________________
೧೯೦ | ಪಂಪಭಾರತಂ
ವ|| ಆ ನೆಲೆಯ ಚೌಪಳಿಗೆಗಳೊಳನೇಕ ಪ್ರಾಸಾದದ ಮೇಲೆ ಚಿತ್ರದ ಪದವಿಗೆಗಳಂ ತುರುಗಲುಂ ಬಂಬಲ್ಗಳುಮಾಗೆ ಕಟ್ಟಿಸಿ ಪಚ್ಚೆಯ ಹಾರದ ತೋರಣಂಗಳಂ ದುಗುಲದ ಗುಡಿಗಳಂ ಕಟ್ಟಿಸಿ ಕಂಭಂಗಳೊಳೆಲ್ಲಂ ಸುಯ್ಯಾಣದ ಚಿನ್ನದ ಪಡೆಯ ಸಕಳವಟ್ಟೆಗಳಂ ಸುತ್ತಿಸಿ ಮುತ್ತಿನ ಮಂಡವಿಗೆಗಳನೆಡೆಯದೆತ್ತಿಸಿ ಪೊನ್ನ ಮಾಂಗಾಯ ಗೊಂಚಲ್ಗಳುಮಂ ಮುತ್ತಿನ ಬುಂಭುಕಂಗಳುಮನೆಲೆ ಕಟ್ಟಿಸಿ ಮತ್ತಮಾ ಪ್ರಾಸಾದಂಗಳ ಚೌಪಳಿಗಳ ಪೊನ್ನ ಪೊಂಗಳಿಗೆ ನೀಳು ಬೆಳ್ಳುಮಂ ತಾಳಿ ಕರ್ಪಿನೊಳುಪಾಶ್ರಯಂಬಡೆದು
ಕಂ!
ತುಲುಗಿದ ಪೂಗೊಂಚಲ ಕಾ
ದ್ರೋಣಗಿದ ಮಾವುಗಳ ಬೆಳೆದ ಕೌಂಗಿನ ಗೊನೆ ತ | ಬೆಳಗಿರೆ ಮಾಡದೊಳಲ್ಲಿಯೇ ತಿಳದುಕೊಳಲಿಂಬಿನೆಸಕಮೆಸೆದುದುಪವನಂ ||
ನಾಳೆ ಸಯಂಬರಮನ ಪಾಂ ಚಾಳಮಹೀಪಾಳನಖಿಳ ಭೂಭನ್ನಿಕರ | ಕೋಳಿಯೆ ಸಾಳೆದೊಡವನೀ
ಪಾಲರ್ ಕೆಮ್ಮೆಯ್ಯಲೆಂದು ಪವತಿಯಾದ
ವ|| ಆಗಿ ಮದಿವಸಂ ನೇಸ ಮೂಡ
C
౪౦
وب
ಕೆಂಪುಬಣ್ಣದಿಂದ ಪ್ರಕಾಶಿಸುವ ಹಾಗೆ ರಂಗಸ್ಥಳವನ್ನು ಸಿದ್ಧಪಡಿಸಿದನು. ವ|| ಆ ಸ್ಥಿರವಾದ ತೊಟ್ಟಿಯ ಮನೆಗಳ ಉಪ್ಪರಿಗೆಗಳ ಮೇಲೆ ಅನೇಕ ಚತ್ರಿತವಾದ ಬಾವುಟಗಳೂ ಗುಂಪುಗುಂಪಾಗಿ ಕಟ್ಟಿಸಿದ ಹಸಿರುಹಾರದಿಂದ ಕೂಡಿದ ತೋರಣಗಳೂ ರೇಷ್ಮೆಯ ಧ್ವಜಗಳೂ ಕಂಬಕ್ಕೆ ಸುತ್ತಿದ್ದ ಕಸೂತಿಯ ಚಿತ್ರಕಾರ್ಯ ಮಾಡಿರುವ ಜರತಾರಿವಸ್ತ್ರಗಳೂ ಚಿತ್ರದಿಂದ ಕೂಡಿದ ಬಟ್ಟೆಗಳೂ ಸೂಕ್ತಸ್ಥಾನಗಳಲ್ಲಿ ನಿರ್ಮಿಸಿದ ಮಂಟಪಗಳಲ್ಲಿ ಜೋಲಾಡುವಂತೆ ಕಟ್ಟಿಸಿದ್ದ ಚಿನ್ನದ ಮಾವಿನ ಕಾಯಿನ ಗೊಂಚಲೂ ಮುತ್ತಿನ ಕುಚ್ಚುಗಳೂ ವಿವಿಧ ಬಣ್ಣಗಳನ್ನುಂಟುಮಾಡಿ ಸುವರ್ಣಚ್ಛಾಯೆಯನ್ನು ಅಳವಡಿಸಿದುವು. ೪೧. ಒತ್ತಾಗಿ ಸೇರಿರುವ ಹೂಗೊಂಚಲೂ ಕಾಯಿಗಳ ಭಾರದಿಂದ ಬಗ್ಗಿರುವ ಮಾವುಗಳೂ ಪುಷ್ಟವಾಗಿ ಬೆಳೆದ ಅಡಿಕೆಯ ಗೊನೆಗಳೂ ಗುಂಪಾಗಿ ಕೂಡಿ ಆ ಉಪ್ಪರಿಗೆಯಲ್ಲಿಯೇ ಸೇರಿ ಬಾಗಿರಲು ಅಲ್ಲಿಯೇ ಅವುಗಳನ್ನು ಕೊಯ್ದುಕೊಳ್ಳಲು ಅನುಕೂಲವಾಗಿರುವ ರೀತಿಯಲ್ಲಿ ಆ ಉಪವನವು ಪ್ರಕಾಶಮಾನವಾಗಿದ್ದಿತು. ೪೨. ಆಗ ಪಾಂಚಾಳನಾದ ದ್ರುಪದನು ಸಮಸ್ತ ರಾಜಮಂಡಳಿಗೆ ಕ್ರಮವಾಗಿ ನಾಳೆಯ ದಿನ ಸ್ವಯಂವರವೆಂದು ಡಂಗುರ ಹೊಡೆಯಿಸಿದನು. ರಾಜರು ತಮ್ಮ ತಮ್ಮ ಶಕ್ತಿಪ್ರದರ್ಶನಮಾಡಲು ವಿಶೇಷ. ಉತ್ಸಾಹಗೊಂಡರು. ವ|| ಮಾರನೆಯ ದಿನ ಸೂರ್ಯೋದಯವಾಯಿತು.