________________
೨೧೮ / ಪಂಪಭಾರತಂ ಮll ಬಳೆಯಲಣಿದುದಿಲ್ಲ ವಿಂಧ್ಯಗಿರಿಯುಂ ತನ್ನಾಜ್ಞೆಯಿಂದೊರ್ಮೆ ಮು
ಕುಳಿಸಲ್ಕಂಬುಧಿ ಸಾಲ್ಕುದಿಲ್ಲ ಜಗಮಂ ತಿಂದಿರ್ದ ವಾತಾಪಿ ಪೊ | ಕಳುರ್ವಾತೋದರ ವಹಿಯಿಂ ಪೊಅಮಡಲ್ ತಾನಾರ್ತನಿಲ್ಲಟ್ಟುದಿ
ಲೈಳೆ ತೇಂಕಿರ್ದುದು ಭಾರದಿಂ ಬಡಗೆನಲ್ ಪಂಪಾರ್ಗಗಂಬರಂ || ೨೦
ವ|| ಎಂದಗಸ್ವತೀರ್ಥ ಸೌಭದ್ರ ಪೌಲೋಮ ಕಾಂಭೋಜ ಭಾರದ್ವಾಜಮೆಂಬಯ್ದು ತೀಥರ್ಂಗಳೊಳ್ ವರ್ಧಮಾನನೆಂಬ ಋಷಿಯ ಶಾಪದೊಳುಗ್ರಗ್ರಾಹ ಸ್ವರೂಪದೂಳಿರ್ದಚರಣೆ ಯರುಮಂ ವಿಶಾಪೆಯರ್ ಮಾಡಿ ಮಳಯಪರ್ವತಮನೆಯ್ದವಂದುಚಂil ಇದು ಮಳಯಾಚಳಂ ಮಳಯಜಂ ಮಳಯಾನಿಳನೆಂದು ಪಂಪುವ
ತುದು ಸಿರಿಕಂಡಮುಂ ಪದೆದು ತೀಡುವ ಗಾಳಿಯುಮಿಲ್ಲಿ ಪುಟ್ಟ ಪೋ | ಗದು ಪೊಸ ಸುಗ್ಗಿ ಮೂಗುವಡದಿಲ್ಲಿಯ ಕೋಗಿಲೆ ಬಂದಮಾವು ಬೀ
ಯದು ಕುಸುಮಾಸ್ತನಾಜ್ಞೆ ತವದಲ್ಲಿಯುಮಿಲ್ಲಿಯ ನಂದನಂಗಳೊಳ್ || ೨೧ ಮ! ಇದುಭ್ರಂಕಷ ಕೂಟ ಕೋಟಗಳೊಳಿರ್ದಂಭೋಜ ಷಂಡಂಗಳಂ
ಪುದಿದುಷ್ಠಾಂಶುವಿನೂರ್ಧ್ವಗಾಂಶುನಿವಹಂ ಮೆಯ್ಕಟ್ಟಲರ್ಚುತ್ತುಮಿ | ರ್ಪುದು ಮಾದ್ಯದ್ಭಜ ಗಂಡ ಭಿತ್ತಿ ಕಷಣಪ್ರೋದ್ದೇದದಿಂ ಸಾರ್ದು ಬಂ ದಿದಿರೊಳ್ ಕೂಡುವುದಿಲ್ಲಿ ಚಂದನ ರಸಂ ಕೆಂಬೊನ್ನ ಟಂಕಂಗಳೊಳ್ | ೨೨
೨೦. ವಿಂಧ್ಯಪರ್ವತವು ತನ್ನಾಜ್ಞೆಯನ್ನು ಮೀರಿ ಬೆಳೆಯಲಾಗಲಿಲ್ಲ, ಸಮುದ್ರವು ತನಗೆ ಬಾಯುಕ್ಕಳಿಸಲೂ ಸಾಕಾಗಲಿಲ್ಲ. ಜಗತ್ತನ್ನೇ ನುಂಗಿದ ವಾತಾಪಿಯೆಂಬ ರಾಕ್ಷಸನು ಪ್ರವೇಶಮಾಡಿ ಉರಿಯುತ್ತಿದ್ದ ತನ್ನ ಜಠರಾಗ್ನಿಯಿಂದ ಹೊರಟುಬರಲು ಸಮರ್ಥನಾಗಲಿಲ್ಲ. ಭೂಮಿಯು ತನ್ನ ಭಾರಕ್ಕೆ ಮುಳುಗದೆ ಉತ್ತರಕ್ಕೆ ಸರಿಯಿತು ಎಂಬ (ಮಹಿಮೆ) ವೈಭಪವು ಅಗಸ್ಯಋಷಿಗಳಿಗಲ್ಲದೆ ಮತ್ತಾರಿಗುಂಟು ವll ಎಂದು ಆಲೋಚಿಸುತ್ತ ಅಗಸ್ಯತೀರ್ಥ, ಸೌಭದ್ರ, ಪೌಳೋಮ, ಕಾಂಭೋಜ, ಭಾರದ್ವಾಜವೆಂಬ ಅಯ್ದು ತೀರ್ಥಗಳಲ್ಲಿ ಸಂಚರಿಸಿ ವರ್ಧಮಾನನೆಂಬ ಋಷಿಯ ಶಾಪದಿಂದ ಭಯಂಕರವಾದ ಮೊಸಳೆಯ ಆಕಾರದಲ್ಲಿದ್ದ ಅಪ್ಪರಸ್ತ್ರೀಯರನ್ನು ಶಾಪ ವಿಮೋಚಿತರನ್ನಾಗಿ ಮಾಡಿ ಮಳಯಪರ್ವತಕ್ಕೆ ಬಂದು ಸೇರಿದನು. ೨೧. ಇದು ಮಲಯಪರ್ವತ, ಶ್ರೀಗಂಧಕ್ಕೆ ಮಲಯಜನೆಂದು ತಂಪಾದ ಗಾಳಿಗೆ ಮಲಯಾನಿಲ ಎಂದೂ ಹೆಸರು ಬಂದುದು ಇಲ್ಲಿ ಹುಟ್ಟಿದುದರಿಂದಲೇ, ವಸಂತಋತುವೂ ಇಲ್ಲಿ ಹುಟ್ಟಿ ಮತ್ತೆಲ್ಲಿಗೂ ಹೋಗುವುದಿಲ್ಲ. ಇಲ್ಲಿಯ ಕೋಗಿಲೆಯು ಮೂಕತೆಯನ್ನು ಪಡೆಯುವುದಿಲ್ಲ, ಫಲ ಬಿಟ್ಟ ಮಾವು ಎಂದೂ ಮುನಿದುಹೋಗುವುದಿಲ್ಲ. ಇಲ್ಲಿಯ ನಂದನವನಗಳಲ್ಲಿ ಮನ್ಮಥನ ಆಜ್ಞೆ ಎಂದೂ ತಪ್ಪುವುದಿಲ್ಲ. ೨೨. ಇದರ ಅನೇಕ ಆಕಾಶಗಾಮಿಯಾದ ಶಿಖರಗಳ ಮೇಲಿರುವ ತಾವರೆಗಳ ಸಮೂಹವನ್ನು ಸೂರ್ಯನ ಊರ್ಧ್ವಗಾಮಿಯಾದ ಉಷ್ಣ ಕಿರಣಗಳು ಪ್ರವೇಶಿಸಿ ಅರಳಿಸುತ್ತವೆ. ಮದ್ದಾನೆಗಳ ಗಂಡಸ್ಥಳವೆಂಬ ಗೋಡೆಗಳ ಉಜ್ಜುವಿಕೆಯಿಂದ ಮುರಿದು (ಸ್ರವಿಸುತ್ತಿರುವ) ಶ್ರೀಗಂಧದ ರಸವು ಹರಿದುಬಂದು ಇಲ್ಲಿಯ ಅಪರಂಜಿಯ ಬಣ್ಣದ ಪರ್ವತದ ತಪ್ಪಲುಗಳನ್ನು