________________
- ತೃತೀಯಾಶ್ಚಾಸಂ | ೧೮೭ ವ|| ಎಂದು ನಿಶ್ಚಯಿಸಿ ತಮ್ಮ ಬಗೆದ ಬಗೆಯೊಳ್ ಪರಾಶರಮುನೀಂದ್ರೋಪದೇಶ ಮೊಡಂಬಡೆ ಪಾಂಡವರೇಕಚಕ್ರದಿಂ ಪೊಯಮಟ್ಟು ಶಕುನಗಳೆಲ್ಲಮುತ್ತರೋತ್ತರಂ ತಿರ್ದುವಿನ ಮುತ್ತರಾಭಿಮುಖರಾಗಿ ಪಯಣಂಬೋಗಿ ಕೆಲವಾನುಂ ದಿವಸಕ್ಕೆ ಯಮುನಾನದೀತಟನಿಕಟವರ್ತಿ ಯಪ್ಪಂಗದಪರ್ಣವೆಂಬಡವಿಯೊಳಗನೆ ಬರೆವರೆ ದಿನಕರಬಂಬಾಂಬುಜಮಂಬರಸರೋವರದಿಂ ಪತ್ತುವಿಡುವುದುಂ ಕವಿದ ಕತ್ತಲೆಯಗುರ್ವಾಗೆ ತಮೋಪಶಮನನಿಮಿತ್ತಮುರಿವ ಕೊಳ್ಳಿಯಂ ಪಿಡಿದು ಜಗುನೆಯಂ ಪಾಯ್ದಾಗಳಾ ಬನಮನಾಳ್ವ ಕುಬೇರನಾಯಕನಂಗದಪರ್ಣನೆಂಬ ಗಂಧರ್ವಂ ಜಲಕ್ರೀಡೆಯಾಡುತಿರ್ದನಿಬರಿಂ ಮುಂದೆ ಬರ್ಪ ವಿಕ್ರಮಾರ್ಜುನನ ಪಾದಾಭಿಘಾತದೊಳುಚ್ಚಳಿಸುವ ನೀರ ಸಪ್ಪುಳುಮಂ ಕೇಳು ಪಿಡಿದ ಕೊಳ್ಳಿಯ ಬೆಳಗುಮಂ ಕಂಡು ಬೆಳಗಂ ಕಂಡ ಪತಂಗದಂತೆ ಮಾಣದೆಯಂದುಮll ಬನಮನಾಳ ಬನಂ ನಿಶಾಬಲಮಿದಿಂತಸದಲಂ ಧೂರ್ತನಯ್
ನಿನಗೀ ಪೊಬ್ರಳಿತ್ತ ಬರ್ಪದಟನಿಂತಾರಿತ್ತರೆಂದಾಂತೊಡಾ | ತನನಾ ಕೊಳ್ಳಿಯೊಳಿಟೊಡಂತದು ಲಯಾಂತೋಗ್ರಾಗ್ನಿಯಂತು ದನಸುಂ ಮಾಣದೆ ಬಾಗಿದಂ ಪದಯುಗಕ್ಕಾರೂಢಸರ್ವಜ್ಞನಾ || ೩೪
ವ|| ಅಂತು ತಾಗಿ ಬಾಗಿದಂತಾಗಿ ಗಂಧರ್ವಂ ಕೊಂತಿವೆರಸಲುವರುಮಂ ತನ್ನ ಬೀಡಿಂಗೊಡಗೊಂಡೊಯ್ದತಿ ಪ್ರೀತಿಯಿಂ ಬಿರ್ದನಿಕ್ಕಿಒಂದೇ ಪಟ್ಟಣದಲ್ಲಿ ಸೇರಿರುವ ಪ್ರತಾಪಶಾಲಿಗಳಾದ ಮಿತ್ರವರ್ಗಕ್ಕೂ ಶತ್ರುವರ್ಗಕ್ಕೂ - ನಮ್ಮ ಬಾಣಕೌಶಲವನ್ನು ತೋರಿಸೋಣ ವು ಎಂದು ನಿಶ್ಚಯಿಸಿಕೊಂಡು ತಾವು ಯೋಚಿಸಿದ ರೀತಿಯಲ್ಲಿಯೇ ವ್ಯಾಸಮಹರ್ಷಿಗಳ ಉಪದೇಶವೂ ಹೊಂದಿಕೊಳ್ಳಲು ಪಾಂಡವರು ಏಕಚಕ್ರಪುರದಿಂದ ಹೊರಟರು. ಶಕುನಗಳೆಲ್ಲ ತಮ್ಮ ಅಭಿವೃದ್ಧಿಯನ್ನೇ ಸೂಚಿಸಿದುವು. ಉತ್ತರದಿಕ್ಕಿಗೆ ಅಭಿಮುಖವಾಗಿ ಪ್ರಯಾಣಮಾಡಿ ಕೆಲವು ದಿವಸವಾದ ಮೇಲೆ ಯಮುನಾನದಿಯ ದಡಕ್ಕೆ ಹತ್ತಿರವಿರುವ ಅಂಗದಪರ್ಣವೆಂಬ ಕಾಡನ್ನು ಪ್ರವೇಶಿಸಿದರು. ಸೂರ್ಯಾಸ್ತವಾಯಿತು. ಕವಿದ ಕತ್ತಲೆಯು ಅತಿಶಯವಾಗಲು ಕತ್ತಲೆಯನ್ನು ಹೋಗಲಾಡಿಸುವುದಕ್ಕಾಗಿ ಉರಿಯುವ ಕೊಳ್ಳಿಯನ್ನು ಹಿಡಿದು ಯಮುನಾನದಿಯನ್ನು ಹಾಯ್ದು ಹೋದರು. ಆ ಕಾಡನ್ನು ಆಳುತ್ತಿದ್ದ ಕುಬೇರನಾಯಕ ನಾಗಿದ್ದ ಅಂಗದಪರ್ಣನೆಂಬ ಹೆಸರಿನ ಗಂಧರ್ವನು ನೀರಾಟವಾಡುತ್ತಿದ್ದನು. ಎಲ್ಲರಿಗಿಂತ ಮುಂದೆ ಬರುತ್ತಿದ್ದ ವಿಕ್ರಮಾರ್ಜುನನ ಕಾಲಿನ ತುಳಿತದಿಂದ ಮೇಲಕ್ಕೆ ಹಾರುವ ನೀರಿನ ಶಬ್ದವನ್ನು ಕೇಳಿ ಅವರು ಹಿಡಿದಿದ್ದ ಕೊಳ್ಳಿಯ ಬೆಳಗನ್ನು ನೋಡಿ ಬೆಳಕನ್ನು ಕಂಡ ಪತಂಗದ ಹುಳುವಿನಂತೆ ತಡೆಯದೆ ಅವರ ಮೇಲೆ ಬಿದ್ದನು. ೩೪. ಈ ಕಾಡು ನಾನು ಆಳುವ ಕಾಡು. ಈ ರಾಕ್ಷಸ ಬಲವಿದು ನನ್ನ ಸೈನ್ಯ, ನೀನು ದುಷ್ಟನಾಗಿದ್ದೀಯೆ; ಈ ಹೊತ್ತಿನಲ್ಲಿ ಹೀಗೆ ಬರುವಷ್ಟು ಪರಾಕ್ರಮವನ್ನು ನಿನಗೆ ಕೊಟ್ಟವರಾರು ಎಂದು ಪ್ರತಿಭಟಿಸಿದನು. ಅರ್ಜುನನು ಅವನನ್ನು ಆ ಕೊಳ್ಳಿಯಿಂದಲೇ ಹೊಡೆದನು. ಅದು ಪ್ರಳಯಕಾಲದ ಘೋರವಾದ ಬೆಂಕಿಯಂತೆ ಸುಟ್ಟಿತು. ಅವನು ಸ್ವಲ್ಪವೂ ಸಾವಕಾಶ ಮಾಡದೆ ಬಂದು ಆರೂಢಸರ್ವಜ್ಞನಾದ ಅರ್ಜುನನ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು. ವ ಹಾಗೆ ಪ್ರತಿಭಟಿಸಿ ಅಧೀನನಾಗಿ ಗಂಧರ್ವನು ಕುಂತಿಯಿಂದ ಕೂಡಿದ ಆರು ಜನವನ್ನೂ ತನ್ನ ಬಿಡಿಗೆ ಜೊತೆಯಲ್ಲಿ