________________
೨೨೦) ಪಂಪಭಾರತಂ ಮlು ವಿನತಾಪುತ್ರನ ವಜ್ರತುಂಡಹತಿಗಂ ಮಯಾಂತು ಕಂಡಂಗಳು
ನಮಂಗಂಗಳನೊಡ್ಡಿಯೊಡ್ಡಿ ತನುವಂ ಕೋಟ್ಟಂತು ಜೀಮೂತವಾ | ಹನನೆಂಬಂಕದ ಚಾಗಿ ನಿಚ್ಚಟಕೆಯಿಂದೀ ಶೈಳದೊಳ್ ಶಂಖಚೂ ಡನನಾದಂದದೆ ಕಾದ ಪಂಪಸೆಯ ನಾಗಾನಂದಮಂ ಮಾಡಿದಂ || ೨೬
ವ| ಎಂದಭಿನವ ಜೀಮೂತವಾಹನಂ ಜೀಮೂತವಾಹನನ ಪರೋಪಕಾರದ ಬೀರದ ಪಂಪಂ ಮೆಚ್ಚುತ್ತುಂ ಬಂದು ಗೋಕರ್ಣನಾಥನಂ ಗೌರೀನಾಥನನವನಿ ಪವನ ಗಗನ ದಹನ: ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರಿಲೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ದಳಂ ಮುಗಿದುಹೃದ್ಧಿಗೆ ಪ್ರಚಂಡ ಲಯ ತಾಂಡವ ಕ್ಷುಭಿತಯಾಶು ಯಸ್ಯಾನಯಾ
ಸದಿಗ್ಗಳಯಯಾ ಭುವಾ ಸ ಗಿರಿ ಸಾಗರ ದ್ವಿಪಯಾ | ಕುಲಾಲ ಕರ ನಿರ್ಭರ ಭ್ರಮಿತ ಚಕ್ರಲೀಲಾಯಿತಂ
ಸ ಸರ್ವ ಜಗತಾಂ ಗುರುರ್ಗಿರಿಸುತಾಪತಿಃ ಪಾತು ನಃ | * . ೨೭ ವ|| ಎಂದು ಬಾಳೇಂದುಮಾಳಿಯಂ ಸ್ತುತಿಸಿಚಂl ಸೊಗಯಿಸಿ ಬಂದ ಮಾಮರನೆ ತನ್ನೆಲೆವಳ್ಳಿಯ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳೊಗಂ | ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಡಾವ ಬೆ ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್ || ೨೮
ಎತ್ತರವಾದ ಪರ್ವತವನ್ನು ನೋಡಿದನು: ೨೬. ವಿನತೆಯ ಮಗನಾದ ಗರುಡನ ವಜ್ರದಷ್ಟು ಕಠಿಣವಾದ ಪೆಟ್ಟಿಗೂ ಶರೀರವನ್ನೊಡ್ಡಿ ಮಾಂಸಖಂಡಗಳಿರುವವರೆಗೂ ಅವಯವಗಳನ್ನು ಚಾಚಿ ಶರೀರ ದಾನಮಾಡಿ ಪ್ರಸಿದ್ಧನಾದ ಜೀಮೂತವಾಹನನೆಂಬ ಪ್ರಖ್ಯಾತನಾದ ತ್ಯಾಗಿಯು ಮನಸ್ಸಿನ ನಿಶ್ಚಲತ್ವದಿಂದ ಶಂಖಚೂಡನೆಂಬುವವನನ್ನು ರಕ್ಷಿಸಿದ ಹಿರಿಮೆಯನ್ನು ಪ್ರಕಾಶಿಸಿ ನಾಗರಿಗೆ ಆನಂದವನ್ನುಂಟುಮಾಡಿದುದು ಈ ಬೆಟ್ಟದಲ್ಲಿಯೇ ವರ ಎಂದು ಅಭಿನವ ಜೀಮೂತವಾಹನನಾದ (ಅರ್ಜುನನು) ಅರಿಕೇಸರಿಯು ಜೀಮೂತವಾಹನನ ಪರೋಪಕಾರದ, ವೀರ್ಯದ ಆಧಿಕ್ಯವನ್ನು ಮೆಚುತ ಬಂದು ಗೌರೀನಾಥನೂ ಭೂಮಿ, ವಾಯು, ಆಕಾಶ, ಅಗ್ನಿ, ಸೂರ್ಯ, ಅಪ್, ಚಂದ್ರ, ಯಜಮಾನ ಎಂಬು ಅಷ್ಟಮೂರ್ತಿಯುತವೂ ಮೂರು ಲೋಕ ಗಳಿಂದ ಸ್ತೋತ್ರಮಾಡಲ್ಪಡುವ ಕೀರ್ತಿಯುಳ್ಳವನೂ ಆದ ಗೋಕರ್ಣನಾಥನನ್ನು ಕಂಡು ಕೈ ಮುಗಿದನು. ೨೭. ಯಾರ ಅತಿವೇಗವಾದ ತಾಳಗತಿಯನ್ನುಳ್ಳ ತಾಂಡವ ನೃತ್ಯದಿಂದ ದಿಂಡಲಗಳಿಂದಲೂ ಪರ್ವತಗಳಿಂದಲೂ ಸಮುದ್ರಗಳಿಂದಲೂ ದ್ವೀಪಗಳಿಂದಲೂ ಕೂಡಿದ ಭೂಮಿಯು ತಿರುಗಿಸಲ್ಪಟ್ಟು ಕುಂಬಾರನ ಕೈ ಚಕ್ರದಂತೆ ವೇಗವಾಗಿ ಸುತ್ತುವ ಲೀಲೆಗೆ ಒಳಗಾಯಿತೋ ಆ ಸರ್ವಜಗತ್ಪತಿಯೂ ಪಾರ್ವತಿ ರಮಣನೂ ಆದ ಶಿವನು ನಮ್ಮನ್ನು ಕಾಪಾಡಲಿ ಎಂದು ವll (ಬಾಲಚಂದ್ರನನ್ನು ತಲೆಯಲ್ಲಿ ಉಳು ಈಶ್ವರನನ್ನು ಪ್ರಾರ್ಥಿಸಿ ಮುಂದೆ ಬನವಾಸಿಯ ಸೊಬಗನ್ನು ಸವಿಯಲಾರಂಭಿಸಿ ದನು. ೨೮. ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ