________________
೨೨ | ಪಂಪಭಾರತಂ ದುರ್ಯೋಧನನನ್ನು ಕೋಡಗಗಟ್ಟುಗಟ್ಟಿ ಎಳೆದೊಯುತ್ತಿದ್ದ ಚಿತ್ರಸೇನನನ್ನು ಪರಾಭವಿಸಿದುದೂ ಸ್ವಲ್ಪಮಾತಿನಲ್ಲಿ ವರ್ಣಿತವಾದರೂ ಅವನ ಪೂರ್ಣಸಾಹಸವು ವ್ಯಕ್ತವಾಗುವಂತಿವೆ. ಭಾರತಯುದ್ಧದಲ್ಲಿ ಅರ್ಜುನನು ಭೀಷ್ಮದ್ರೋಣ ಕರ್ಣಾದಿಗಳಲ್ಲಿ ಪ್ರದರ್ಶಿಸಿದ ಸಾಮರ್ಥ್ಯವನ್ನಂತೂ ಪಂಪನು ತನ್ನ ಕವಿತಾಶಕ್ತಿಯನ್ನೆಲ್ಲಾ ವೆಚ್ಚಮಾಡಿ ಬಹು ಆಕರ್ಷಕವಾಗಿ ವರ್ಣಿಸಿದ್ದಾನೆ. ಕೊನೆಗೆ ತಾನು ಮಾಡಿದ ವರ್ಣನೆಯಿಂದ ತೃಪ್ತಿಹೊಂದದೆ ಸಾಹಸಾಭರಣನ ಅದ್ಭುತವಾದ ಸಾಹಸವನ್ನು ಪಶುಪತಿಯ ಬಾಯಿಂದಲೇ ಹೊರಡಿಸಿರುವನು. ಕರ್ಣಾರ್ಜುನರು ಯುದ್ಧಮಾಡುತ್ತಿದ್ದುದನ್ನು ನೋಡುತ್ತಿದ್ದ ದೇವೇಂದ್ರನಿಗೂ ದಿವಸೇಂದ್ರನಿಗೂ ತಮ್ಮತನಯರ ಕಾರ್ಯದ ವಿಷಯದಲ್ಲಿ ನಡೆಯುತ್ತಿದ್ದ ಜಗಳವು ಹರನ ಕಿವಿಗೂ ಬೀಳಲು ಈಶ್ವರನು ಹೀಗೆನ್ನುವನು.
ಜಗಳಮಿಂ ದಿನಕರ, ಪೊಣ ರ್ದು ಗೆಲ್ವನೇ ನಿಜತನೂಭವಂ ಹರಿಗನೊಳೇಂ ಬಗೆಗೆಟ್ಟೆಯೊ ಧುರದೊಳವಂ
ಮಿಗಿಲೆನಗೆ ನಿನಗೆ ಪಗಲೊಳೇಂ ಕುಲೆಯೇ ಕೊನೆಗೆ ಯುದ್ಧದಲ್ಲಿ ಅರಿನೃಪರನ್ನೆಲ್ಲ ನಿರ್ಮೂಲ ಮಾಡಿದ ಮೇಲೆ ಯಥಾವತ್ತಾಗಿ ವಿಕ್ರಮಾರ್ಜುನನಿಗೇ ಪಟ್ಟಾಭಿಷೇಕವಾಗುವುದು. ಧರ್ಮನಂದನನೂ ದೇವಕೀನಂದನನೂ ಇಂದ್ರನಂದನನನ್ನು ಕುರಿತು
ಪ್ರಾಯದ ಪಂಪ ಪಂಪು, ಎಮಗೆ ಮೀಜದರಂ ತವ ಕೊಂದ ಪೆಂಪು ಕ ಟ್ಯಾಯದ ಪೆಂಪು ಶಕ್ರನೊಡನೇಜೆದ ಪಂಪು, ಇವು ಪಂಪುವೆತ್ತು ನಿ ಟ್ನಾಯುಗಳಾಗಿ ನಿನ್ನೊಳಮರ್ದಿದರ್ುವು ನೀಂ ತಲೆವೀಸದೆ ಉರ್ವರಾ ಶ್ರೀಯನಿದಾಗದೆನ್ನದೆ, ಒಳಕೊಳ್ ಪರಮೋತೃವದಿಂ ಗುಣಾರ್ಣವಾ
ಎಂದು ಹೇಳಿ ಅವನನ್ನು ಪಟ್ಟಾಭಿಷೇಕಕ್ಕೆ ಒಡಂಬಡಿಸುವರು. ಅದರೊಡನೆ ಸುಭದ್ರೆಗೆ ಮಹಾದೇವಿಪಟ್ಟವಾಗುವುದು. ಇದಕ್ಕೂ ಪಂಪನಿಗೆ ಸಾಕಷ್ಟು ಆಧಾರಗಳಿವೆ. ಅರಿಕೇಸರಿಯ ಹೆಂಡತಿಯಾದ ರೇವಕನಿರ್ಮಡಿಯೆಂಬ ಲೋಕಾಂಬಿಕೆಯು ಸುಭದ್ರೆಯಂತೆಯೇ ಯದುವಂಶಕ್ಕೆ ಸೇರಿದವಳು. ಅರಿಕೇಸರಿಯೂ ಅರ್ಜುನನಂತೆಯೇ ಲೋಕಾಂಬಿಕೆಯನ್ನು ಅವರ ಬಂಧುಗಳ ಇಷ್ಟಕ್ಕೆ ವಿರೋಧವಾಗಿ ಗುಪ್ತವಾಗಿ ಹರಣಮಾಡಿಕೊಂಡು ಬಂದು 'ಪ್ರಿಯಗಳ್ಳ'ನೆಂಬ ಬಿರುದನ್ನು ಪಡೆದಿರಬಹುದು. ಅರಿಕೇಸರಿಗೂ ಲೋಕಾಂಬಿಕೆಯ ಅಣ್ಣನಾದ ಇಂದ್ರನಿಗೂ ಇದ್ದ ವೈಷಮ್ಯವೂ ಅರ್ಜುನ ಬಲರಾಮನ ವೈಮನಸ್ಯದ ಹೋಲಿಕೆಯನ್ನು ಪಡೆದಿರಬಹುದು. ಆದರೂ ಅಖಂಡಭಾರತಕಥಾದೃಷ್ಟಿಯಿಂದ ಸುಭದ್ರಾಮಹಾದೇವಿಯ ಪಟ್ಟಾಭಿಷೇಕ ಅಷ್ಟು ಉಚಿತವಾಗಿ ಕಾಣುವುದಿಲ್ಲ. ಮೊದಲಿನಿಂದಲೂ ವಿಕ್ರಮಾರ್ಜುನನ ಪ್ರೀತಿಗೆ ಪಾತ್ರಳಾಗಿ ಸರ್ವದಾ ಅವನೊಡನಿದ್ದು ವಸ್ತ್ರಾಪಹರಣ ಕೇಶಾಪಕರ್ಷಣಗಳಿಗೆ ಸಿಕ್ಕಿ ಕಾಡುಮೇಡುಗಳಲ್ಲಿ ಅಲೆದು ಅಜ್ಞಾತವಾಸದಲ್ಲಿ ಪರರ ಸೇವೆಯಲ್ಲಿದ್ದು ಪಡಬಾರದ ಕಷ್ಟಪಟ್ಟು ಮಹಾಭಾರತಕ್ಕೆ ಆದಿಶಕ್ತಿಯೂ ಕುರುಕುಲಜೀವಾಕರ್ಷಣಕಾರಣಳೂ ಆಗಿದ್ದ ಬ್ರೌಪದಿಯನ್ನು ಬಿಟ್ಟು