________________
೨೬೮ | ಪಂಪಭಾರತಂ ಮll ಪಸುರ್ವಂದರ್ ಪರ ವೇದಪಾರಗರವಂ ಕಣೋಟದುದ್ಧಾನಿಯಂ
ಪಸರಂ ಗಯ್ಯವೊಲಪ್ಪ ಪೊಚ್ಚ ಮಹಾ ಸಾಮಂತ ಸೀಮಂತಿನೀ | ಪ್ರಸರಂ ಮಂಗಳ ತೂರ್ಯನಾದಮೆಸೆಯುತ್ತಿರ್ಪನ್ನೆಗಂ ಚಕ್ರಿ ರಾ
ಗಿಸಿ ಕೆಯ್ದಿರೆಯದಂ ಗುಣಾರ್ಣವ ಮಹೀಪಾಲಂಗಮಾ ಕನ್ವಯಂ | ೨೫
ವಅಂತವರಿರ್ವರ ಬೇಟಮಂಬ ಲತೆಯ ಬೆಳಸಿಂಗ ಪೊಯ್ಯಾರಲ್ವಂತೆ ಕೆಯ್ದೆರೆದು ಬಿಯಮಂ ಮದು~ ಪಿರಿಯಕ್ಕರಂ || ತೊಟ್ಟ ತುಡುಗೆಗಳ ಕೌಸ್ತುಭರತ್ನಮನೋರೊಂದ ಮಸುಳಿಸಿ
ಪಾಲ್ಗಡಲೊಳ್ ಪುಟ್ಟದಾನೆಯನಾನೆಗಳ ಗಲಿವರೆ ಕುದುರೆಗಳ ಕುದುರೆಯಂ ಕೀಣಾಡ | ತೊಟ್ಟ ಮದನನ ಪೂರಕಗಣಯಾಗ ಗಣಿಕೆಯರ್ ಗಣಿದಮಂ ಬಗಯದಿಂತು ಕೊಟ್ಟಂ ತಂಗೆಗೆ ಬಟವಟಿಯಂದಿಂತು ಸರ್ವಸ್ವವೆಲ್ಲಮಂ ಪುರುಷೋತ್ತಮಂ || ೨೬
ವ|| ಅಂತು ಬಟವಟಿಗೊಟ್ಟಿಂಬಲಿಯಂ ಧರ್ಮಪುತ್ರ ಬಲದೇವನನೆನಿತಾನುಮುಚಿತ ಪ್ರತಿಪತ್ತಿಗಳಿಂ ಸಂತಸಂಬಡಿಸಿ ದ್ವಾರಾವತಿಗೆ ಕಟಿಪಿದನಾ ವಿವಾಹೋತ್ಸವಾನಂತರದೊಳ್ಚಂ|| ತಳಿರ್ಗಳ ಪಾಸಿನೊಳ್ ಪೊರಳುತಿರ್ದಬಲಂ ಕಿಡೆ ಸೋಂಕೆ ಸೋಂಕುಗಳ
ಕಳೆದುವು ಮಯ್ಯ ಸುಯ್ಯ ಪದವೆಂಕಗಳಂ ಬಿಗಿಯಷ್ಟಿದವುಗಳ್ | ಕಳೆದುವು ನಾಣುಮಂ ಕಿಳಿದು ಜಾಣುಮನಳಿನೀವ ಚುಂಬನಂ ಕಳೆದುವು ಗರ್ವಮಂ ಕಳದುವಂತವರಿರ್ವರ ಮನ್ಮಥದ್ರವಂ || ೨೭
ಕಂಡು ಪಟ್ಟಣಕ್ಕೆ ಜೊತೆಯಲ್ಲಿ ಕರೆದುಕೊಂಡು ಬಂದರು. ಶುಭಕರವಾದ ದಿನ, ನಕ್ಷತ್ರಯೋಗ ಕರಣಗಳನ್ನು ನೋಡಿ-೨೫. ಹಸಿರುವಾಣಿಯ ಚಪ್ಪರ, ಹಸೆಯಮಣೆ, ಪಂಡಿತರ ವೇದಘೋಷ ಇವು ಕಣ್ಣಿಗೆ ತೃಪ್ತಿಯನ್ನುಂಟುಮಾಡುತ್ತಿರಲು ಅಂಗಡಿಯ ಸಾಲಿನ ಹಾಗೆ ಶೂರರ, ಮಹಾ ಸಾಮಂತರ, ಸುಮಂಗಲೀಯರ ಸಮೂಹವು ಓಳಿಗೊಂಡಿರಲು ಮಂಗಳವಾದ್ಯ ಧ್ವನಿ ಘೋಷಿಸುತ್ತಿರಲು ಶ್ರೀಕೃಷ್ಣನು ಪ್ರೀತಿಯಿಂದ ಗುಣಾರ್ಣವ ಮಹಾರಾಜನಿಗೆ (ಅರ್ಜುನನಿಗೆ) ಕನೈಯಾದ ಸುಭದ್ರೆಯನ್ನು ಧಾರಾಪೂರ್ವಕ ದಾನಮಾಡಿಕೊಟ್ಟನು. ವll ಹಾಗೆ ಅವರಿಬ್ಬರ ಪ್ರೇಮವೆಂಬ ಬಳ್ಳಿಗೆ ಹೊಯ್ ನೀರೆರೆಯುವಂತೆ ಧಾರಾಜಲವನ್ನು ಕೊಟ್ಟು ಯಥೇಚ್ಛವಾಗಿ ದ್ರವ್ಯವನ್ನು ದಾನಮಾಡಿದನು. ೨೬. ವಿಷ್ಣುವಿನ ಹೃದಯದಲ್ಲಿರುವ ಕೌಸ್ತುಭರತ್ನವನ್ನೂ ಕಾಂತಿಹೀನವನ್ನಾಗಿ ಮಾಡುವ ಅನೇಕ ಅಭರಣಗಳನ್ನೂ ಐರಾವತವನ್ನೂ ಕೀಳಾಡುವ ಆನೆಗಳನ್ನೂ ಉಚ್ಚೆ ಶ್ರವಸ್ಸನ್ನು ತಿರಸ್ಕರಿಸುವ ಕುದುರೆಗಳನ್ನೂ ಮನ್ಮಥನ ಪುಷ್ಪಬಾಣಗಳಂತಿರುವ ವೇಶ್ಯಾಸ್ತ್ರೀಯರನ್ನೂ ಅಸಂಖ್ಯಾತವಾಗಿ ಕೃಷ್ಣನು ತಂಗಿಗೆ ಬಳುವಳಿಯಾಗಿ ಕೊಟ್ಟನು. ವ|| ಹಾಗೆ ಬಳುವಳಿ ಕೊಟ್ಟ ಬಳಿಕ ಧರ್ಮರಾಜನು ಬಲರಾಮನನ್ನು ಅನೇಕ ಉಚಿತ ಸತ್ಕಾರಗಳಿಂದ ಸಂತೋಷಪಡಿಸಿ ದ್ವಾರಕಾಪಟ್ಟಣಕ್ಕೆ ಕಳುಹಿಸಿಕೊಟ್ಟನು. ಆ ಮದುವೆಯ ಮಹೋತ್ಸವವಾದ ಮೇಲೆ ೨೭. ಅರ್ಜುನ ಸುಭದ್ರೆಯರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಚಿಗುರಿನ ಹಾಸಿಗೆಯಲ್ಲಿ