________________
ಚತುರ್ಥಾಶ್ವಾಸಂ | ೨೫೧ ಚಂ ಮುಳಿಸದಂಜಿ ಬಾಯಳೆದಿತ್ತು ಮನಂಗೊಳೆಯುಂ ಕನತ್ಕುದ
ರ್ಕಳವಿಯುಮಂತುಮಿಲ್ಲ ಸನಿಯನ್ನಳೆ ಕುಂಟಣಿ ಪೋದ ಮಾರಿಯ || ಇಳೆ ಮನೆದೋಯ್ತು ಸೀರ್ಕರಡಿಯನ್ನಳೆ ನಾದುನಿಯೊಲ್ಕುಮೊಲ್ಲದ ಇಳೆ ಗಡ ಸೂಳೆಯೆಂದೊಡಿನಿತಂ ತಲೆವೇಸಜನೆಂತು ನೀಗುವೆಂ || ೯೮
ವ|| ಎಂದು ನುಡಿದು ಗೆಂಟಾದಂ ಮತ್ತೊರ್ವ ಬೇಟಕಾರ್ತಿ ತಾಯ ಕಣ್ಣಂ ಬಂಚಿಸಿ ತನ್ನ ಮೋಪಿನಾಕೆಯ ಮನೆಗೆ ಪೋಪ ಬೇಟದಾಣನಂ ಪಿಡಿದುಉll ತಪ್ಪುದು ಮಾತು ದೂದವರ ಕೆಯ್ಯೋಳೆ ಕಾಡಿದಟ್ಟ ಕಣ್ಣ ನೀರ್
ತಪ್ಪುವು ನಿಚ್ಚಮಚಿಗಡೊಳಲ್ಕು ಕರಂ ಬಿಸುಸುಯ್ ಸುಯ್ ಸುಯ್ | ತಪುದು ತಪದನ ತನು ಬೇಟದ ಕಾಟದೊಳಿಂತು ಕಂಡುಮಿ
(ಪೊಡಮಾಸೆವಾತನೆನಗೋಪನೆ ನೀಂ ದಯೆಗೆಯ್ಯಲಾಗದೇ | ೯೯
ವ|| ಎಂದು ಕರುಣಂಬಡೆ ನುಡಿದೊಡಗೊಂಡು ಪೋದಳ್ ಮತ್ತಮೊಂದೆಡೆ ಯೊಳೊರ್ವಳ ಕುಂಟಣಿಯುವರೋಧಕ್ಕೆ ಪಿರಿದೀವ ಮುದುಪನನುಟಿಯಲಂಜಿ ತನ್ನ ಬೇಸರ ತನ್ನ ಸಬ್ಬವದಾಕೆಗಿಂತೆಂದಳಚಂ ಕೊರಿಡೆ ಬೆಟ್ಟುಗಳ್ ಬಿರಿವುವುಣುವ ಲಾಳೆಯ ಲೋಳೆಗಳ ಪೊನ
ಊರಿವುವು ಕೆಮ್ಮಿ ಕುಮಿದೊಡೆ ತೋಳೊಳೆ ಜೀವ ವಿಯೋಗಮಪ್ಪುದಂ | ದಿರದೆರ್ದೆಗಪುದತ್ತಳಗಮಾ ನೆರಪಂ ನೆರೆವಂದು ಪೊಂಗಳಂ |
ಸುರಿವೊಡಮಾರೋ ಸೈರಿಸುವರಾತನ ಪಲಿವಾಯ ನಾತಮಂ | ೧೦೦ ೯೮. (ಅವಳ) ಕೋಪಕ್ಕೆ ಹೆದರಿ (ಅವಳ) ಅಭಿಪ್ರಾಯವನ್ನು ತಿಳಿದು ಕೊಟ್ಟು ಅವಳ ಮನಸ್ಸನ್ನು ವಶಪಡಿಸಿಕೊಂಡಿದ್ದರೂ ಅವಳು ರೇಗುವುದಕ್ಕೆ ಅಳತೆಯೂ ಅಂತ್ಯವೂ ಅಲ್ಲ. ತಲೆಹಿಡಿಕಿಯೂ ಶನಿಯಂತಹವಳೇ. ಮನೆಕೆಲಸ ಮಾಡುವ ದಾಸಿಯೂ ಮಾರಿಯಂತಹವಳೇ, ನಾದಿನಿಯು ಸೀರ್ಕರಡಿಯಂತಹವಳೇ. ಎಷ್ಟಾದರೂ ಸೂಳೆಯು ಒಲಿದೂ ಒಲ್ಲದಂತಿರುವವಳೆ ತಾನೆ! ಈ ತಲೆಬೇನೆಯನ್ನು ಹೇಗೆ ನೀಗಲಿ. ವ|| ಎಂದು ಹೇಳಿ ಮುಂದೆ ಹೋದನು. ಬೇರೊಬ್ಬ ಪ್ರಿಯಳು ತನ್ನ ತಾಯಿಯ ಕಣ್ಣನ್ನು ವಂಚಿಸಿ ತನ್ನ ಪ್ರಿಯಳ ಮನೆಗೆ ಹೋಗುತ್ತಿರುವ ತನ್ನ ಪ್ರೇಮದೊಡೆಯನನ್ನು ಹಿಡಿದುಕೊಂಡು ೯೯. ದೂದವಿಯರ ಕಯ್ಯಲ್ಲಿ ನಿನ್ನ ಕಾಲುಹಿಡಿದು ಕಳುಹಿಸಿದ ಮಾತುಗಳು ನಾಶವಾಗುತ್ತಿವೆ. (ನಿಷ್ಟಯೋಜಕವಾಗುತ್ತಿವೆ) ನಿತ್ಯವೂ ದುಃಖಪಟ್ಟು ಅಳುವುದರಿಂದ ಕಣ್ಣೀರು ವ್ಯರ್ಥವಾಗುತ್ತಿದೆ. ನಿಟ್ಟುಸಿರಿನ ಬಿಸಿಯುಸಿರು ಹಾಳಾಗುತ್ತಿದೆ. ನನ್ನ ಶರೀರವು ಬೇಟದ ಕಾಟದಿಂದ ಕ್ಷೀಣಿಸುತ್ತಿದೆ. ಇದನ್ನು ನೋಡಿಯೂ ಇನ್ನು ಮೇಲಾದರೂ ಆಶೆಯ ಮಾತನ್ನು ದಯೆಗೆಯ್ಯಬಾರದೇ ? ವ|| ಎಂದು ಕರುಣೆಯು ಬರುವ ಹಾಗೆ ಮಾತನಾಡಿ ಜೊತೆಯಲ್ಲಿ ಕರೆದುಕೊಂಡು ಹೋದಳು. ಬೇರೊಂದು ಕಡೆಯಲ್ಲಿ ಕುಂಟಣಿಯ ಬಲಾತ್ಕಾರಕ್ಕೆ ವಿಶೇಷ ಧನವನ್ನು ಕೊಡುವ ಮುದುಕನನ್ನು ಬಿಡಲು ಅಂಜಿ ತನ್ನ ಬೇಸರವನ್ನು ತನ್ನ ಪ್ರಿಯಸಖಿಗೆ ಹೀಗೆಂದಳು ೧೦೦. (ಆ ಮುದುಕನು) ಗೊರಕೆಹೊಡೆದರೆ ಬೆಟ್ಟಗಳೇ ಬಿರಿದು ಹೋಗುತ್ತವೆ. ಸುರಿಯುವ ಜೊಲ್ಲಿನ ಲೋಳೆಗಳು ಪ್ರವಾಹವಾಗಿ ಹರಿಯುತ್ತವೆ.