________________
ಚತುರ್ಥಾಶ್ವಾಸಂ | ೨೧೧ ವ|| ಅದಲ್ಲದೆಯುಂ ಪಾಂಡುಪುತ್ರರಪೊಡೆ ಪಾಂಡುರಾಜಂಗೆ ಬೆಸಕೆಯ್ಯದುದನೆನಗೆ ಬೆಸಕೆಯ್ಯರನ್ನೆಂದುದಂ ಮಾಜುವರಲ್ಲದಾನವರ್ಗೆ ಪಟ್ಟಮಂ ಕಟ್ಟಿ ನೆಲನಂ ಪಚ್ಚುಕೊಡುವಾಗಳಡ್ಡಂ ಬರ್ಪ ಗಂಡರ ನೋಟಿನೆಂದು ಭೀಷ್ಕರ್ ಬಗ್ಗಿಸಿದೊಡೆ ದುರ್ಯೋಧನನ ಸಂಭ್ರಮಾಕುಳಿತನಾಗಿ ನೀವಂದುದನೆಂದು ಬಾಳ್ವೆನೆಂದೊಡಪ್ಪುದೆಂದುಮli - ಧರಣೀನಾರಿಗೆ ಪಾಂಡುವಿಂ ಬಲಿಯಮಿಲ್ಲಾರುಂ ಪೆಜರ್ ಗಂಡರಂ
ತಿರಲೇವಂ ಬಡೆದಿರ್ದೊಡಟ್ಟು ಕಿಡುಗುಂ ಸಪ್ತಾಂಗಮಾ ರಾಜಕ | ಕರಸಂ ಧರ್ಮಜನಕ್ಕುಮೆಂದು ನಯದಿಂ ನಿಶ್ಚಿಸಿ ಕಲ್ಯಾಣ ಕಾ
ರ್ಯರತರ್ ಕಟ್ಟಿದರಾ ಯುಧಿಷ್ಠಿರನೃಪಂಗುತ್ಸಾಹದಿಂ ಪಟ್ಟಮಂ || ೮
ವಗ ಕಟ್ಟಿ ಸೇತುಬಂಧಮಂ ತಾಗೆ ಗಂಗಾನದಿಯ ತೆಂಕಣ ಪಡುವಣ ನೆಲನಂ ನೀಮಾಳ್ವುದು ಮೂಡಣ ಬಡಗಣ ನೆಲನಂ ದುರ್ಯೋಧನನಾಳ್ಳುದೆಂದು ಧೃತರಾಷ್ಟಂ ಪೂರ್ವ ಸ್ಥಿತಿಯೊಳ್ ಪಯ್ದುಕೊಟ್ಟು ದುರ್ಯೋಧನನಷ್ಟೊಡೆ ಪೊಲ್ಲಮಾನಸಂ ನೀಮುಂ ತಾಮುಮೊಂದೆಡೆಯೊಳಿರೆ ಕಿಸುರುಂ ಕಲಹಮುಮೆಂದುಂ ಕುಂದದದು ಕಾರಣದಿಂದಿಲ್ಲಿಗಜುವತ್ತು ಯೋಜನದೊಳಿಂದ್ರಪ್ರಸ್ಥಮೆಂಬುದು ಪೊಬಿಲಲ್ಲಿಗೆ ಪೋಗಿ ಸುಖದಿಂ ರಾಜ್ಯಂಗೆಯ್ಯುತ್ತಿರಿ ಮೆಂಬುದುಮಂತೆಗೆಯ್ಮೆಂದು ಸಮಸ್ತ ಪರಿವಾರ ಪರಿವೃತರಾಗಿ
ಭೀಮನನ್ನು ಯುದ್ಧದಲ್ಲಿ ಅಹಂಕಾರದಿಂದ ದಡ್ಡರಾದ ನೀವೆಲ್ಲ ಕಾದಬಲ್ಲಿರಾ. ಧರ್ಮರಾಜನೂ ಅರ್ಜುನನೂ ಈಗಲೇ ನಿಮ್ಮನ್ನು ಹೊಸೆದು ತಿಂದು ತೋರಿಸಲಾರರೇ ?' ವಅಷ್ಟೇ ಅಲ್ಲದೆ ಪಾಂಡವರು (ತಮ್ಮ ತಂದೆಯಾದ) ಪಾಂಡುರಾಜನಿಗೆ ಮಾಡದಿದ್ದುದನ್ನು ನನಗೆ ಮಾಡುತ್ತಾರೆ. ನಾನು ಹೇಳಿದುದನ್ನು ಮೀರುವವರಲ್ಲ. ನಾನು ಅವರಿಗೆ ಪಟ್ಟವನ್ನೂ ಕಟ್ಟಿ ರಾಜ್ಯವನ್ನು ಭಾಗಮಾಡಿಕೊಡುವಾಗ ಅಡ್ಡವಾಗಿ ಬರುವ ಶೂರರನ್ನು ನೋಡಿಯೇ ಬಿಡುತ್ತೇನೆ ಎಂದು ಗದರಿಸಲು ದುರ್ಯೊಧನನು ವಿಶೇಷ ಗಾಬರಿಗೊಂಡು ನೀವು ಹೇಳಿದುದನ್ನೇ ಒಪ್ಪಿ ಬಾಳುತ್ತೇನೆ ಎಂದು ಒಪ್ಪಿಕೊಂಡನು. ೮. ಈ ಭೂದೇವಿಗೆ ಪಾಂಡುರಾಜನಾದ ಮೇಲೆ ಬೇರೆ ಒಡೆಯರಾದವರಾರೂ ಇಲ್ಲ. ಹಾಗಿರುವಾಗ ನಿಮ್ಮ ಮಾತ್ಸರ್ಯಕ್ಕೊಳಗಾದರೆ ರಾಜ್ಯದ ಸಪ್ತಾಂಗಗಳೂ ನಾಶವಾಗುತ್ತವೆ. ಈ ರಾಜ್ಯಕ್ಕೆ ಧರ್ಮರಾಯನು ರಾಜನಾಗಲಿ ಎಂದು ರಾಜನೀತಿಗನುಗುಣವಾಗಿ (ಭೀಷ್ಮಾದಿಗಳು) ಆ ಧರ್ಮರಾಜನಿಗೆ ಉತ್ಸಾಹದಿಂದ ಪಟ್ಟವನ್ನು ಕಟ್ಟಿದರು. ವಂ ರಾಮಸೇತುವಿನಿಂದ ಹಿಡಿದು ಗಂಗಾನದಿಯ ದಕ್ಷಿಣಪಶ್ಚಿಮಭಾಗದ ಭೂಮಿಯನ್ನು ನೀವು ಆಳುವುದು. ಪೂರ್ವೋತ್ತರಭಾಗದ ನೆಲವನ್ನು ದುರ್ಯೊಧನನಾಳತಕ್ಕದ್ದು ಎಂದು ಧೃತರಾಷ್ಟ್ರನು ಮೊದಲಿನ ರೀತಿಯಲ್ಲಿಯೇ ಭಾಗಮಾಡಿಕೊಟ್ಟು; ದುರ್ಯೋಧನನಾದರೆ ದುರ್ಬುದ್ದಿಯವನು. ನೀವೂ ಅವರೂ ಒಂದೇ ಕಡೆ ಇದ್ದರೆ ಅಸೂಯೆಯೂ ಕಲಹವೂ ಎಂದೂ ತಪ್ಪುವುದಿಲ್ಲ. ಆದ ಕಾರಣದಿಂದ ಇಲ್ಲಿಗೆ ಅರವತ್ತುಯೋಜನ ದೂರದಲ್ಲಿ ಇಂದ್ರಪ್ರಸ್ಥವೆಂಬ ಪಟ್ಟಣವಿದೆ. ಅಲ್ಲಿಗೆ ಹೋಗಿ ಸುಖವಾಗಿ ರಾಜ್ಯವಾಳುತ್ತಿರಿ ಎಂದನು. ಹಾಗೆಯೇ ಮಾಡುತ್ತೇವೆ ಎಂದು ಪಾಂಡವರು ಸಮಸ್ತ ಪರಿವಾರ ಸಹಿತರಾಗಿ