________________
೨೫೮/ ಪಂಪಭಾರತಂ
ವ|| ಅಂತು ನನೆಯ ಕೊನೆಯ ತಳಿರ ನಿಡೆದಳಿರ ಮುಗುಳ ಬಿರಿಮುಗುಳ ಮಿಡಿಯ ಕಿರುಮಿಡಿಯ ಬಲಿಡಿಗಳೊಳಗಿ ತುಲುಗಿದ ಬನಮಂ ಪೊಕ್ಕಲ್ಲಿಯುಂ ಮಯ್ಯನಾಟಿಸಲಾಗಿದೆ ಪೂತ ಭೂತಲತೆಗಳೊಳ್ ತಳೊಯ್ದ ಪೊಸ ಮುತ್ತಿನ ಬಾಸಣಿಗೆಯೊಳ್ ಬಾಸಣಿಸಿದ ಬಿರಿ ಮುಗುಳಳೊಳ್ ತುಲುಗಿದದಿರ್ಮುತ್ತೆಯ ಸುತ್ತಿನೊಳೆಸೆದುಪಾಶ್ರಯಂಬಡೆದ ಸಾಂದ್ರ ಚಂದ್ರಕಾಂತದ ಶಿಲೆಯನೊಳಗುಮಾಡಿ
ಮ||
ಇದಿರೊಳ್ ಕಟ್ಟಿದ ತೋರಣಂ ನಿಂದಳಿರ್ ಪೂಗೊಂಚಲಂದೆತ್ತಮ ತಿದ ಪೂಮಾಲೆ ಪರಾಗ ರಾಗಮುದಿತಾಶಾ ಭಾ ಸಮುದ್ರನವೂ | ನದ ಭಂಗಧ್ವನಿ ಮಂಗಳಧ್ವನಿಯೆನಲ್ ಸಾಲ್ವನ್ನೆಗಂ ತಾನೆ ತ ಕುದು ಕಾಮಂಗೆ ವಿವಾಹಮಂಟಪಮೆನಲ್ಕಾ ಮಾಧವೀಮಂಟಪಂ ||
と
ವ|| ಆ ಮಾಧವೀ ಲತಾಮಂಟಪಮಂ ಕಾಮನ ಡಾಮರಕ್ಕಳ್ಳಿ ವನದುರ್ಗಂಬುಗುವಂತ ಪೊಕ್ಕದಳಗೆ ಕಪ್ಪುರವಳುಕಿನ ಜಗಲಿಯನಗಲಿತಾಗಿ ಸಮದು ಚಂದನದಳದಳಿರ್ಗಳಂ `ಪಾಸಿ ಮಲ್ಲಿಗೆಯಲರ್ಗಳಂ ಪೂವಾಸಿ ಮೃಣಾಳನಾಳದೊಳ್ ಸಮದ ಸರಿಗೆಗಂಕಣಂಗಳುಮಂ ಯವ ಕಳಿಕೆಗಳೊಳ್ ಸಮದ ಕಟಿಸೂತ್ರಮುಮಂ ಸಾರ ಕರ್ಪೂರದೊಳ್ ವಿರಚಿಸಿದ ಹಾರಮುಮಂ
ಹೊರಳಾಡಿ ಅಲ್ಲಿ ಸುರಿಯುವ ಪರಾಗದಿಂದ ಲೇಪಿಸಲ್ಪಟ್ಟು ಹಾರಾಡುತ್ತಿರುವ ದುಂಬಿಯ ಸಮೂಹದ ಪರಿವಾರವನ್ನು ಕೂಡ ಮದನಾಗ್ನಿಯ ಕಿಡಿಗಳೆಂದೇ (ಸುಭದ್ರೆಯು) ಭಾವಿಸಿದಳು. ವ|| ಹಾಗೆ ಹೂವಿನ, ರೆಂಬೆಗಳ, ಚಿಗುರಿನ, ನಿರಿಯಾಗಿರುವ ಚಿಗುರುಗಳ, ಭಾರದಿಂದ ಬಗ್ಗಿ ಕಿಕ್ಕಿರಿದ ವನವನ್ನು ಪ್ರವೇಶಿಸಿ ಅಲ್ಲಿಯೂ ಶರೀರತಾಪವನ್ನು ಆರಿಸಲಾರದೆ ಹೂವನ್ನು ಬಿಟ್ಟಿರುವ ಮಾವಿನ ಬಳ್ಳಿಗಳಿಗೆ ತಗುಲಿಸಿದ ಹೊಸ ಮುತ್ತಿನ ಹೊದಿಕೆಯಲ್ಲಿ ಬಿರಿದ ಮೊಗ್ಗುಗಳಲ್ಲಿ ಸೇರಿಕೊಂಡಿರುವ ಅದಿರ್ಮುತ್ತೆಯ ಹೂವಿನ ಬಳಸಿನಲ್ಲಿ ಪೂರ್ಣವಾದ ಆಶ್ರಯವನ್ನು ಪಡೆದ ಒತ್ತಾಗಿರುವ ಚಂದ್ರಕಾಂತ ಶಿಲೆಯಿಂದ ಕೂಡಿದ ಒಂದು ಮಾಧವೀ ಮಂಟಪವನ್ನು ಕಂಡಳು ೬, ಇದಿರಿನಲ್ಲಿ ಕಟ್ಟಿದ ತೋರಣದಂತೆ ಚಿಗುರು ಕಾಣುತ್ತಿರಲು ಹೂಗೊಂಚಲು, ಎಲ್ಲೆಲ್ಲಿಯೂ ಎತ್ತಿ ಕಟ್ಟಿದ ಹೂವಿನ ಮಾಲೆಯಂತಿರಲು ಹೂವಿನ ಪರಾಗದ ಕೆಂಪು ರಮ್ಯವಾಗಿರುವ ದಿಕ್ಕಿನ ಕಾಂತಿ, ಹಾಗಿರಲು ಮಧುಮತ್ತವಾದ ದುಂಬಿಗಳ ಧ್ವನಿಯೇ ಮಂಗಳವಾದ್ಯ ಎನ್ನುವಂತೆ ಆ ಮಾಧವೀ ಮಂಟಪವು ಇದೇ ಮದನನ ವಿವಾಹ ಮಂಟಪವಾಗುವುದಕ್ಕೆ ಯೋಗ್ಯವಾದುದು ಎನ್ನುವಂತೆ ಪ್ರಕಾಶಮಾನವಾಗಿದ್ದಿತು. ವ|| ಕಾಮನ ಕೋಟಲೆಗೆ ಹೆದರಿ ಕಾಡಿನ ಕೋಟೆಯನ್ನು ಪ್ರವೇಶಿಸುವ ಹಾಗೆ ಆ ಮಾಧವೀ ಲತಾ ಮಂಟಪವನ್ನು ಪ್ರವೇಶಿಸಿ ಅದರಲ್ಲಿ ಕರ್ಪೂರದ ಹಳುಕಿನ ಜಗುಲಿಯನ್ನು ವಿಸ್ತಾರವಾಗಿ ನಿರ್ಮಿಸಿದಳು. ಶ್ರೀಗಂಧದ ಎಳೆಯ ಚಿಗುರುಗಳನ್ನು ಹಾಸಿದಳು. ಮಲ್ಲಿಗೆಯ ಹೂವುಗಳನ್ನು ಹರಡಿದಳು. ತಾವರೆಯ ದಂಟಿನಿಂದ ಮಾಡಿದ ತಂತಿಬಳೆಗಳನ್ನೂ ಗೋದುವೆಯ ಮೊಳಕೆಗಳಿಂದ ಮಾಡಿದ ಉಡಿದಾರವನ್ನೂ ಕರ್ಪೂರದ ತಿರುಳಿನಿಂದ ರಚಿಸಿದ ಹಾರವನ್ನೂ ಕನ್ನೈದಿಲೆಯ