪಾಲನೆ ಮಾಡಿವೆ! ೩೪. ಹೂವಿನ ಎಳೆಯ ವಾಸನೆಯನ್ನು ಧರಿಸಿಯೂ