________________
೨೬೨ / ಪಂಪಭಾರತಂ
ಚಂ।।
ಅಸಿಯಳನೊಲ್ಲು ಮೊಲ್ಲನಣಮನ್ನದ ರೂಪ ನೋಡಿ ಕೂಡಲಾ ಟಿಸಿ ಪರಿದೆಯೇ ಪತ್ತಿದಲರ್ಗಳನೇನುಮನನ್ನದಂತುವೇ | ಕ್ಷಿಸಿ ಮನಮೆಲ್ಲಮಂ ಕವರ್ದವಂ ತನುವಂ ಬಡಮಾಡಿ ಕಾಡಿ ದಂ ಡಿಸಿದಪನಂಗಜನನ ಕವರ್ತೆಯ ದಂಡದ ಪಾಂಗಿದೆಂತು
||
ಚಂ||
೧೩
ವll ಎಂದು ನಂದನವನೋಪಕಂಠಂಗಳೊಳನಂಗಶರವಶನಾಗಿ ತೊಟ್ಟು ನೋಡುತ್ತುಂ ತನ್ನ ಮನದೊಳಿಂತೆಂದು ಬಗೆಗುಂ
ಉರಿವರ್ದಯಾನ್ ಚಿಂತಿಪ ಮನಂ ಗುಡಿಗಟ್ಟೆ ಮರಲ್ಲು ನೋಡುವ ಚರಿಯೊಳೆ ಬೆಚ್ಚ ಕಣಲರ್ಗೆ ಸಂತಸದಾಗರಮಾಗೆ ಬೇಟದೊಳ್ | ಬಿರಿವೊಡಲೊಯ್ಯನಂಕುರಿಸೆ ಸೈಪಿನೊಳಿಂತನಗೀಗಳೀ ವನಾಂ ತರದೊಳ ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ || ೧೪
ವ|| ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಮೊಗಸಿ ಪಲರ ಪಲವುಂ ತಂದ ಬೇಟದ ಪಡೆಮಾತುಗಳು ಕೇಳಲ್ಲಿಯಾರಾನುಮಮ್ಮಂದಿಗರಿರ್ದರಕ್ಕುಮೆನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರ ಭೋಂಕನೆ ಕಂಡು
ಆ ಬಳ್ಳಿಯೊಡನೆ ಹುಚ್ಚು ಮಾತನಾಡಿ ಬರುತ್ತಿರಲು ಕಾಮದೇವನು ಸಿಹಿಮಾವಿನ ಹೂವುಗಳನ್ನು ಬಾಣಗಳನ್ನಾಗಿಯೂ ಅದರ ಬಲಿತ ಹೀಚುಗಳನ್ನು ಮಣ್ಣಿನುಂಡೆಯ ನ್ನಾಗಿಯೂ ಮಾಡಿ ಅವನನ್ನು ಹೊಡೆದು ಕಾಡಿದನು. ೧೩. ಕೃಶಾಂಗಿಯಾದ ಸುಭದ್ರೆಯನ್ನು ಇವನು ಪ್ರೀತಿಸುತ್ತಾನೆಯೇ ಇಲ್ಲವೇ ಎಂಬುದೇನನ್ನೂ ಸ್ವಲ್ಪವೂ ಯೋಚಿಸದೇ ರೂಪವನ್ನೇ ನೋಡಿ ಸೇರಿಸಲು ಆಶೆಪಟ್ಟು ಓಡಿಬಂದು ಅಂಟಿಕೊಂಡಿ ರುವ ಕಣ್ಣುಗಳನ್ನೂ ಏನೂ ಹೇಳದೆ ಉಪೇಕ್ಷಿಸಿ ಮನ್ಮಥನು ಮನಸ್ಸೆಲ್ಲವನ್ನೂ ಸೂರೆಮಾಡುತ್ತಾನೆ. ಶರೀರವನ್ನು ಕೃಶವನ್ನಾಗಿ ಮಾಡಿ ಕಾಡಿ ಶಿಕ್ಷಿಸುತ್ತಾನೆ. ಮನ್ಮಥನ ಈ ಸೂರೆಯ ಈ ಶಿಕ್ಷೆಯ ರೀತಿ ಅದೆಂತಹುದೊ! ವ|| ಎಂದು ನಂದನವನದ ಸಮೀಪ ಪ್ರದೇಶಗಳಲ್ಲಿ ಮನ್ಮಥನಿಗೆ ಅಧೀನನಾಗಿ ಸುತ್ತಿ ತೋಳಲಿ ನೋಡುತ್ತ ತನ್ನ ಮನಸ್ಸಿನಲ್ಲಿ ಹೀಗೆಂದು ಯೋಚಿಸಿದನು ೧೪, ಉರಿಯುತ್ತಿರುವ ನನ್ನ ಎದೆಯು ಸಮಾಧಾನಗೊಳ್ಳುವ ಹಾಗೆ, ಚಿಂತಿಸುತ್ತಿರುವ ನನ್ನ ಮನಸ್ಸು ಉತ್ಸಾಹಗೊಳ್ಳುವ ಹಾಗೆ, ಪುನಃ ನೋಡಬೇಕೆಂಬ ಆಶ್ಚರ್ಯದಿಂದಲೇ ಮುಚ್ಚಿಕೊಂಡಿರುವ ನನ್ನ ಕಣ್ಣಿಗೆ ಸಂತೋಷಸ್ಥಾನವಾಗುವ ಹಾಗೆ ವಿರಹದಿಂದ ಬಿರಿಯುತ್ತಿರುವ ಶರೀರವು ಇದ್ದಕ್ಕಿದ್ದ ಹಾಗೆ, ರೋಮಾಂಚಗೊಳ್ಳುವ ಹಾಗೆ ನನ್ನ ಅದೃಷ್ಟದಿಂದ ಹೀಗೆ ಇಲ್ಲಿಯೇ ನನ್ನ ಮನೋರಥಕ್ಕೆ ಜನ್ಮಭೂಮಿಯಾದ ಸುಭದ್ರೆಯನ್ನು ಕಾಣಲು ಸಾಧ್ಯವಾಗುತ್ತದೆಯೇ ? ವll ಎಂಬುದಾಗಿ ಯೋಚಿಸುತ್ತ ಆಕೆ ಇದ್ದ ಮಾಧವೀಮಂಟಪದ ಹತ್ತಿರಕ್ಕೆ ಬಂದು ಅಲ್ಲಿ ಅದೇತೆರನಾದ ವಿರಹವಾರ್ತೆಯನ್ನು ಕೇಳಿ ನಮ್ಮಂತಹವರೂ ಇಲ್ಲಿ ಯಾರಾದರೂ ಇದ್ದಿರಬಹುದು ಎನ್ನುತ್ತ ಬರುತ್ತಿರುವ ಅರ್ಜುನನನ್ನು ಸುಭದ್ರೆಯು ಇದ್ದಕ್ಕಿದ್ದ ಹಾಗೆ