________________
೨೩೨) ಪಂಪಭಾರತಂ
ಕನ್ನೆತನಂಗೆಯ್ಕಲ್ ಬಗೆ ಗುನ್ನಾಣ್ ಮಿಗೆ ಮನಮುಮಿಟ್ಟುವರಿಯಲ್ ಬಗೆಗುಂ | ಕನ್ನಡಿಕುಂ ತನ್ನಳಿಪಂ ತನ್ನಲೆ ತಾನಿಂತು ಕನ್ನೆ ತಳವೆಳಗಾದಳ | ನುಡಿಯಿಸಿ ಕೇಳುಂ ಹರಿಗನ ಪಡೆಮಾತನೆ ಮಾತು ತಪೊಡಂ ಮತ್ತಮದಂ || ನುಡಿಯಿಸುಗುಂ ಮೊದಲಿಂದಾ ನುಡಿ ರ್ಪಪಡೆ ಮುಳಿದು ನೋಡುಗುಂ ಕಳದಿಯರಂ ||
ಉ)
ಅತಿ ಮರುಳಂತುಟಿ ಸೊರ್ಕಿನ ತೆಜದಂತುಟಿ ಮನಮೊಲ್ಕುದೆರ್ದೆಯುರಿವುದು ಮ | . ಹೈಆಗುವುದು ಪದವುದಾನಿದ ನಯನಿದೇಕೆಂದು ಕನ್ನೆ ತಳವೆಳಗಾದಳ್ | - ೫೭ ಆನೆಯನೇಜಿ ಸೌಷ್ಟವದ ಬರ್ಪರಿಕೇಸರಿಯೊಂದು ಗಾಡಿಯು ದ್ವಾನಿ ತಗುಳು ಕಣ್ಣೂಳೆ ತೋಲಲ್ಲೆರ್ದೆಯೊಳ್ ತಡಮಾಡ ಬೇಟದು || ದ್ವಾನಿಯನಾನೆ ಮನ್ಮಥ ಮಹೀಭುಜನೋವದೆ ತೋಡಿಕೊಟ್ಟುದೂಂ
ದಾನೆಯೆ ತನ್ನನಾನಗೊಲೆಗೊಂದಪುದೆಂದು ಲತಾಂಗಿ ಚರ್ಚಿದಳ್ || ೫೮ ಮll ಮನಮಾರಾಧಿತಹೋಮಭೂಮಿ ಪಶುಗಳ ಕಾಮಾತುರರ್ ಬಂದ ಮಾ
ವನಿತುಂ ಸ್ಥಾಪಿತ ಯೂಪಕೋಟಿ ಬಳವತ್ಕಾಮಾಗ್ನಿ ಹೋಮಾಗ್ನಿ ಚಂ | ದನ ಕರ್ಪೂರ ಮೃಣಾಳನಾಳಮೆ ಪೊದಲ್ಲಿದ್ದಂಗಳಿಂತಾಗ ತಾ
ನಿನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಟ್ಟಿಂಗಳೊಳ್ || ೫೯ ಸುಭದ್ರೆಯು ತನ್ನಲ್ಲಿಯೇ ತಬ್ಬಿಬ್ಬಾದಳು. ೫೬. ಅರ್ಜುನನ ವಿಷಯಕವಾದ ಮಾತನ್ನೇ (ಕೆಳದಿಯರಿಂದ) ಹೇಳಿಸಿ ಕೇಳುತ್ತಾಳೆ. ಆ ಮಾತು ನಿಂತುಹೋದರೆ ಪುನಃ ಆ ಮಾತನ್ನೇ ಮೊದಲಿನಿಂದಲೂ ನುಡಿಯಿಸುತ್ತಾಳೆ. ಅದೂ ನಿಂತುಹೋದರೆ ಸಖಿಯರನ್ನೂ ಕೋಪದಿಂದ ನೋಡುತ್ತಾಳೆ. ೫೭. ಬುದ್ಧಿಭ್ರಮಣೆಯಾಗುತ್ತದೆ. ಸೊಕ್ಕಿನಿಂದ ಮಯ್ ಮರೆದಂತಾಗುತ್ತದೆ. ಮನಸ್ಸು ಪ್ರೀತಿಸುತ್ತದೆ. ಎದೆಯುರಿಯುತ್ತದೆ. ಶರೀರವು (ಅವನ ಕಡೆಯೇ) ಬಾಗುತ್ತದೆ. (ಅವನನ್ನೇ) ಅಪೇಕ್ಷಿಸುತ್ತದೆ. ಇದೇಕೆಂದು ತಿಳಿಯಲಾರದೆ ಕನೈಯಾದ ಸುಭದ್ರೆಯು ತಳವೆಳಗಾದಳು. ೫೮. ಆನೆಯನ್ನು ಹತ್ತಿ ಸೊಗಸಾಗಿ ಬರುತ್ತಿರುವ ಅರ್ಜುನನ ಒಂದು ಸೌಂದರ್ಯಾತಿಶಯವು ತನ್ನನ್ನು (ಸುಭದ್ರೆಯನ್ನು ಹಿಂಬಾಲಿಸಿ ಕಣ್ಣಿನಲ್ಲಿ ಸುತ್ತಾಡಿ ಎದೆಯಲ್ಲಿ ಸ್ಥಿರವಾಗಿ ಪ್ರೇಮಾತಿಶಯವನ್ನುಂಟುಮಾಡಲು ಮನ್ಮಥನೆಂಬ ರಾಜನೇ ತನ್ನಲ್ಲಿ ಸ್ವಲ್ಪವೂ ದಾಕ್ಷಿಣ್ಯವಿಲ್ಲದೆ ತನ್ನ ಆನೆಯನ್ನು ಭೂಬಿಟ್ಟು ಅದರಿಂದ ತನ್ನನ್ನು ಕೊಲ್ಲಿಸುವಂತೆ ಕೊಲ್ಲಿಸುತ್ತಿದ್ದಾನೆ ಎಂದು ಲತಾಂಗಿಯಾದ ಸುಭದ್ರೆಯು ಹೆದರಿದಳು. ೫೯. ಮನಸ್ಸೇ ಪೂಜಿಸಲ್ಪಟ್ಟ ಯಜ್ಞಭೂಮಿ, ಕಾಮಪೀಡಿತರಾದವರೇ ಬಲಿಗಾಗಿರುವ ಪಶುಗಳು, ಫಲಿಸಿ ಬಂದಿರುವ ಮಾವಿನಮರಗಳೇ ನೆಟ್ಟಿರುವ ಬಲಿಗಂಬಗಳು, ಅತಿಶಯವಾದ