________________
ಚತುರ್ಥಾಶ್ವಾಸಂ | ೨೧೩
ಸೂಸುವ ಶೇಷಾಕೃತಮಂ ಸಮಂತು ಪಿರಿದುಂ ಮನ ಸಂತಸದಿಂದಮಾಂತು ಕರುಮಾಡಮನಾದರದಿಂದಮೇಲೆ ಕೆಲದೊಳಾಡಂಗಳನದು ತೋಟ ಮಣಿ ಕನಕ ರಜತ ವಸ್ತುಗಳನಿತ್ತು ಬೇಡಿದ ನಾಡುಗಳನವಯವದಿಂದಮಿತ್ತು ಕರಿ ತುರಗ ಬಲಂಗ ಪರ್ಚುವಂತು ಮಲೆಯುಂ ಮಂಡಲಮುಂ ಬೆರ್ಚುವಂತು ಕೊಂಡಾಡುವ ನಾಲ್ವರುಮನುಜರೊಳಗೆ ನೆಗರಿಗನ ತೇಜಮೆ ತೊಳಗಿ ಬೆಳಗೆ ನೆಲನಂ ಪ್ರತಿಪಾಲಿಸಿ ಧರ್ಮಸೂನು ಸೂಖಮಿರ್ದಂ ರಿಪುಬಳ ತಿಮಿರಭಾನು || ೧೦
ವ|| ಅಂತಜಾತಶತ್ರು ಶತ್ರುಪಕ್ಷ ಕ್ಷಯಕರ ಕರವಾಳ ದುಷ್ಟಾಭೀಳ ಭುಜಂಗಮೂರ್ತಿ ವಿಶ್ವ ವಿಶ್ವಂಭರಾಧಾರಮಪ್ಪರಿಕೇಸರಿಯ ತೋಳ್ವಲದೊಳ್ ರಾಜ್ಯಂಗೆಯ್ಯುತಿರ್ಪನ್ನೆಗಂ ವಿಕ್ರಾಂತತುಂಗ ನೊಂದೆಡೆಯೊಳಿರ್ಪಿರವಿಂಗುಮ್ಮಳಿಸಿ ದಿಗಂಗನಾ ಮುಖಾವಲೋಕನಂಗೆಯ್ಯಲ್ ಬಗೆದು
ಮ|| || ಸೆಣಸುಳ್ಳುದ ತರಂ ತಳಿಯದ ಚತುರಂಭೋಧಿ ಪರ್ಯಂತಮಂ ಧಾ ರಿಣಿಯಂ ತಾಂ ಪೋಗಿ ಬಾಯ್ಕಳಿಸದೆ ಮುನಿಜನಕ್ಕಿಷ್ಟಿ ವಿಘ್ನಂಗಳಂ ದಾ | ರುಣ ದೈತ್ಯ ಮಾಡಿ ನೀಡಿಲ್ಲದೆ ಸಲೆ ಚಲದಾಟಂದು ಕೊಂದಿಕ್ಕದೊರ್ವಂ ಗುಣಮುಂಟೆಂದುಂಡು ಪಟ್ಟರ್ಪನನಣಮೆ ನಿರುದ್ಯೋಗಿಯಂ ಭೂಪನೆಂಬರ್ II ೧೧
ವ' ಎಂದು ವಿಜಿಗೀಷುವತ್ರೋದ್ಯುಕ್ತನಾಗಲ್ ಬಗೆದು
ಉಪ್ಪರಿಗೆಯನ್ನು ಆದರದಿಂದ ಹತ್ತಿ ಸುಖವಾಗಿ ನೆಲಸಿದರು. ಪಕ್ಕದಲ್ಲಿದ್ದ ಮಾಡಗಳನ್ನು ಪರಿಚಯಮಾಡಿಕೊಂಡರು. ಅರ್ಥಿಗಳು ಬೇಡಿದ ಚಿನ್ನ, ಬೆಳ್ಳಿ, ರತ್ನಖಚಿತವಾದ ವಸ್ತುಗಳನ್ನೂ ರಾಜ್ಯಗಳನ್ನೂ ಶ್ರಮವಿಲ್ಲದೆ ದಾನಮಾಡಿದರು. ಆನೆ, ಕುದುರೆ, ಕಾಲಾಳಿನ ಬಲಗಳನ್ನೂ ಹೆಚ್ಚಿಸಿಕೊಂಡರು. ಬೆಟ್ಟಗುಡ್ಡಗಳೂ ಸಾಮಂತಮಂಡಲವೂ ಹೆದರುವಂತೆ ಸ್ತೋತ್ರಮಾಡಲ್ಪಟ್ಟರು. ನಾಲ್ಕು ಜನರಲ್ಲಿ ಅರ್ಜನನ ತೇಜಸ್ಸೇ ತೊಳಗಿ ಬೆಳಗುತ್ತಿರಲು ಶತ್ರುಸೈನ್ಯವೆಂಬ ಕತ್ತಲಿಗೆ ಸೂರ್ಯನೋಪಾದಿಯಲ್ಲಿದ್ದ ಧರ್ಮರಾಯನು ರಾಜ್ಯವನ್ನು ಸುಖವಾಗಿ ಪರಿಪಾಲಿಸುತ್ತಿದ್ದನು. ವ! ಶತ್ರುಗಳೇ ಹುಟ್ಟಿರದ ಧರ್ಮರಾಯನು ಶತ್ರುಸೈನ್ಯವನ್ನು ನಾಶಪಡಿಸುವ ಕತ್ತಿಯೆಂಬ ಹಲ್ಲಿನಿಂದ ಭಯಂಕರವಾದ ಸರ್ಪದಂತಿರುವ, ಸಮಸ್ತಭೂಮಿಗೂ ಆಶ್ರಯವಾಗಿರುವ ಅರಿಕೇಸರಿಯ ಬಾಹುಬಲದ ಆಶ್ರಯದಿಂದ ರಾಜ್ಯಭಾರ ಮಾಡುತ್ತಿರಲು ವಿಕ್ರಾಂತತುಂಗನಾದ ಅರ್ಜುನನು ಒಂದೇ ಸ್ಥಳದಲ್ಲಿರುವ ಸ್ಥಿತಿಗೆ ಜುಗುಪ್ಪೆಪಟ್ಟು ಜೈತ್ರಯಾತ್ರೆಯನ್ನು ಮಾಡಲು ಯೋಚಿಸಿದನು. ೧೧. ಅಸೂಯೆಯಿಂದ ಕೂಡಿ ದಾರಿತಪ್ಪಿ ನಡೆಯುವವರನ್ನು ಸಂಧಿಸಿ ಕತ್ತರಿಸದೆ ನಾಲ್ಕು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಭೂಮಂಡಲವನ್ನು ತನ್ನ ಆಜ್ಞಾಧೀನವನ್ನಾಗಿ ಮಾಡಿಕೊಳ್ಳದೆ ಋಷಿಗಳ ಯಜ್ಞಕ್ಕೆ ವಿಘ್ನಮಾಡುತ್ತಿರುವ ದುಷ್ಟ ರಾಕ್ಷಸರನ್ನು ಸ್ವಲ್ಪವೂ ಸಾವಕಾಶವಿಲ್ಲದೆ ಪ್ರತಿಭಟಿಸಿ ಕೊಂದಿಕ್ಕದೆ ತನ್ನಲ್ಲಿ ಗುಣವುಂಟೆಂದು ಹೇಳುತ್ತ ಊಟಮಾಡಿ ಮಲಗಿರುವ ಒಬ್ಬ ನಿರುದ್ಯೋಗಿಯನ್ನು ರಾಜನೆನ್ನುತ್ತಾರೆಯೇ? ವ|| ಎಂದು ಯೋಚಿಸಿ ಜೈತ್ರಯಾತ್ರೆಗೆ ಹೊರಡಬೇಕೆಂದು